ಪಾದಯಾತ್ರೆ ಪೋಸ್ಟರ್‌ನಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಿಂದಕ್ಕೆ ಹೋಗಿದ್ದು, ಜೆಡಿಎಸ್ ಮುಂದಿದೆ. ಪಾದಯಾತ್ರೆಯೇ ಬೇಡ ಅಂದವರು ಪೋಸ್ಟರ್‌ಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಹಿಂದಕ್ಕೆ ಸರಿಸಿ ಮುಂದಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ವ್ಯಂಗ್ಯವಾಡಿದರು.
ಚನ್ನಪಟ್ಟಣ (ಆ.05): ಪಾದಯಾತ್ರೆ ಪೋಸ್ಟರ್‌ನಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಿಂದಕ್ಕೆ ಹೋಗಿದ್ದು, ಜೆಡಿಎಸ್ ಮುಂದಿದೆ. ಪಾದಯಾತ್ರೆಯೇ ಬೇಡ ಅಂದವರು ಪೋಸ್ಟರ್‌ಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಹಿಂದಕ್ಕೆ ಸರಿಸಿ ಮುಂದಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ವ್ಯಂಗ್ಯವಾಡಿದರು. ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ನಡೆಸುತ್ತಿರುವುದು ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳ ಪಾದಯಾತ್ರೆ ಎಂದು ಬಿಜೆಪಿಯ ಬಸವರಾಜ್ ಯತ್ನಾಳ್ ಹೇಳಿದ್ದಾರೆ. ಇವರು ಯಾವ ಉದ್ದೇಶಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಅಸತ್ಯ ಪ್ರೂವ್ ಮಾಡಲು ಪಾದಯಾತ್ರೆ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಮೈತ್ರಿ ಪಕ್ಷದವರಿಗೆ ಪಾದಯಾತ್ರೆ ನಡೆಸಲು ನಾಚಿಕೆ ಆಗಬೇಕು. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ೪೦% ಕಮಿಷನ್ ವಿಚಾರ ತಿಳಿದು ಜನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ನಿಮ್ಮ ಅವಧಿಯಲ್ಲಿ ನಡೆದ ಭೋವಿ, ದೇವರಾಜು ಅರಸು ನಿಗಮ ಸೇರಿದಂತೆ ಇನ್ನಿತರ ಹಗರಣದ ಲೆಕ್ಕ ಮೊದಲು ಕೊಡಿ ಎಂದು ಆಗ್ರಹಿಸಿದರು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದರೆ ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಎನುತ್ತೀರಾ. ಮುಡಾದಲ್ಲಿ ನಿಮ್ಮ ಮನೆಯವರು ೩೬ ಸೈಟು ಪಡೆದಿರುವುದಕ್ಕೆಎಚ್‌ಡಿಕೆ ಉತ್ತರಿಸಬೇಕು. ನೀವು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಒಳಮೀಸಲಾತಿಯನ್ನ ಜಾರಿಗೊಳಿಸದಿದ್ದರೆ ಕಾವೇರಿಯಿಂದ-ಭೀಮಾ ನದಿಯವರೆಗೆ ಜನಾಂದೋಲನ: ಸಂಸದ ಕಾರಜೋಳ
ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಅರಿಶಿನ ಕುಂಕುಮಕ್ಕೆ ನೀಡಿದ್ದ ಜಮೀನಿಗೆ ಪರ್ಯಾಯವಾಗಿ ಮುಡಾ ನೀಡಿದ ನಿವೇಶನ ವಿರುದ್ಧ ಇಷ್ಟೆಲ್ಲಾ ಮಾತಾಡ್ತೀರಲ್ಲಾ. ಈ ವಿಚಾರದಲ್ಲಿ ಸಿದ್ದರಾಮಯ್ಯ ಯಾವುದಾದರೂ ಕಡತಕ್ಕೆ ಸಹಿ ಮಾಡಿದ್ದಾರಾ? ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಾ? ಜನ ನಿಮ್ಮನ್ನು ತಿರಸ್ಕರಿಸಿದರು ಇನ್ನು ನಿಮಗೆ ಬುದ್ಧಿ ಬಂದಿಲ್ಲವಲ್ಲ ಎಂದು ಟೀಕಿಸಿದರು. ವಿಜಯೇಂದ್ರ ಅವರ ಪಕ್ಷದ ಬಸವರಾಜ ಪಾಟೀಲ್ ಯತ್ನಾಳ್‌ಗೆ ಮೊದಲು ಉತ್ತರ ಕೊಡಲಿ. ವಿಜಯೇಂದ್ರ ಈ ಹಿಂದೆ ಫೈಲ್‌ಗಳಿಗೆ ಸಹಿ ಹಾಕಿದ್ದು, ಬೇರೆ ಹಗರಣಗಳಲ್ಲಿ ನಿಮ್ಮ ಹೆಸರು ಬಂದಿದ್ದು ಮುಚ್ಚಿಹಾಕಿದ್ದು ಮರೆತಿದೆಯೇ? ಆದರೆ, ನಾವು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಎಲ್ಲ ಹಗರಣಗಳನ್ನು ಸರ್ಕಾರ ಬಯಲಿಗೆ ತರಲಿದೆ ಎಂದರು.
ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಬಿಜೆಪಿ- ಜೆಡಿಎಸ್ ಸೇರಿ ಬಡವರ ಪರವಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ, ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿದಂತೆ ಇವರೂ ಪಾದಯಾತ್ರೆ ಹೊರಟಿದ್ದಾರೆ. ಭ್ರಷ್ಟ ಬಿಜೆಪಿಯನ್ನು ವಿಧಾನಸಭೆ ಚುನಾವಣೆಯಲ್ಲಿ ತಿರಸ್ಕರಿಸಿರುವ ಜನ ಕಾಂಗ್ರೆಸ್‌ಗೆ ೧೩೬ ಸೀಟ್ ನೀಡಿದ್ದಾರೆ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಸಹಿ ಮಾಡಿರುವುದೋ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದೋ ಸಾಬೀತು ಮಾಡಿ. ಅದು ಬಿಟ್ಟು ಸುಮ್ಮನೆ ಅಪಪ್ರಚಾರ ಮಾಡಬೇಡಿ.
-ರಂಗನಾಥ್, ಕುಣಿಗಲ್ ಶಾಸಕ
ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ-ಜೆಡಿಎಸ್‌ನವರಿಂದ ದ್ವೇಷದ ರಾಜಕಾರಣ: ಸಚಿವ ಕೃಷ್ಣ ಬೈರೇಗೌಡ
ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಿಂದ ಜೆಡಿಎಸ್-ಬಿಜೆಪಿಯವರು ಕಂಗಾಲಾಗಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ತೆಗಳುತ್ತಿದ್ದ ಜೆಡಿಎಸ್‌ನವರು ಕೇವಲ ಒಂದು ಸಚಿವ ಸ್ಥಾನಕ್ಕಾಗಿ ತಮ್ಮ ಸಿದ್ಧಾಂತ ಬಿಟ್ಟಿದ್ದಾರೆ. ಇವರದೇ ಹತ್ತಾರು ಹಗರಣಗಳಿದ್ದು, ಅದನ್ನು ಡೈವರ್ಟ್ ಮಾಡಲು ಪಾದಯತ್ರೆ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಎಂದು ನಿರೂಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
-ಕೆ.ಜೆ.ಜಾರ್ಜ್, ಇಂಧನ ಸಚಿವ