
ಕಾರಟಗಿ (ನ.17) : ಸರ್ಕಾರದ ಜನವಿರೋಧಿ ನೀತಿ ಮತ್ತು ಶಾಸಕರ ವರ್ತನೆ ಖಂಡಿಸಿ ಕಾಂಗ್ರೆಸ್ ನ.17 ರಂದು ಸಿದ್ದಾಪುರದಿಂದ ಕಾರಟಗಿ ವರೆಗೆ ಜನ ಪ್ರತಿಜ್ಞಾ ಯಾತ್ರೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾನರ್‌ಗಳನ್ನು ಶಾಸಕ ಬಸವರಾಜ್ ದಢೇಸೂಗೂರ ಹಾಗೂ ಸಂಗಡಿಗರು ಮಧ್ಯರಾತ್ರಿ ಕಿತ್ತು ಹಾಕಿ ಗೂಂಡಾಗಿರಿಯ ವರ್ತನೆ ತೋರಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಶಾಸಕರು ಖುದ್ದಾಗಿ ಹೋಗಿ ಬ್ಯಾನರ್ ಕೀಳಿಸುವ ಹಂತಕ್ಕೆ ಬಂದಿದ್ದು ಶೋಚನೀಯ. ಕಾನೂನು ಉಲ್ಲಂಘಿಸಿದರೆ, ಶಾಸಕರ ಹೆಸರು ಬ್ಯಾನರ್‌ಗಳಲ್ಲಿ ಇದ್ದರೆ ಅವರು ಖುದ್ದಾಗಿ ನಮ್ಮ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿತ್ತು. ಬ್ಯಾನರ್ ಹಾಕಲು ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಕೇಳಿದ್ದೇವೆ. ಪರವಾನಗಿ ಇಲ್ಲವಾದರೆ ಸಂಬಂಧಿಸಿದ ಇಲಾಖೆಯಿಂದ ನಮಗೆ ನೋಟಿಸ್ ಕೊಡಬೇಕಾಗಿತ್ತು. ಅದನ್ನು ಬಿಟ್ಟು ಖುದ್ದಾಗಿ ಶಾಸಕರು ಮಧ್ಯರಾತ್ರಿ ಹೋಗಿ ಬ್ಯಾನರ್ ಕಿತ್ತು ಹಾಕಿ ಗೂಂಡಾಗಿರಿ ಮಾಡುತ್ತಾರೆ ಎಂದರೆ ಸಹಿಸಲು ಅಸಾಧ್ಯ ಎಂದರು.
Koppal News: ನಿರ್ವಹಣಾ ವೈಫಲ್ಯ: ಹಲವೆಡೆ ಕುಡಿವ ನೀರಿನ ಸಮಸ್ಯೆ
ಪಿಎಸ್‌ಐ ಹಗರಣದಲ್ಲಿ ಆಡಿಯೋ ವಿಷಯದ ಕುರಿತು ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ನಾವು ಬ್ಯಾನರ್‌ನಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ಕೇವಲ ಪಿಎಸ್‌ಐ ಹಗರಣ ಎಂದು ಹೇಳಿದ್ದೇವೆ. ಕಾನೂನು ಗೌರವಿಸುತ್ತೇವೆ ಎಂದು ತಂಗಡಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಪೊ.ಪಾಟೀಲ ಸೇರಿದಂತೆ ಹಲವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.