ಈ ಚುನಾವಣೆ ನನ್ನ ಕೊನೆಯ ಎಲೆಕ್ಷನ್‌ ಎಂದ ಬಿಜೆಪಿ ನಾಯಕ..!

By Kannadaprabha News  |  First Published Mar 21, 2023, 8:30 PM IST

ಮುಸ್ಲಿಂ ಸಮುದಾಯದವರನ್ನು ಬಿಟ್ಟು ಕಳೆದ ಉಪಚುನಾವಣೆಯಲ್ಲಿ ಎಂಎಲ್‌ಎ ಆಗಿದ್ದೇನೆಂಬ ಕೊರಗು ನನಗಿತ್ತು. ಅದು ಇಂದು ಸಾವಿರಾರೂ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೂಡುವಿಕೆಯಿಂದ ದೂರವಾಗಿದೆ. ಎಲ್ಲ ಸಮುದಾಯವನ್ನು ಒಂದುಗೂಡಿಸಿ ನಾನು ರಾಜಕೀಯ ಮಾಡುತ್ತಿದ್ದೇನೆ. ಸತತವಾಗಿ ಮುಸ್ಲಿಂ ಸಮುದಾಯದ ಬೆಂಬಲದೊಂದಿಗೆ ಶಾಸಕನಾಗುತ್ತ ಬಂದಿದ್ದೇನೆ: ರಮೇಶ ಜಾರಕಿಹೊಳಿ 


ಗೋಕಾಕ(ಮಾ.21):  ಈ ಚುನಾವಣೆ ನನ್ನ ಕೊನೆಯ ಚುನಾವಣೆ ಇದ್ದ ಕಾರಣ ಎಲ್ಲ ಸಮುದಾಯದ ಜನರು ನನಗೆ ಬೆಂಬಲ ವ್ಯಕ್ತಪಡಿಸಬೇಕು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದರು.

ನಗರದ ಲಕ್ಕಡಗಲ್ಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಭಾನುವಾರ ಹಮ್ಮಿಕೊಂಡ ಗೋಕಾಕ ಮತಕ್ಷೇತ್ರದ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರನ್ನು ಬಿಟ್ಟು ಕಳೆದ ಉಪಚುನಾವಣೆಯಲ್ಲಿ ಎಂಎಲ್‌ಎ ಆಗಿದ್ದೇನೆಂಬ ಕೊರಗು ನನಗಿತ್ತು. ಅದು ಇಂದು ಸಾವಿರಾರೂ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೂಡುವಿಕೆಯಿಂದ ದೂರವಾಗಿದೆ. ಎಲ್ಲ ಸಮುದಾಯವನ್ನು ಒಂದುಗೂಡಿಸಿ ನಾನು ರಾಜಕೀಯ ಮಾಡುತ್ತಿದ್ದೇನೆ. ಸತತವಾಗಿ ಮುಸ್ಲಿಂ ಸಮುದಾಯದ ಬೆಂಬಲದೊಂದಿಗೆ ಶಾಸಕನಾಗುತ್ತ ಬಂದಿದ್ದೇನೆ. ಜಾರಕಿಹೊಳಿ ಕುಟುಂಬ ಮುಸ್ಲಿಂ ಸಮುದಾಯದ ಜನರ ಜೊತೆಗೆ ತುಂಬಾ ಅನ್ಯುನ್ಯತೆಯ ಸಂಬಂಧ ಹೊಂದಿದೆ. ಈ ದೇಶ ನಮ್ಮದು, ನಮ್ಮನ್ನು ಯಾರು ಹೊರಹಾಕಲು ಸಾಧ್ಯವಿಲ್ಲ ಎಂದರು.

