ಬಿಜೆಪಿ ಮತ್ತು ಜೆಡಿಎಸ್ ನವರು ಏನಾದರೂ ಮಾಡಿ ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಂದರು.
ಚಿಕ್ಕಮಗಳೂರು (ಆ.05): ಬಿಜೆಪಿ ಮತ್ತು ಜೆಡಿಎಸ್ ನವರು ಏನಾದರೂ ಮಾಡಿ ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಂದರು. ಸೋಮವಾರ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿ ದರು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದೆ. ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ರಾಜ್ಯದ ಜನತೆ ನಿಮಗೆ ಅಧಿಕಾರ ನೀಡಿದ್ದು, ದ್ವೇಷ ರಾಜಕಾರಣ ಮಾಡಲೋ ರಾಜ್ಯಕ್ಕೆ ಉಪಕಾರ ಮಾಡುವುದಕ್ಕೋ ಎಂದರು.
ಸರ್ಕಾರ ಬೀಳಿಸುವುದು ಎತ್ತುವುದು ಜನ ಮಾಡುತ್ತಾರೆ. ಸರ್ಕಾರ ಬೀಳಿದುವುದೇ ನಿಮ್ಮ ಸಾಧನೆಯೇ, ನಿಮ್ಮ ಸಾಧನೆ ಕೊಡುಗೆ ಬಗ್ಗೆ ಹೇಳಿ ಎಂದರು. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿಹಾಕಲು ಗಿಮಿಕ್ ನಾಟಕಗಳನ್ನು ಮಾಡುತ್ತಿದ್ದಾರೆ. ಮೇಕೆದಾಟು, ಭದ್ರಮೇಲ್ದಂಡೆ, ಯೋಜನೆ ಬರಬೇಕಾದ ಅನುದಾನ ಕೊಡಿಸುವ ಕೆಲಸ ಮಾಡಿ ಎಂದು ತಿಳಿಸಿದರು. ಬಿಜೆಪಿ ಜೆಡಿಎಸ್ ಇಬ್ಬರು ಸೇರಿ ಜಾಯಿಂಟ್ ಆಪರೇಷನ್ ಮಾಡುತ್ತಿದ್ದಾರೆ. ಅದು ಸಕ್ಸಸ್ ಫೆಲ್ಯೂರ್ ನೋಡೋಣ, ಈ ಆಪರೇಷನ್ ಬಿಟ್ಟ ಕರ್ನಾಟಕ ಕ್ಕೆ ಪ್ರಯೋಜನವಾಗುವ ಕೆಲಸ ಮಾಡಿ ಎಂದರು.
undefined
ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ: ಬಿಜೆಪಿ ಮತ್ತು ಜೆಡಿಎಸ್ ಸೇರಿ ಪಾದಯಾತ್ರೆ ಕುರಿತು ನಾಟಕ ಮಾಡುತ್ತಿದ್ದಾರೆ ಎಂದುಕೃಷ್ಣೆ ಬೈರೆಗೌಡ ಹೇಳಿದರು. ಬಿಜೆಪಿಯ ಮೈಸೂರು ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ ಎಂಬ ಕುಮಾರಸ್ವಾಮಿ ನಿಲುವಿಗೆ ಪ್ರತಿಕ್ರಿಯಿಸಿ, ಕರ್ನಾಟಕಕ್ಕೆ ಬರಬೇಕಾಗಿರುವ ಅನುದಾನದ ಬಗ್ಗೆ ರಾಜ್ಯದ ಯಾವುದೇ ಕೇಂದ್ರ ಸಚಿವರು ಕೇಳಲಿಲ್ಲ. ಆ ಕಡೆ ಪ್ರಹ್ಲಾದ್ ಜೋಶಿ, ಈ ಕಡೆ ಕುಮಾರಸ್ವಾಮಿ ಇಬ್ಬರು ರಾಜ್ಯ ಸರ್ಕಾರವನ್ನು ಕೆಡವಲು ಕುತಂತ್ರ ಮಾಡುತ್ತಿದ್ದಾರೆ. ರಾಜ್ಯಕ್ಕೆ ನ್ಯಾಯ ಬೇಕು ಎಂದು ಧ್ವನಿ ಎತ್ತುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿಯನ್ನು ಅಡಗಿಸಲು ಬಿಜೆಪಿ ಮತ್ತು ಜೆಡಿಎಸ್ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಹೋರಾಟ ಮಾಡಲು ಸಿದ್ದ: ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ಇವತ್ತು ಹತಾಶರಾಗಿದ್ದಾರೆ. ಜೆಡಿಎಸ್‌ನವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಜೆಡಿಎಸ್‌ನ ಒಬ್ಬರು, ಬಿಜೆಪಿಯ ಒಬ್ಬರು ದೆಹಲಿಯಲ್ಲಿ ಕುಳಿತು ಕರ್ನಾಟಕಕ್ಕೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಮ್ಮ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವವರು ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ದುಡ್ಡು ಕೊಡಿಸುವುದು ಬಿಟ್ಟು ಅಲ್ಲಿ ಕುಳಿತು ನಮ್ಮ ಸರ್ಕಾರ ಬೀಳಿಸುವುದು ಹೇಗೆಂದು ಸ್ಕೆಚ್ ಹಾಕುತ್ತಿದ್ದಾರೆ. ಅವರು ಏನು ಮಾಡ್ತಾರೆ ಮಾಡಲಿ, ನಾವು ಎಲ್ಲಾ ಸವಾಲು ಎದುರಿಸಲು ತಯಾರಿದ್ದೇವೆ. ಅವರ ಹಗಲು ಕನಸು ಫಲಿಸದು ಎಂದರು.