* ಜೆಡಿಎಸ್ ಬಿಟ್ಟು ಹೋದವರು ಬೀದಿಪಾಲು ಗ್ಯಾರಂಟಿ
* ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪಣ
* ಗಂಗಾರತಿ ಕಾರ್ಯಕ್ರಮಕ್ಕೆ ವಾರಣಾಸಿ ತಂಡ
ವರದಿ: ಸುರೇಶ್ ಎ.ಎಲ್. ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಮೇ.11): ರಾಜ್ಯದ ನೀರಾವರಿ ಯೋಜನೆಗಳ(Irrigation Project) ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶುರುವಾದ ಜನತಾ ಜಲಧಾರೆ(Janata Jaladhare) ಕಾರ್ಯಕ್ರಮ ಇದೀಗ ಅಂತಿಮ ಘಟ್ಟ ತಲುಪಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಜಲಮೂಲಗಳಿಂದ ಪವಿತ್ರ ಜಲಸಂಗ್ರಹ ಮಾಡಿ ಅದನ್ನು ಜೆಪಿ ಭವನದಲ್ಲಿ ಪ್ರತಿಷ್ಟಾಪನೆ ಮಾಡಲು ಜೆಡಿಎಸ್(JDS) ನಾಯಕರು ಸಿದ್ದತೆ ನಡೆಸಿದ್ದಾರೆ.
undefined
ಮೇ. 13 ರಂದು ನೆಲಮಂಗಲದಲ್ಲಿ ಜಲಧಾರೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ನಡೆಯಲಿದೆ . ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮಾರು ಐದರಿಂದ ಆರು ಲಕ್ಷ ಜನರನ್ನು ಸೇರಿಸಿ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಸುವುದಾಗಿ ತಿಳಿಸಿದರು. ನಾಲ್ಕು ಸಾವಿರ ಚದುರ ಅಡಿಯ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ವೇದಿಕೆಯ ಹಿಂಭಾಗ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ವೇದಿಕೆಯ ಮುಂಬಾಗದಲ್ಲಿ ಕೃತಕ ಜಲಪಾತದ ಸೆಟ್ ಹಾಕಲಾಗುತ್ತದೆ. ಜಲಧಾರೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಬಿಂಬಿಸುವ ಸೆಟ್ ಇದಾಗಿರುತ್ತದೆ.
ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತಂದು ಕೊನೆಯುಸಿರು ಬಿಡುವಾಸೆ: ಎಚ್.ಡಿ.ದೇವೇಗೌಡ
ಗಂಗಾರತಿ ಕಾರ್ಯಕ್ರಮಕ್ಕೆ ವಾರಣಾಸಿ ತಂಡ
ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಈ ಜನತಾ ಜಲಧಾರೆ ಕಾರ್ಯಕ್ರಮ ರಾತ್ರಿವರೆಗೂ ನಡೆಯಲಿದೆ. ಸಂಜೆ ಆರು ಗಂಟೆಗೆ ನಡೆಯಲಿರುವ ಗಂಗಾರತಿ ಇಡೀ ಕಾರ್ಯಕ್ರಮದ ಹೈಲೈಟ್ ಆಗಿರಲಿದೆ. ಈ ಕಾರ್ಯಕ್ರಮ ನಡೆಸಿಕೊಡಲೆಂದೇ ವಾರಾಣಸಿಯಿಂದ 25 ಜನರ ತಂಡ ಬರಲಿದೆ. ಕಾರ್ಯಕ್ರಮ ನಡೆಯುವ ದಿನವೇ ಅವರನ್ನು ಫ್ಲೈಟ್ ನಲ್ಲಿ ಕರೆಸಲಾಗುತ್ತದೆ. ಸುಮಾರು ಐದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ(Bengaluru) ಹೊರವಲಯದಲ್ಲಿ ಈ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಹಾಸನ(Hassan) ಮತ್ತು ಶಿವಮೊಗ್ಗ ಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಗುರುವಾರ ಮತ್ತು ಶುಕ್ರವಾರ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ. ಅದಕ್ಕೆಂದೇ ಮುಂಚಿತವಾಗಿ ಮಾರ್ಗವನ್ನು ಬದಲಾವಣೆ ಮಾಡಲು ಪೋಲಿಸ್(Police) ಇಲಾಖೆ ಬಳಿ ಕೋರಲಾಗಿದೆ. ಮಾಗಡಿ ರಸ್ತೆ ಮೂಲಕ ಪ್ರಯಾಣಿಸಲು ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತದೆ.
ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪಣ
ಇನ್ನು ಜಲಧಾರೆ ವಿಚಾರಕ್ಕೆ ಬರುವುದಾದರೆ, ರಾಜ್ಯದಲ್ಲಿ(Karnataka) ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಿದ ಪಕ್ಷಗಳು ನೀರಾವರಿ ಯೋಜನೆಗಳ ಕಡೆ ಗಮನವನ್ನೇ ಕೊಟ್ಟಿಲ್ಲ. ಕೇವಲ ರಾಜಕಾರಣಕ್ಕಾಗಿ(Politics) ನೀರಾವರಿ ಯೋಜನೆಗಳನ್ನು ಬಳಸಿಕೊಂಡಿವೆ. ಜೆಡಿಎಸ್‌ಗೆ ಈ ಭಾರಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಕೊಟ್ಟರೆ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಪಣವನ್ನು ಕುಮಾರಸ್ವಾಮಿ ತೊಟ್ಟಿದ್ದಾರೆ. ಒಂದು ವೇಳೆ ಮಾತಿಗೆ ತಪ್ಪಿದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುವ ಸವಾಲನ್ನೂ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಬದ್ದತೆ ಇಲ್ಲ , ಬಿಜೆಪಿ(BJP) ಜೊತೆ ಮೈತ್ರಿ ಸರ್ಕಾರ ಮಾಡಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಕಳಸಾ ಬಂಡೂರಿಗೆ ಅನುಮತಿ ಕೊಟ್ಟಿದ್ದೆ, ಆದರೆ ಕೆಲವು ತಾಂತ್ರಿಕ ಸಮಸ್ಯೆ ಗಳು ಬಂದಾಗ ಅದನ್ನು ಪರಿಹಾರ ಮಾಡಲು ಬಿಜೆಪಿ ಮುಂದಾಗದೇ ಸಮಸ್ಯೆ ಯನ್ನು ಜೀವಂತವಾಗಿ ಇರಿಸಲು ಪ್ರಯತ್ನ. ಮಾಡಿತು. ಕಾಂಗ್ರೆಸ್ ಕೂಡಾ ಇದೇ ದಾರಿ ಹಿಡಿಯಿತು. ಹಾಗಾಗೇ ಜೆಡಿಎಸ್ ಗೆ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟು ನೋಡಿ. ಮಾತು ಕೊಟ್ಟಂತೆ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ತಿ ಮಾಡುವೆ ಎಂದಿದ್ದಾರೆ ಕುಮಾರಸ್ವಾಮಿ.
ರಾಜ್ಯದಲ್ಲಿ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ದೇವೇಗೌಡ: ವೈ.ಎಸ್.ವಿ.ದತ್ತಾ
ಜೆಡಿಎಸ್ ಬಿಟ್ಟು ಹೋದವರು ಬೀದಿಪಾಲು ಗ್ಯಾರಂಟಿ
ಜೆಡಿಎಸ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ, ನಂತರ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಮಾಡಲು ಹೋದರೆ ಅಂತಹವರು ಬೀದಿಪಾಲಾಗುತ್ತಾರೆ ಅಂತಾ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಈಗಾಗಲೇ ಅಧಿಕಾರ ಮತ್ತಿತರ ಆಮಿಷಗಳಿಗೆ ಪಕ್ಷ ತೊರೆದು ಹೋದವರು ಇಂದಿಗೂ ಯಾವ ಸ್ಥಾನಮಾನ ಸಿಗದೇ ಅಲೆದಾಡುತ್ತಿದ್ದಾರೆ .ಇದಕ್ಕೆ ಅನೇಕ ಉದಾಹರಣೆಗಳಿವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಕೂಡಾ ಹಳೆಯ ಮೈಸೂರು(Mysuru) ಭಾಗದ ಜೆಡಿಎಸ್ ನಾಯಕರನ್ನು ಸೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ಅನ್ನು ಮುಗಿಸುವುದೇ ರಾಷ್ಟ್ರೀಯ ಪಕ್ಷಗಳ ಗುರಿ. ಆದರೆ ಯಾರೋ ಕೆಲವು ನಾಯಕರನ್ನು ಸೆಳೆದ ಮಾತ್ರಕ್ಕೆ ಜನರೂ ಅವರ ಹಿಂದೆ ಹೋಗ್ತಾರೆ ಎನ್ನುವುದು ಅವರ ಭ್ರಮೆ. ಜನ ಜೆಡಿಎಸ್ ಪಕ್ಷದ ಪರವಾಗಿ ಇದ್ದಾರೆ. ಈ ಸಲ ಜೆಡಿಎಸ್ ಸಂಪೂರ್ಣ ಜನಬೆಂಬಲದೊಂದಿಗೆ ಅಧಿಕಾರ ಕ್ಕೆ ಬರುತ್ತೆ ಅಂತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.