Tap to resize

Latest Videos

ಈಶ್ವರಪ್ಪ ಮಗ ಚಿಕ್ಕವನಿದ್ದಾನೆ: ಶಿವಮೊಗ್ಗ ಟಿಕೆಟ್‌ ನನಗೆ ಫಿಕ್ಸ್ ಎಂದ ಆಯನೂರು ಮಂಜುನಾಥ್

ರಾಜ್ಯದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದು, ಅದು ಗೋಕಾಕದಿಂದಲೇ ಪ್ರಾರಂಭ ಮಾಡಿ ಇತಿಹಾಸ ನಿರ್ಮಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದವರನ್ನು ಕೂಡಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದ್ದಾರೆ. ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೈಟಕ್‌ನಲ್ಲಿ ಮೋಹನ ಭಾಗವತ ಅವರು ಸಹ ಮುಸ್ಲಿಂ ಸಮುದಾಯದವರನ್ನು ಒಗ್ಗೂಡಿಸುವ ಮಾತು ಹೇಳಿದ್ದಾರೆ. ಜಾತಿ ಸಂಘರ್ಷ ಬಿಟ್ಟು ನಾವೆಲ್ಲರೂ ಒಂದಾಗಬೇಕು. ಪ್ರತಿ ರಾಜ್ಯದಲ್ಲಿ ಹಿಂದು ಮುಸ್ಲಿಂ ಒಂದಾಗಿ ಪಕ್ಷವನ್ನು ಕಟ್ಟಬೇಕು. ಈ ಸಂಘಟನೆ ಚುನಾವಣೆಗೆ ಮಾತ್ರ ಸೀಮಿತವಾಗದೇ ಬರುವ ದಿನಗಳಲ್ಲಿ ಒಂದಾಗಿ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಲಖನ ಜಾರಕಿಹೊಳಿ ಮಾತನಾಡಿ, ಈಗಾಲೇ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಮುಂದೆ ಆಮ್‌ ಆದ್ಮಿ ಪಕ್ಷ ಹೀಗೆ ಎಲ್ಲ ಪಕ್ಷಗಳನ್ನು ಸುತ್ತಾಡಿ ಬರೀ ಗೊಳ್ಳು ಮಾತುಗಳನ್ನು ಆಡುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಹೋದರ ಶಾಸಕ ರಮೇಶ ಜಾರಕಿಹೊಳಿ ಜೊತೆಗೆ ನಾವು ಇರಬೇಕು. ಅವರು ಹಿಂದು-ಮುಸ್ಲಿಂ ಸಮಾಜದವರು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಗೋಕಾಕ ಮತಕ್ಷೇತ್ರದಲ್ಲಿ ಎಲ್ಲ ಸಮಾಜದವರು ಅಣ್ಣ-ತಮ್ಮಂದಿರಂತೆ ಇದ್ದೇವೆ ಎಂದರು.

ಸಮಾಜದ ಮುಖಂಡರುಗಳಾದ ಮೋಶಿನ ಖೋಜಾ, ಶರಪೋದ್ದೀನ್‌ ನರೋ, ಮುನ್ನಾ ಮಾಂಜರಿ, ಸಾದಿಕ ಹಲ್ಯಾಳ ಮಾತನಾಡಿ, ಕಳೆದ 30 ವರ್ಷಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ಬಾರಿಯು ಸಹ ಸಮಾಜದ ಜನರು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ರಮೇಶ ಜಾರಕಿಹೊಳಿ ಅವರನ್ನು ಶಾಸಕ, ಸಚಿವರನ್ನಾಗಿ ಮಾಡಬೇಕು ಎಂದು ಕೋರಿದರು.

ಮುಫ್ತಿ ಖಾಜಾಸಾಬ್‌ ಸುಳೇಭಾವಿ ಮತ್ತು ಕಾರಿ ಜಬೀವುಲ್ಲಾ ಸಾನ್ನಿಧ್ಯ ವಹಿಸಿ ಆಶೀರ್ವರ್ಚನ ನೀಡಿದರು. ವೇದಿಕೆಯಲ್ಲಿ ಅಂಜುಮನ್‌ ಕಮಿಟಿ ಅಧ್ಯಕ್ಷ ಜಾವೇದ್‌ ಗೋಕಾಕ, ಮೌಲಾನಾ ಆಸೀಫ್‌ ಶಾಬಾಶಖಾನ, ನಗರಸಭೆ ಸದಸ್ಯರಾದ ಅಬ್ಬಾಸ್‌ ದೇಸಾಯಿ, ಕೆ.ಎಂ.ಗೋಕಾಕ, ಯೂಸುಫ್‌ ಅಂಕಲಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರುಗಳಾದ ಎಚ್‌.ಡಿ.ಮುಲ್ಲಾ, ಎಂ.ಜಿ.ಮುಜಾವರ, ಮಲ್ಲಿಕ ಪೈಲವಾನ್‌, ಇಲಾಹಿ ಖೈರದಿ, ಕಾಶಿಮ್‌ ಖಲೀಫ, ಅಬ್ದುಲವಹಾಬ್‌ ಜಮಾದಾರ, ಹಸೇನ್‌ ಫನಿಬಂದ್‌, ಅಬ್ದುಲಸತ್ತಾರ ಶಾಬಾಶಖಾನ, ದಾದಾಪೀರ್‌ ಶಾಬಾಶಖಾನ ಸೇರಿದಂತೆ ನಗರದ 43 ಮಸೀದಿಗಳ ಮಕಶೋರಗಳು, ಮುಖ್ಯಸ್ಥರು ಉಪಸ್ಥಿತರಿದ್ದರು.

