ಎಲ್ಲ ಜಾತಿಯಲ್ಲಿನ ಬಡವರಿಗೆ ಯೋಜನೆ ರೂಪಿಸಲು ಗಣತಿ ಮಾಡಲಾಗಿದೆಯೇ ಹೊರತು ಅಕ್ಷರಶಃ ಇದು ಜಾತಿ ಗಣತಿ ಅಲ್ಲ. ಎಲ್ಲ ಜಾತಿಯಲ್ಲಿನ ಬಡವರಿಗೆ ಸರ್ಕಾರದಿಂದ ಯೋಜನೆ ರೂಪಿಸಲು ಮಾಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಕಾರಟಗಿ (ಏ.14): ಎಲ್ಲ ಜಾತಿಯಲ್ಲಿನ ಬಡವರಿಗೆ ಯೋಜನೆ ರೂಪಿಸಲು ಗಣತಿ ಮಾಡಲಾಗಿದೆಯೇ ಹೊರತು ಅಕ್ಷರಶಃ ಇದು ಜಾತಿ ಗಣತಿ ಅಲ್ಲ. ಎಲ್ಲ ಜಾತಿಯಲ್ಲಿನ ಬಡವರಿಗೆ ಸರ್ಕಾರದಿಂದ ಯೋಜನೆ ರೂಪಿಸಲು ಮಾಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಜಾತಿಯಲ್ಲೂ ಬಡವರು ಇದ್ದಾರೆ. ಎಲ್ಲ ಜಾತಿಯಲ್ಲಿನ ಬಡವರಿಗೆ ಯೋಜನೆ ರೂಪಿಸಲು ಗಣತಿ ಮಾಡಲಾಗಿದೆ.
ವರದಿ ವಿಚಾರವಾಗಿ ಸಮಗ್ರವಾಗಿ ಚರ್ಚೆ ಮಾಡಲು ಮುಖ್ಯಮಂತ್ರಿ ಏ.17ರಂದು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಭಾನುವಾರ ಸಂಜೆ ಒಳಗೆ ಎಲ್ಲ ಮಂತ್ರಿಗಳಿಗೂ ವರದಿ ಪ್ರತಿ ಕಳುಹಿಸುತ್ತೇವೆ. ಇದರಿಂದ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ಒಟ್ಟು 1.66 ಲಕ್ಷ ನೌಕರರು ಸಮೀಕ್ಷೆಯಲ್ಲಿ ಭಾಗಿಯಾಗಿ ಕೆಲಸ ಮಾಡಿದ್ದಾರೆ. ಈ ಪೈಕಿ 22 ಸಾವಿರ ಶಿಕ್ಷಕರು ಇದ್ದಾರೆ. ಎಲ್ಲರೂ ಯಾವುದಾದರೂ ಒಂದೇ ಜಾತಿಯವರು ಮಾಡಿರುವ ಸಮೀಕ್ಷೆ ಇದಲ್ಲ.
ಶೇ.70ರಷ್ಟಿರುವ ಒಬಿಸಿ ಮೀಸಲು ಶೇ.51ಕ್ಕೆ ಹೆಚ್ಚಿಸಲು ಶಿಫಾರಸು
ಮನೆ- ಮನೆಗೆ ಹೋಗಿ, ಅವರ ಪ್ರತಿ ಕುಟುಂಬದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ- ಗತಿ ಬಗ್ಗೆ ಮಾಹಿತಿ ಪಡೆದು ಕುಟುಂಬದ ಸಹಿ ಪಡೆಯಲಾಗಿದೆ. ವರದಿ ವಿರೋಧ ಮಾಡುವವರು ಕೇಳಿದರೆ ಎಲ್ಲವನ್ನೂ ತೋರಿಸುತ್ತೇವೆ ಎಂದರು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಡಿ.ಕೆ.ಶಿವಕುಮಾರ ವಿರೋಧ ಮಾಡಿಲ್ಲ. ಬಡವರಿಗೆ ₹2 ಕೊಟ್ಟರೂ ವಿರೋಧ ಮಾಡುವ, ಬಡವರ ಆರ್ಥಿಕ ಅಭಿವೃದ್ಧಿ ಸಹಿಸದ ಬಿಜೆಪಿಗರು ಮಾತ್ರ ಈ ಸಮೀಕ್ಷೆ ವಿರೋಧ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಬನವಾಸಿಯಲ್ಲಿ ಪಂಪ ಭವನ: ಕದಂಬರ ನೆಲವಾದ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುವುದು. ಪಂಪವನ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ₹೫೦ ಲಕ್ಷ ಮಂಜೂರು ಮಾಡಿದ್ದು, ಬನವಾಸಿ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ಬನವಾಸಿ ಮಯೂರ ವರ್ಮ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕದಂಬೋತ್ಸವ ಹಾಗೂ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ। ಬಿ.ಎ.ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪಂಪ ಭವನ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಸ್ಥಳ ಗುರುತಿಸಿ, ಪ್ರಸ್ತಾವನೆ ಸಲ್ಲಿಸಲಿ ಎಂದರು.
ಗದಗ ಗ್ರಾಮೀಣ ವಿವಿಗೆ ಸಾರಥಿಯೂ ಇಲ್ಲ, ದುಡ್ಡೂ ಇಲ್ಲ: ಸರ್ಕಾರದಿಂದ ಅಲ್ಪಸ್ವಲ್ಪ ಅನುದಾನ
ಪಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿವೇಕ್ ರೈ ಅವರು, ಕನ್ನಡದ ನೆಲದಲ್ಲಿ ಪಂಪ ಪ್ರಶಸ್ತಿ ಪಡೆದಿರುವುದಕ್ಕೆ ಬದುಕಿನಲ್ಲಿ ಧನ್ಯತೆ ಪಡೆದಿದ್ದೇನೆ. ಬನವಾಸಿಯು ಬಹುಸಂಸ್ಕೃತಿಯ ಹಾಗೂ ಬಹುಧರ್ಮದ ಪವಿತ್ರ ತಾಣವಾಗಿದೆ. ಬನವಾಸಿಯಲ್ಲಿ ಪಂಪ ತಿಳಿಸಿದಂತೆ ಮಾವು, ಮಲ್ಲಿಗೆಯ ಕಂಪು ಹರಡುವಂತೆ ಇಲ್ಲಿ ಆ ಗಿಡಗಳನ್ನು ನೆಡುವಂತಾಗಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ, ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿದರು. ಎಂಸಿಎ ಅಧ್ಯಕ್ಷ ಹಾಗೂ ಕಾರವಾರ ಕ್ಷೇತ್ರ ಶಾಸಕ ಸತೀಶ ಸೈಲ್, ವಿಪ ಸದಸ್ಯ ಶಾಂತಾರಾಮ ಸಿದ್ದಿ ಪಾಲ್ಗೊಂಡಿದ್ದರು.