ಸಂವಿಧಾನ ಬದಲಿಸ ಹೊರಟಿದ್ದವರು ಈಗ ಕಣ್ಣಿಗೆ ಒತ್ತಿಕೊಳಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ

By Kannadaprabha News  |  First Published Jun 10, 2024, 5:49 AM IST

ಸಂವಿಧಾನವನ್ನು ಬದಲಿಸ ಹೊರಟವರು ಪ್ರಸ್ತುತ ಅದನ್ನು ಕಣ್ಣಿಗೆ ಒತ್ತಿಕೊಳ್ಳುವ ಪರಿಸ್ಥಿತಿಗೆ ಬಂದಿರುವುದು ಪ್ರಜಾಪ್ರಭುತ್ವದ ಶಕ್ತಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 


ಬೆಂಗಳೂರು (ಜೂ.10): ಸಂವಿಧಾನವನ್ನು ಬದಲಿಸ ಹೊರಟವರು ಪ್ರಸ್ತುತ ಅದನ್ನು ಕಣ್ಣಿಗೆ ಒತ್ತಿಕೊಳ್ಳುವ ಪರಿಸ್ಥಿತಿಗೆ ಬಂದಿರುವುದು ಪ್ರಜಾಪ್ರಭುತ್ವದ ಶಕ್ತಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್‌ವಾದ) ಏರ್ಪಡಿಸಿದ್ದ 'ಪ್ರೊ.ಬಿ.ಕೃಷ್ಣಪ್ಪ 86- ಸಮಾನತೆಗಾಗಿ ಸಂಘರ್ಷ ದಿನ' ಕಾಠ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೇ ಎಲ್ಲವೂ ಎಂದು ಹೇಳಿಕೊಳ್ಳುತ್ತಿದ್ದವರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನ ಎಚ್ಚರಿಕೆ ನೀಡಿದ್ದಾರೆ. ಮತದಾರರು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದರೆ ಸದ್ಯದ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಕಳೆದ ಹತ್ತು ವರ್ಷ ಸಂವಿಧಾನ ಬದಲಾವಣೆಯ ಅಪಾಯ ಎದುರಿಸಿದ್ದೆವು. ಆದರೆ, ಇನ್ನೈದು ವರ್ಷ ಈ ಭಯ ಇರುವುದಿಲ್ಲ ಎಂದು ಹೇಳಿದರು.

ಪಕ್ಷದಲ್ಲಿದ್ದುಕೊಂಡು ನಮಗೆ ಮೋಸ ಮಾಡಿ ದೂರಾದರು: ನಮ್ಮ ಪಕ್ಷದಲ್ಲಿದ್ದುಕೊಂಡು ನಮಗೆ ಮೋಸ ಮಾಡಿದರು. ಇದು ಅಂತಿಂಥ ಮೋಸವಲ್ಲ, ಇದು ಅತ್ಯಂತ ದುಃಖಕರವಾದ ಮೋಸವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಾಮಾಣಿಕ ಕೆಲಸ ಮಾಡಿ ಹತ್ತಿರವಾಗುತ್ತಾರೆ ಎಂದು ನಂಬಿದ್ದೇವು. ಆದರೆ, ನಮಗೆ ಮೋಸ ಮಾಡುವ ಮೂಲಕ ದೂರಾದರು ಎಂದು ಸಚಿವ ಸತೀಶ ಜಾರಕಿಹೊಳಿ ಅಸಮಧಾನ ಹೊರಹಾಕಿದರು.

Tap to resize

Latest Videos

ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡ ಸದಾಶಿವ ಬುಟಾಳಿ ನಿವಾಸದ ಆವರಣದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿದ ಎಲ್ಲ ಮತದಾರರಿಗೆ, ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 

ಭೋವಿ ನಿಗಮದ ಅವ್ಯವಹಾರ ತನಿಖೆಯಾಗಲಿ: ಮತ್ತೊಂದು ಆಡಿಯೋ ಹರಿಬಿಟ್ಟ ಗೂಳಿಹಟ್ಟಿ ಶೇಖರ್‌

ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸಂಸದರೊಬ್ಬರು ಹೇಗೆ ಜನಪರ ಕೆಲಸ ಮಾಡಬೇಕು ಎಂಬುವುದನ್ನು ತೋರಿಸುತ್ತೇವೆ ಎಂದು ತಿಳಿಸಿದರು. ನಿಮ್ಮ ಭಾಗದ ಪ್ರಮುಖ ಸಮಸ್ಯೆಗಳ ಬಗ್ಗೆ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸ್ಪಂದಿಸಲಿದ್ದಾರೆ. ಅಥಣಿಯಲ್ಲಿರುವ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸದಾ ನಮ್ಮೊಂದಿಗೆ ಇರುವುದರಿಂದ ನಿಮ್ಮ ಸೇವೆಗೆ ನಾವು ಸದಾ ಸಿದ್ಧ. ನಮ್ಮ ಜನಪರ ಕಾರ್ಯಗಳನ್ನು ನೋಡಿ ನೀವು ನಮ್ಮನ್ನು ಆಯ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ನೇರವಾಗಿ ಅಥಣಿಗೆ ಬಂದು ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

click me!