ಅದ್ಧೂರಿ ಬೈಕ್‌ ಮೆರವಣಿಗೆ

ಕಾರ್ಯಕ್ರಮಕ್ಕೂ ಮೊದಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಯುವಕರು ಸೇರಿಕೊಂಡು ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಅಮರನಾಥ ಜಾರಕಿಹೊಳಿ ಅವರನ್ನು ಶಾಸಕರ ಕಚೇರಿಯಿಂದ ಲಕ್ಕಡಗಲ್ಲಿ ಮೈದಾನದವರೆಗೆ ಬೈಕ್‌ ಮೆರವಣಿಗೆ ಮೂಲಕ ಕರೆದುಕೊಂಡು ಬಂದರು.

ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಕಾಕ ನಗರವನ್ನು ಬೆಳೆಸೋಣ. ಮಳೆಗಾಲದಲ್ಲಿ ನಗರಕ್ಕೆ ನುಗ್ಗಿತ್ತಿರುವ ನೀರನ್ನು ತಡೆಯಲು ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಅತೀ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ನಗರಸಭೆ, ತಾಪಂ ಹಾಗೂ ಗ್ರಾಮ ಪಂಚಾಯತಿ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಎಲ್ಲ ಸಮಾಜದವರನ್ನು ನ್ಯಾಯ ಸಿಗುವಂತೆ ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಗೆಲುವು ಶತಸಿದ್ಧವಾಗಿದೆ. ಮುಂದೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಅಂತ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

ಬಿಜೆಪಿ, ಕಾಂಗ್ರೆಸ್ ಆಯ್ತು ಇದೀಗ ಮೂಡಿಗೆರೆ ಜೆಡಿಎಸ್‌ನಲ್ಲೂ ಬಂಡಾಯದ ಕಾವು!

ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾಗದೇ ಒಂದೇ ಕಡೆ ಮತ ಚಲಾಯಿಸಿ ರಮೇಶ ಜಾರಕಿಹೊಳಿಗೆ ಬೆಂಬಲ ನೀಡಬೇಕು. ಈ ಬಾರಿ 1 ಲಕ್ಷ ಮತಗಳಿಂದ ಗೆಲ್ಲಿಸಿ ತಂದು ಜಿಲ್ಲೆ, ರಾಜ್ಯದಲ್ಲಿ ಶಕ್ತಿ ತುಂಬಬೇಕು. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡೋಣ ಅಂತ ವಿಧಾನ ಪರಿಷತ್‌ ಸದಸ್ಯ ಲಖನ ಜಾರಕಿಹೊಳಿ ತಿಳಿಸಿದ್ದಾರೆ. 

ಕಾಂಗ್ರೆಸ್‌ ಗ್ರಾಮೀಣ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ದಸ್ತಗಿರ ಬಿಜೆಪಿಗೆ ಸೇರ್ಪಡೆ

ಗೋಕಾಕ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್‌ ಗ್ರಾಮೀಣ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ದಸ್ತಗಿರ ಮುಲ್ಲಾ ಅವರು ತಮ್ಮ ಬೆಂಬಲಿಗರೊಂದಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದರು. ಹಮೀದ್‌ ಮುಲ್ಲಾ, ಅಬ್ಬು ಮಕಾನದಾರ, ಮುಜಮ್ಮೀಲ್‌ ದೇವಡಿ ಸೇರಿ 11ಜನ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರದ ಮುಸ್ಲಿಂ ಸಮಾಜದ ಮುಖಂಡರುಗಳು ಇದ್ದರು.

click me!