ವಿಜಯೇಂದ್ರ ಇನ್ನು ಮಗು, ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ಚಲುವರಾಯಸ್ವಾಮಿ

Published : Nov 22, 2023, 11:59 PM IST
ವಿಜಯೇಂದ್ರ ಇನ್ನು ಮಗು, ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ಚಲುವರಾಯಸ್ವಾಮಿ

ಸಾರಾಂಶ

ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಯಾರಾಗಬೇಕು ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. 

ಹಲಗೂರು (ನ.22): ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಯಾರಾಗಬೇಕು ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಸವದತ್ತಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಅನ್ಯೋನ್ಯತೆ ಇದ್ದಾರೆ. ಯಾರೋ ಏನು ಮಾತಾನಾಡಿದರೂ ಎಂದ ಮಾತ್ರಕ್ಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ತಪ್ಪು ಕಲ್ಪನೆ ಎಂದರು.

ತಮ್ಮ ನಾಯಕರ ಬಗ್ಗೆ ಅಭಿಪ್ರಾಯ ಹೇಳೋದು ಅವರಾವರ ಇಚ್ಛೆ. ಅವರ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಅಪರಾಧ ಅನ್ನೋಕೆ ಆಗಲ್ಲ. ಸತೀಶ್ ಜಾರಕಿ ಹೊಳಿ ಸಿಎಂ ಆಗಬೇಕು ಅಂತ ಹೇಳೋದ್ರಲ್ಲಿ ತಪ್ಪೇನಿದೆ. ಯಾವತ್ತಾದರೂ ಒಂದು ದಿನ ಅವರು ಸಿಎಂ ಆಗಬಹುದು. ಆದರೆ, ಪ್ರಸ್ತುತ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ವಿಜಯೇಂದ್ರ ಇನ್ನು ಮಗು: ರಾಜ್ಯದಲ್ಲಿ ಸಚಿವರ ಗೂಂಡಾ ಘರ್ಜನೆ ಜಾಸ್ತಿ ಆಗುತ್ತಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಮಾರಸ್ವಾಮಿ ಜಾಸ್ತಿ ಸೌಂಡ್ ಮಾಡುತ್ತಿದ್ದಾರೆ ಅಂತ ವಿಜಯೇಂದ್ರ ಕೂಡ ಸೌಂಡ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ವಿಜಯೇಂದ್ರ ಇನ್ನೂ ಮಗು. ಪಾಪ ಅವರ ತಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಹಿಂದಲೂ ರಾಜ್ಯದ ವಿಚಾರ ತಿಳಿದುಕೊಂಡಿದ್ದೀನಿ ಅಂದರೆ ಏನು‌ ಮಾಡೋಕೆ ಆಗುತ್ತೆ. ಒಂದು ಪಕ್ಷದ ಅಧ್ಯಕ್ಷರಾಗಿ ಯಾವ ಪದ ಬಳಕೆ ಮಾಡಬೇಕು ಎನ್ನುವ ಸಂಯಮ ಇಲ್ಲ ಎಂದರು.

