ಇದು ಬರೀ ಘೋಷಣೆಯ ಬಜೆಟ್‌: ಎಂ.ಬಿ. ಪಾಟೀಲ

By Kannadaprabha News  |  First Published Feb 2, 2023, 8:00 PM IST

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸಿರುವುದು ಸ್ವಾಭಾವಿಕ. ಏಕೆಂದರೆ ಅದು ರಾಷ್ಟ್ರೀಯ ಯೋಜನೆಗೆ ಸೇರಬೇಕಾದ ಎಲ್ಲ ಅರ್ಹತೆ ಪಡೆದಿದೆ. ಆದ್ದರಿಂದ, ಅದು ಸಾಧ್ಯವಾಗಿದೆ. ಸರ್ಕಾರಕ್ಕೆ ನಿಜವಾಗಿಯೂ ಇಚ್ಚಾಶಕ್ತಿಯಿದ್ದರೆ ಉತ್ತರ ಕರ್ನಾಟಕದ ಜೀವನಾಡಿ ಅತೀ ಅಗತ್ಯವಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕಾಗಿತ್ತು: ಎಂ.ಬಿ. ಪಾಟೀಲ 


ವಿಜಯಪುರ(ಫೆ.02):  ಕೇಂದ್ರ ಬಜೆಟ್‌ ಕೇವಲ ಘೋಷಣೆಯ, ಜನಪ್ರಿಯತೆ ಬಜೆಟ್‌ ಆಗಿದೆ. ಈ ಬಜೆಟ್‌ನಲ್ಲಿ ಹೊಸ ವಿಚಾರಗಳು ಇಲ್ಲ. ಜನರಿಗೆ ಭಾರವಾಗಿರುವ ಪೇಟ್ರೋಲ್‌, ಡಿಸೇಲ್‌, ಪಡಿತರ, ಎಣ್ಣೆ, ದಿನಬಳಕೆ ಗ್ಯಾಸ್‌ಗಳ ಬೆಲೆಯಲ್ಲಿ ಇಳಿಕೆ ಇಲ್ಲದಿರುವುದು ನಿರಾಸೆ ಮೂಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. 

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸಿರುವುದು ಸ್ವಾಭಾವಿಕ. ಏಕೆಂದರೆ ಅದು ರಾಷ್ಟ್ರೀಯ ಯೋಜನೆಗೆ ಸೇರಬೇಕಾದ ಎಲ್ಲ ಅರ್ಹತೆ ಪಡೆದಿದೆ. ಆದ್ದರಿಂದ, ಅದು ಸಾಧ್ಯವಾಗಿದೆ. ಸರ್ಕಾರಕ್ಕೆ ನಿಜವಾಗಿಯೂ ಇಚ್ಚಾಶಕ್ತಿಯಿದ್ದರೆ ಉತ್ತರ ಕರ್ನಾಟಕದ ಜೀವನಾಡಿ ಅತೀ ಅಗತ್ಯವಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕಾಗಿತ್ತು. ಆದರೆ, ಅದು ಆಗಿಲ್ಲ. ಇದು ಇಡೀ ಕೃಷ್ಣಾ ಕೊಳ್ಳದ ಜನತೆಗೆ ನಿರಾಶೆ ತಂದಿದೆ ಎಂದಿದ್ದಾರೆ.

Latest Videos

undefined

Union Budget: ಉದ್ಯೋಗಿಗಳಿಗೆ ಕೊಂಚ ರಿಲೀಫ್, ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.30ರಿಂದ ಶೇ.20ಕ್ಕೆ ಇಳಿಕೆ

ಮಧ್ಯಮ ವರ್ಗದ ಮೇಲಿನ ತೆರಿಗೆ ವಿನಾಯಿತಿ ಸ್ಪಲ್ಪ ಮಟ್ಟಿನ ಸಮಾಧಾನ ಮೂಡಿಸಿದೆಯೇ ಹೊರತು, ಮಧ್ಯಮ ವರ್ಗದವರ ಜನರ ಜೀವನ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಅವರನ್ನು ಮೇಲಕ್ಕೆತ್ತುವ ಕೆಲಸ ಆಗಿಲ್ಲ. ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ಯುವ ಜನರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಬಜೆಟ್‌ ಏನನ್ನು ನೀಡಿಲ್ಲ. ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್‌ ಆಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸಾಲವು ಒಂದು ವಷÜರ್‍ದ ಹಿಂದೆ ಶೇ.49.1ರಿಂದ ಜಿಡಿಪಿಯ ಶೇ.59.3ರಷ್ಟು ದಾಟಿದೆ. ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಉತ್ಪಾದನಾ ಎನ್‌ಪಿಎಗಳ ಪುನರುಜ್ಜೀವನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ಶೇ.4ರಿಂದ 5ರಷ್ಟು ವಿನಿಯೋಗವನ್ನು ಬಯಸುತ್ತದೆ. ಆದರೆ ಅದು ಶೇ.2 ಕ್ಕಿಂತ ಕಡಿಮೆಯಿದೆ ಎಂದು ಬಜೆಟ್‌ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

click me!