ಹುಬ್ಬಳಿಯ ಕರಸೇವಕ ಬಂಧಿಸಿದ್ಧ ನಡೆ ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದದಲ್ಲಿ ಪ್ರತಿಭಟಿಸಲಾಯಿತು.
ಹೊನ್ನಾಳಿ (ಜ.07): ಹುಬ್ಬಳಿಯ ಕರಸೇವಕ ಬಂಧಿಸಿದ್ಧ ನಡೆ ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದದಲ್ಲಿ ಪ್ರತಿಭಟಿಸಲಾಯಿತು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲರ್ಪಣೆ ಮಾಡಿ, ಪಾದಯಾತ್ರೆ ಮೂಲಕ ಪೊಲೀಸ್ ಠಾಣೆಗೆ ತೆರಳಿ, ಧರಣಿ ನಡೆಸಿ ಮುತ್ತಿಗೆ ಹಾಕಿದರು.
ಕರಸೇವಕರನ್ನು ಬಂಧಿಸಿದಂತೆ ನಮ್ಮನ್ನೂ ಬಂಧಿಸಿ ಎಂಬ ಘೋಷವಾಕ್ಯದೊಂದಿಗೆ ನೂರಾರು ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸುತ್ತಿರುವಂತೆ ತಡೆಯಲು ಮುಂದಾದ ಪೊಲೀಸರು ಮತ್ತು ರೇಣುಕಾಚಾರ್ಯ ನಡುವೆ ವಾಗ್ವಾದ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮತ್ತಿತರರನ್ನು ಸಿಪಿಐ ಸುನಿಲ್‍ಕುಮಾರ ಅವರು ಬಂಧಿಸಿ, ಬಿಡುಗಡೆಗೊಳಿಸಿದರು. ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಟಿ.ಬಿ.ವೃತ್ತಕೆ ಆಗಮಿಸಿದಾಗ ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಕರ ಸೇವಕರ ಬಂಧನ ಖಂಡಿಸಿದರು. 1992ರಲ್ಲಿ ಕರಸೇವಕರಾಗಿದ್ದ ಶ್ರೀಕಾಂತ್ ಪೂಜಾರಿಯನ್ನು ಹಳೆ ಕೇಸಿನಲ್ಲಿ ವಿಚಾರಣೆಗೆ ಕರೆಸಿ, ಬಂಧಿಸಿದ್ದು ಖಂಡನೀಯ.
undefined
ಪೊಲೀಸ್ ಇಲಾಖೆ ಸಂಪೂರ್ಣ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿದ್ದು, ಸರ್ಕಾರ ಸಂಪೂರ್ಣ ಭ್ರಷ್ಟ ಹಾಗೂ ಹಿಂದೂ ವಿರೋಧಿಯಾಗಿದೆ. ಸರ್ಕಾರ ಹಿಂದೂ ಯುವಕರನ್ನು ಗುರಿಯಾಗಿಟ್ಟುಕೊಂಡಿದೆ. ಒಬ್ಬ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಬಹುದು, ಎಲ್ಲ ಹಿಂದೂಗಳನ್ನು ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ನಿಮಗೆ ತಾಕತ್ ಇದ್ದರೆ ನಮ್ಮನ್ನೂ ಬಂಧಿಸಿ ಎಂದ ರೇಣುಕಾಚಾರ್ಯ, ಕಾಂಗ್ರೆಸ್‍ನವರು ಶ್ರೀರಾಮ ಭಕ್ತರನ್ನು ಕ್ರಿಮಿನಲ್‌ಗಳಂತೆ ಕಾಣುತ್ತಿದ್ದು, ಆದೇ ಕುಕ್ಕರ್ ಬ್ಲಾಷ್ಟ್ ಮಾಡಿದವರು ಅಮಾಯಕರು ಎನ್ನುತ್ತಾರೆ. ವಿಶೇಷವಾಗಿ ಡಿ.ಕೆ.ಶಿವಕುಮಾರ್ ಇಂತಹವರನ್ನು ಬ್ರದರ್ಸ ಎಂದು ಕರೆಯುತ್ತಾರೆ ಎಂದು ಟೀಕಿಸಿದರು.
ಎಸ್‌ಡಿಪಿಐ, ಪಿಎಫ್ಐ ಕೇಸ್ ವಾಪಸ್, ಹಿಂದೂ ಸಂಘಟನೆ ಕೇಸ್ ರೀ ಓಪನ್: ಸಿ.ಟಿ.ರವಿ ಕೆಂಡಾಮಂಡಲ
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ನೆಲಹೊನ್ನೆ ಮಂಜುನಾಥ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ್, ಬೆನಕನಹಳ್ಳಿ ಮಹೇಂದ್ರಗೌಡ, ಮಾರುತಿನಾಯ್ಕ, ಕುಬೇರಪ್ಪ, ಸಿ.ಆರ್. ಶಿವಾನಂದ, ಕೆ.ರಂಗಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ, ಮುಕ್ತೆನಹಳ್ಳಿ ಕನಕದಾಸ, ಕುಳಗಟ್ಟೆ ರಂಗಪ್ಪ, ಎಸ್.ಎಸ್.ಬೀರಪ್ಪ, ಕರಿಬಸಪ್ಪ, ಜುಜ್ಯಾನಾಯ್ಕ, ಕೆ.ವಿ.ಶ್ರೀಧರ, ಶಿವಾನಂದ್, ಮಹೇಶ್ ಹುಡೇದ್ ಇತರರು ಇದ್ದರು.