ನಾವು ಕೂಡ ಅವರಿಗಿಂತ ಹೆಚ್ಚು ಮಾತಾನಾಡುತ್ತೇವೆ. ನಾವು ಗ್ರಾಮೀಣಾ ಪ್ರದೇಶದಿಂದ ಬಂದಿರೋದು. ನಮಗೂ ಭಾಷೆ ಗೊತ್ತಿದೆ. ಯಾವ ಭಾಷೆ ಬಳಸಬೇಕು ಅಂತ ಗೊತ್ತಿದೆ. ನಮ್ಮ ನಾಲಿಗೆ ಹಿಡಿತದಲ್ಲಿ ಇರಬೇಕು ಸುಮ್ಮನಿದ್ದೇವೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರಗೆ ಸ್ವ-ಪಕ್ಷದಲ್ಲೇ ಅವರನ್ನು ಅಧ್ಯಕ್ಷರಾಗಿ ಒಪ್ಪಲು ಯಾರು ತಯಾರಿಲ್ಲ. ಅಶೋಕ್ ಮನೆ ಮನೆಗೆ ಹೋಗಿ ಸಮಾಧಾನ ಮಾಡ್ತೀವಿ ಅಂದಿದ್ದಾರೆ ಎಂದು ಟೀಕಿಸಿದರು. ರಾಜ್ಯದ ಜವಾಬ್ದಾರಿ ಮತ್ತು ಜನರ ಸಮಸ್ಯೆ ಅವರಿಗೆ ಮುಖ್ಯವಲ್ಲ. ಜನರ ಸಮಸ್ಯೆ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಕಳೆದ ಎರಡು ಮೂರು ತಿಂಗಳಿಂದ ನಾಲಿಗೆಯಲ್ಲಿ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಎಚ್ಡಿಕೆ ಬಳಿ ಇರೋದು ಪೆನ್ಸಿಲ್ ಡ್ರೈವ್: ಪೆನ್ ಡ್ರೈವ್ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಬೇಡಿ ಎಂದು ಮಂತ್ರಿಗಳು ಹೇಳಿದ್ದಾರಂತೆ. ಅದ್ಯಾವ ಮಂತ್ರಿ ಕರೆ ಮಾಡಿದ್ದಾರೆ ಅಂತ ಹೇಳಲಿ. ಅವರ ಹತ್ತಿರ ಇರೋದು ಪೆನ್ ಡ್ರೈವ್ ಅಲ್ಲ. ಪೆನ್ಸಿಲ್ ಡ್ರೈವ್. ಇರೋದು ಅಳಿಸಿ ಹೋಗಿದೆ ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿ ಬಳಸುವ ಭಾಷೆಯಲ್ಲಿ ಹಿಡಿತವಿಲ್ಲ. ನಾವು ಜಾತ್ಯತೀತ ಅಂದರು. ಮುಸ್ಲಿಂ, ದಲಿತ, ಹಿಂದುಳಿದವರ ಪರ ಅಂತ ಜಾತ್ಯತೀತ ಹೆಸರಿಟ್ಟುಕೊಂಡು ದತ್ತಮಾಲೆ ಹಾಕೋತಿನಿ ಅಂತಾರೆ. ಯಾವುದನ್ನು ಹಾಕೋತಾರೊ, ಯಾರ ಪರ, ಯಾವ ಸಮಾಜದ ಪರ ನಿಲ್ಲುತ್ತಾರೊ ನಮಗೆ ತಿಳಿಯುತ್ತಿಲ್ಲ ಎಂದರು.

ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ: ಸಿ.ಎಂ.ಇಬ್ರಾಹಿಂ

ಕುಮಾರಸ್ವಾಮಿ ಅವರು ಬಿಜೆಪಿ ಏನೇ ಹೇಳಿದ್ರು ಕೇಳುತ್ತಾರೆ. ಚಡ್ಡಿ ಹಾಕಿಕೊಳ್ಳಲು ರೆಡಿ ಇದ್ದಾರೆ. ದತ್ತಮಾಲೆ ಹಾಕಲು ಸಿದ್ದರಿದ್ದಾರೆ. ಅದರಿಂದ ನಮಗೆ ಏನೂ ಬೇಜಾರಿಲ್ಲ. ಚಡ್ಡಿ ಹಾಕಿಕೊಂಡರು ಸಂತೋಷ ಮತ್ತು ದತ್ತಮಾಲೆ ಹಾಕಿಕೊಂಡರು ಸಂತೋಷ ಅದು ಅವರ ರಾಜಕಾರಣ ಅವರು ಮಾಡಿಕೊಳ್ಳಲಿ ಎಂದರು. ಕಾಂಗ್ರೆಸ್ ಬರ ಪರಿಹಾರದಲ್ಲಿ ಕಮಿಷನ್ ಹೊಡೆಯಲು ದೊಡ್ಡ ಮೊತ್ತ ಕೇಳಿರುವ ಆರೋಪಕ್ಕೆ ಟಾಂಗ್ ಕೊಟ್ಟ ಸಚಿವರು ಹಿಂದೆ ಕಮೀಷನ್ ಹೊಡೆದು ಅವರಿಗೆ ಅಭ್ಯಾಸ. ಅದಕ್ಕೆ ಆ ರೀತಿಯ ಹೇಳಿಕೆ ನೀಡಿದ್ದಾರೆ. ಯಾರಾದರೂ ರೈತರ ಪರಿಹಾರದಲ್ಲಿ ದುಡ್ಡು ಹೋಡಿತಾರಾ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!