* ಗೃಹಸಚಿವರಾದ ಬೆನ್ನಿಗೇ ಗುಡುಗಿದ ಆರಗ ಜ್ಞಾನೇಂದ್ರ
* ಇದು ನರೇಂದ್ರ ಮೋದಿಯವರ ಜಮಾನ ಗೃಹ ಸಚಿವ
* ಚಿಕ್ಕಮಗಳೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರಗೆ ಪ್ರತಿಕ್ರಿಯೆ
ಚಿಕ್ಕಮಗಳೂರು, (ಆ.07): ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಇದೇ ಮೊದಲ ಬಾರಿಗೆ ಸಚಿವರಾಗಿದ್ದು, ಅದು ಮೊದಲ ಸಲವೇ ಗೃಹ ಖಾತೆ ಸಿಕ್ಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು, ಇದು ನರೇಂದ್ರ ಮೋದಿಯವರ ಜಮಾನ ಎಂದು ಗುಡುಗಿದ್ದಾರೆ.
ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಎಚ್ಚರಿಕೆ ಕೊಟ್ಟ ಸಚಿವ
ಚಿಕ್ಕಮಗಳೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರ ಜತೆ ಮಾತನಾಡಿದ ಅವರು, ಸೆಟಲೈಟ್ ಕಾಲ್ ಎಲ್ಲಿಂದ ಬಂದರೂ ಎನ್‌ಐಎ ತಂಡದವರು ಬಂದು ಪ್ರಕರಣವನ್ನು ಭೇದಿಸುತ್ತಾರೆ. ಮೊದಲು ಈ ರೀತಿ ಆಗುತ್ತಿರಲಿಲ್ಲ, ಈಗ ಎಲ್ಲ ಬದಲಾಗಿದೆ ಎಂದರು.
ಎಲ್ಲ ತಂತ್ರ ಮುಗಿಸುವಂಥ ಕಾರ್ಯ ಆಗುತ್ತದೆ. ಪೊಲೀಸರನ್ನು ಇನ್ನಷ್ಟು ಅಲರ್ಟ್ ಮಾಡುತ್ತೇವೆ. ಯಾವುದೇ ವಿಧ್ವಂಸಕ ಕೃತ್ಯ ನಡೆಯಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಖಾತೆ ಹಂಚಿಕೆ ಕುರಿತ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರ ಆಪೇಕ್ಷೆಯಂತೆ ಖಾತೆ ಹಂಚಲು ಸಾಧ್ಯವಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಕೊಟ್ಟು, ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಮಜಾಯಿಷಿ ನೀಡಿದರು.