ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವಂತೆ ಟೆಂಟಲ್ಲಿ ನೀಲಿ ಸಿನೆಮಾ ತೋರಿಸುವಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ಅಂತಹದ್ದೇನಾದರೂ ನಾನು ಮಾಡಿದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಬೆಂಗಳೂರು (ನ.22): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವಂತೆ ಟೆಂಟಲ್ಲಿ ನೀಲಿ ಸಿನೆಮಾ ತೋರಿಸುವಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ಅಂತಹದ್ದೇನಾದರೂ ನಾನು ಮಾಡಿದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನ್ಯಾವತ್ತೂ ಅಂತಹ ಕೀಳು ಮಟ್ಟಕ್ಕೆ ಇಳಿದಿಲ್ಲ. ಕುಮಾರಸ್ವಾಮಿ ಅವರು ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯ ಮಾತುಗಳಿಗೆ ತೂಕ, ಗೌರವ ಇರಬೇಕು. ಏನೇನೋ ಮಾತನಾಡಿದರೆ ಅವರ ಗೌರವವೇ ಹಾಳಾಗುತ್ತದೆ. ಇದರಿಂದ ಏನೂ ಒಳ್ಳೆಯದಾಗುವುದಿಲ್ಲ. ಜನ ನೋಡಿ ನಗುತ್ತಾರೆ ಅಷ್ಟೆ ಎಂದರು.
ಕನಕಪುರ ಕ್ಷೇತ್ರದ ಜನ 1.23 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರೇನು ದಡ್ಡರಾ? ಕುಮಾರಸ್ವಾಮಿ ಅವರು ತಾವು ಹಾಗೂ ತಮ್ಮ ತಂದೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾಗ ಇಂತಹ ವಿಷಯವನ್ನು ಪ್ರಚಾರದ ವೇಳೆ ಮಾತನಾಡಲಿಲ್ಲ? ಹೋಗಿ ನಮ್ಮೂರ ಜನರನ್ನ, ನನ್ನ ಕ್ಷೇತ್ರದ ಜನರನ್ನ ಕೇಳಿ. ಅದೂ ಬೇಡ ನನ್ನ ಕ್ಷೇತ್ರದಲ್ಲಿರುವ ಜೆಡಿಎಸ್ ಕಾರ್ಯಕರ್ತರನ್ನೇ ಕೇಳಿ ಒಬ್ಬ ಕಾರ್ಯಕರ್ತ ಹೌದು ಡಿ.ಕೆ.ಶಿವಕುಮಾರ್ ಇಂತಹ ಕೀಳು ರಾಜಕೀಯ ಮಾಡಿಕೊಂಡು ಬಂದವರು ಎಂದು ಹೇಳಿದರೆ ಇವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ: ಸಿ.ಎಂ.ಇಬ್ರಾಹಿಂ
ಕೇಂದ್ರದ ಅನ್ಯಾಯ ಸರಿಪಡಿಸಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ನಾಯಕರು ಬರ ಅಧ್ಯಯನಕ್ಕೆ ಮುಂದಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರ ಈಗಾಗಲೇ ಬರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದೆ. ಬಿಜೆಪಿಯವರೂ ಬರ ಅಧ್ಯಯನ ಮಾಡಿದರೆ ಬೇಡ ಅನ್ನುವುದಿಲ್ಲ. ಪ್ರವಾಸ ಮಾಡಲಿ, ಪಕ್ಷ ಕಟ್ಟಿಕೊಳ್ಳಲಿ ತೊಂದರೆ ಇಲ್ಲ. ಆದರೆ, ಅಧ್ಯಯನದ ಬಳಿಕ ತಮ್ಮ 25 ಜನ ಸಂಸದರ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರದಿಂದ ಸೂಕ್ತ ಬರ ಪರಿಹಾರ ಕೊಡಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದರು.
ವಿಚಾರಿಸಿ ಉತ್ತರಿಸುತ್ತೇನೆ: ಬೆಂಗಳೂರಿನ ಸೈಯದ್ ನಗರದಲ್ಲಿ 200 ಮಕ್ಕಳನ್ನು ಅನಾಥಾಶ್ರಮದಲ್ಲಿ ಇಟ್ಟುಕೊಂಡು ತಾಲೀಬಾನ್ ಮಾದರಿ ಶಿಕ್ಷಣ ನೀಡಲಾಗುತ್ತಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್ ನೀಡಿರುವ ಕುರಿತು, ಚುನಾವಣೆಗಳು ಹತ್ತಿರವಾದಾಗ ರಾಜಕಾರಣಕ್ಕಾಗಿ ಯಾರ್ಯಾರೋ ಏನೇನೋ ಸೃಷ್ಟಿ ಮಾಡುವ ಸಾಧ್ಯತೆ ಇರುತ್ತದೆ. ಪರಿಶೀಲಿಸಿ ಉತ್ತರ ಕೊಡುತ್ತೇನೆ ಎಂದರು.
ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಪಕ್ಷದ ಕೆಲ ವಿಚಾರಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ. ನಿಗಮ ಮಂಡಳಿ ನೇಮಕಾತಿಯನ್ನು ಒಂದೇ ಬಾರಿ ಎಲ್ಲವನ್ನೂ ಮಾಡಲಾಗಲ್ಲ. ಮೊದಲ ಹಂತದಲ್ಲಿ ಶಾಸಕರುಗಳಿಗೆ, ಎರಡು ಮತ್ತು ಮೂರನೇ ಹಂತದಲ್ಲಿ ಉಳಿದವರಿಗೆ ನೀಡಲಾಗುವುದು.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