ಕಳೆದ ಚುನಾವಣೆಯ ವೇಳೆ ಮತ ಕೇಳಲು ಬಂದು ರಸ್ತೆ ಅಭಿವೃದ್ಧಿ ಮಾಡುವುದಾಗಿ ಹೇಳಿ ಹೋಗಿ ಶಾಸಕನಾಗಿ 5 ವರ್ಷ ಕಳೆದರೂ ರಸ್ತೆ ದುರಸ್ತಿ ಮಾಡಿಸದ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರಾಮಪ್ಪನಿಗೆ ಯಲವಟ್ಟಿ ಗ್ರಾಮದ ಮಹಿಳೆಯರು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ.
ದಾವಣಗೆರೆ (ಜ.18): ಕಳೆದ ಚುನಾವಣೆಯ ವೇಳೆ ಮತ ಕೇಳಲು ಬಂದು ರಸ್ತೆ ಅಭಿವೃದ್ಧಿ ಮಾಡುವುದಾಗಿ ಹೇಳಿ ಹೋಗಿ ಶಾಸಕನಾಗಿ 5 ವರ್ಷ ಕಳೆದರೂ ರಸ್ತೆ ದುರಸ್ತಿ ಮಾಡಿಸದ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರಾಮಪ್ಪನಿಗೆ ಯಲವಟ್ಟಿ ಗ್ರಾಮದ ಮಹಿಳೆಯರು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಶಾಸಕನನ್ನು ಕಾರಿನಿಂದ ಕೆಳಗಿಳಿಸಿ ಅವರ ವಿರುದ್ಧ ಧಿಕ್ಕಾರ ಕೂಗಿಕೊಂಡು ಕೆಸರು ಗದ್ದೆಯಂತೆ ಇರುವ ರಸ್ತೆಯಲ್ಲಿ 2 ಕಿ.ಮೀ. ನಡೆಸಿಕೊಂಡು ಹೋಗಿದ್ದಾರೆ. ಈ ವೇಲೆ ಹಳದಿ ಜುಬ್ಬ, ಬಿಳಿ ಪ್ಯಾಂಟ್ ಕೆಸರಾಗಿತ್ತು.
ಪ್ರತಿ ಐದು ವರ್ಷಕ್ಕೊಮ್ಮೆ ಗ್ರಾಮಕ್ಕೆ ಬಂದು ಕಾರ್ಯಕ್ರಮವನ್ನು ಮಾಡಿ, ಮತಗಳನ್ನು ಕೇಳಿ ಹೋಗುವ ಅಭ್ಯರ್ಥಿಗಳು ಮುಂದಿನ ಚುನಾವಣಾ ವೇಳೆಗೆ ಆಗಮಿಸುತ್ತಾರೆ ಎನ್ನುವುದು ಬರೀ ಆರೋಪವಲ್ಲ. ಇದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಾಸಕ ಎಸ್.ರಾಮಪ್ಪ ಅವರು ನಡೆದುಕೊಂಡಿರುವ ಸತ್ಯ ಘಟನೆಯಾಗಿದೆ. ಕಳೆದ ಚುನಾವಣೆ ವೇಳೆ ಮತ ಕೇಳಲು ಆಗಮಿಸಿದ್ದ ರಾಮಪ್ಪ ಭರ್ಜರಿ ಆಶ್ವಾಸನೆಗಳನ್ನು ನೀಡಿ ಜನರಿಂದ ಮತವನ್ನೂ ಪಡೆದುಕೊಂಡು ಶಾಸಕನಾಗಿದ್ದನು. ಶಾಸಕನಾಗಿ 5 ವರ್ಷ ಅಧಿಕಾರ ನಡೆಸಿದರೂ ಒಂದೂ ಆಶ್ವಾಸನೆಯನ್ನು ಈಡೇರಿಸಿಲ್ಲ. ಆದರೆ, ಈಗ ಚುನಾವಣೆ ಹೊಸ್ತಿಲಲ್ಲಿ ಯಲವಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
undefined
Davanagere: ಮಾಜಿ ಶಾಸಕ ಶಿವಶಂಕರ್‌ಗೆ ಗೆಲ್ಲುವ ತಾಕತ್ತಿಲ್ಲ: ಶಾಸಕ ರಾಮಪ್ಪ
ಶಾಸಕನಿಗೆ ಹಿಗ್ಗಾ-ಮುಗ್ಗಾ ತರಾಟೆ: ಯಲವಟ್ಟಿ ಗ್ರಾಮದಲ್ಲಿ ಇರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶಾಸಕ ಎಸ್. ರಾಮಪ್ಪಗೆ ಮಹಿಳೆಯರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ನಮ್ಮ ಊರಿನ ರಸ್ತೆ ದುಸ್ಥಿತಿಯಲ್ಲಿದೆ. ಇಡೀ ರಸ್ತೆ ಕೆಸರು ಗದ್ದೆಯಂತೆ ಆಗಿದ್ದು, ವಾಹನದಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ನಡೆದುಕೊಂಡು ಹೋಗಲು ಸಾಧ್ಯವಾಗದಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ರಸ್ತೆಯಿದೆ. ಆದರೆ, ರಸ್ತೆಯನ್ನು ಮಾತ್ರ ಅಭಿವೃದ್ಧಿ ಮಾಡಿಲ್ಲ. ಈ ಹಿಂದೆ ಮತ ಕೇಳಲು ಬಂದಾಗ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರಸ್ತೆ, ಕುಡಿಯುವ ನೀರು, ಚರಂಡಿ ಸೇರಿ ಯಾವುದೇ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ, ಈ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು. ನಮ್ಮ ಗ್ರಾಮಕ್ಕೆ ದಿನದಲ್ಲಿ ಕನಿಷ್ಠ 3 ಬಾರಿ ಬಸ್ ಬರಬೇಕು ಎಂದು ಆಗ್ರಹಿಸಿದ್ದಾರೆ.
Panchamasali ಸಮಾಜಕ್ಕೆ ಅನ್ಯಾಯ ಮಾಡಲ್ಲ: ಮೀಸಲಾತಿ ಕಲ್ಪಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ
ತರಾಟೆ ನಂತರ ಸಮಸ್ಯೆ ಆಸಲಿಸಿದ ಶಾಸಕ: ಇನ್ನು ಹರಿಹರ ಕ್ಷೇತ್ರದ ಯಲವಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ಅತಿಥಿಗಳಾಗಿ ಪಾಲ್ಗೊಳ್ಳಬೇಕಿತ್ತು. ಈ ವೇಳೆ ಮೊದಲು ಕಾರಿನಲ್ಲಿ ಆಗಮಿಸಿದ ಶಾಸಕನನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸಮಸ್ಯೆಯನ್ನು ಆಲಿಸಿದ ಶಾಸಕ ರಾಮಪ್ಪ ಅವರಿಗೆ, ಮಹಿಳೆಯರು ಒಟ್ಟು 10 ಕಿ.ಮೀ. ರಸ್ತೆ ಹಾಳಾಗಿರುವುದರಿಂದ ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ ಗ್ರಾಮದ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಕಳೆದ ಐದು ವರ್ಷಗಳಿಂದ ಕೇವಲ 1 ಕಿ.ಮೀ. ರಸ್ತೆ ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಉಳಿದ ರಸ್ತೆಯನ್ನು ಚುನಾವಣೆ ಒಳಗಾಗಿ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.