ಅಚ್ಚರಿ ಮೂಡಿಸಿದ್ದ ಬೆಲ್ಲದ್ ನಡೆ : ಸ್ವಾರಸ್ಯಕರ ಸಂಗತಿ ಬೆಳಕಿಗೆ

By Kannadaprabha NewsFirst Published Jul 29, 2021, 10:40 AM IST
Highlights
  • ಇನ್ನೇನು ಮುಖ್ಯಮಂತ್ರಿ ಪಟ್ಟ ತಮಗೆ ನಿಶ್ಚಿತ ಎಂಬ ನಿಲುವಿಗೆ  ಬಂದಿದ್ದ ಶಾಸಕ ಅರವಿಂದ್ ಬೆಲ್ಲದ
  • ಎರಡು ದಿನಗಳ ಮೊದಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು

ಬೆಂಗಳೂರು (ಜು.29): ಇನ್ನೇನು ಮುಖ್ಯಮಂತ್ರಿ ಪಟ್ಟ ತಮಗೆ ನಿಶ್ಚಿತ ಎಂಬ ನಿಲುವಿಗೆ  ಬಂದಿದ್ದ ಶಾಸಕ ಅರವಿಂದ್ ಬೆಲ್ಲದ ಅವರು ಎರಡು ದಿನಗಳ ಮೊದಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ  ವಿವಿಧ ಕಡತಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದಿದ್ದರು ಎಂಬ ಸ್ವಾರಸ್ಯಕರ ಸಂಗತಿ ಹೊರಬಿದ್ದಿದೆ. 

ಮುಖ್ಯಮಂತ್ರಿ ಸ್ಥಾನದ ಸಂಭವನೀಯರ ಪಟ್ಟಿಯಲ್ಲಿ ಬೆಲ್ಲದ ಅವರ ಹೆಸರು  ಮುಂಚೂಣಿಯಲ್ಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಜೋರಾಗಿ ಕೇಳಿ ಬರುತ್ತಿದ್ದಂತೆ ಕ್ರಿಯಾಶೀಲರಾದ ಅವರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿನ ಹಲವು ಕಡತಗಳ ವಿಲೇವಾರಿ ಮತ್ತಿತರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಕೇಳಿದ್ದರು. ಇದೆಲ್ಲದರ ಪರಿಣಾಮ ಒಂದು ಹಂತದಲ್ಲಿ ಹಿರಿಯ ಅಧಿಕಾರಿಗಳಿಗೂ ಬೆಲ್ಲದ ಅವರೇ ಮುಂದಿನ ಸಿಎಂ ಎಂಬ ತೀರ್ಮಾನಕ್ಕೆ ಬಂದಿದ್ದರು. 

ಸಿಎಂ ರೇಸ್‌ನಲ್ಲಿದ್ದ ಅರವಿಂದ್ ಬೆಲ್ಲದ್ ದಿಢೀರ್ ಬಸವರಾಜ ಬೊಮ್ಮಾಯಿ ಭೇಟಿ

ಅಂತಿಮವಾಗಿ ಮಂಗಳವಾರ ಸಂಜೆ ಬಸವರಾಜ ಬೊಮ್ಮಾಯಿ ಅವರ ಹೆಸರು ಹೊರಬಿದ್ದ ಬಳಿಕವೇ ಅಧಿಕಾರಿಗಳಿಗೆ ಬೆಲ್ಲದ ಅವರ ನಡೆ ಬಗ್ಗೆ ಅಚ್ಚರಿ ಮೂಡಿದೆ. 

ಒಟ್ಟಿನಲ್ಲಿ ಬೆಲ್ಲದ ಅವರು ಸಿಎಂ ಸ್ಥಾನಕ್ಕೆ ಗಾಳ ಇದೀಗ  ಸಚಿವ ಸ್ಥಾನಕ್ಕೆ ಬಂದು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಡಿಯುರಪ್ಪ ಸಂಪುಟದಲ್ಲಿ ಸಚೊವರಾಗಿದ್ದ ಹಾಗೂ  ಹಾಗು ಧಾರವಾಡ ಪ್ರತಿನಿಧಿಸುತ್ತಿದ್ದ ಮಾಜಿ ಸಿಎಂ ಶೆಟ್ಟರ್ ಅವರು ಸಚಿವರಾಗುವುದಿಲ್ಲ ಎಂದು ಹೇಳಿದ್ದಾರೆ. 

click me!