ನಟಿ ರನ್ಯಾಗೆ ಜಮೀನು ಹಂಚಿಕೆಯಲ್ಲಿ ಕಾನೂನು ಲೋಪದೋಷ ಇಲ್ಲ: ಮುರುಗೇಶ ನಿರಾಣಿ

Published : Mar 11, 2025, 11:15 AM ISTUpdated : Mar 11, 2025, 11:32 AM IST
ನಟಿ ರನ್ಯಾಗೆ ಜಮೀನು ಹಂಚಿಕೆಯಲ್ಲಿ ಕಾನೂನು ಲೋಪದೋಷ ಇಲ್ಲ: ಮುರುಗೇಶ ನಿರಾಣಿ

ಸಾರಾಂಶ

ನಟಿ, ಉದ್ಯಮಿ ರನ್ಯಾಗೆ ಕೈಗಾರಿಕೆ ಜಮೀನು ಮಂಜೂರಾತಿಯಲ್ಲಿ ಕಾನೂನು ಲೋಪದೋಷ ಇಲ್ಲ. ಇದರಲ್ಲಿ ಕೈಗಾರಿಕೆ ಸಚಿವರದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರವಿಲ್ಲ ಎಂದು ಮಾಜಿ ಕೈಗಾರಿಕೆ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. 

ಬಾಗಲಕೋಟೆ (ಮಾ.11): ನಟಿ, ಉದ್ಯಮಿ ರನ್ಯಾಗೆ ಕೈಗಾರಿಕೆ ಜಮೀನು ಮಂಜೂರಾತಿಯಲ್ಲಿ ಕಾನೂನು ಲೋಪದೋಷ ಇಲ್ಲ. ಇದರಲ್ಲಿ ಕೈಗಾರಿಕೆ ಸಚಿವರದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರವಿಲ್ಲ ಎಂದು ಮಾಜಿ ಕೈಗಾರಿಕೆ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಅವರು, ಉದ್ಯಮಿ, ನಟಿ ರನ್ಯಾ ಕೈಗಾರಿಕೆ ಸ್ಥಾಪನೆಗೆ 2022ರಲ್ಲಿ 12 ಎಕರೆ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.  2023ರ ಜನವರಿಯಲ್ಲಿ ಅದು ಕ್ಲಿಯರ್ ಆಗಿತ್ತು. ನಾನು ಅಂದು ಕೈಗಾರಿಕೆ ಸಚಿವನಾಗಿ ಚೇರ್ ಪರ್ಸನ್‌ ಆಗಿದ್ದೆ. 

ಆದರೆ, ಭೂ ಮಂಜೂರಾತಿ ಅರ್ಜಿಗಳ ಪರಿಶೀಲನೆಗೆ ಲ್ಯಾಂಡ್ ಅಡಿಟೆಡ್ ಕಮಿಟಿಯ ಎಸ್ಸಸ್ಸು ಮತ್ತು ಇಂಡಸ್ಟ್ರಿಯಲ್ ಸೆಕ್ರೆಟರಿ ಇರುತ್ತಾರೆ. ಕಮಿಟಿ ಅರ್ಜಿಯನ್ನು ಸಿಂಗಲ್ ವಿಂಡೋಕ್ಕೆ ತರುತ್ತದೆ. ಸಿಂಗಲ್ ವಿಂಡೋದಲ್ಲಿ 30 ಜನ ಹಿರಿಯ ಅಧಿಕಾರಿಗಳು ಸಾಧಕ-ಬಾಧಕ ಚರ್ಚಿಸಿ, ನಟಿ ರನ್ಯಾಗೆ ಜಾಗ ಅಲಾಟಮೆಂಟ್ ಮಾಡಿದ್ದಾರೆ.  ಇದರಲ್ಲಿ ಕೈಗಾರಿಕೆ ಸಚಿವರದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರ ಅಥವಾ ಕಾನೂನು ಲೋಪದೋಷ ಇಲ್ಲ. ಯಾವುದೇ ರೀತಿ ನಾವು ಫೇವರ್ ಆಗಿ ಮಾಡಿಲ್ಲ. ಈ ಬಗ್ಗೆ ಎನೇ ಡೌಟ್ ಇದ್ದರೂ ನನ್ನ ಸಂಪರ್ಕಿಸಬಹುದು. ನಾನು ಸ್ಪಷ್ಟೀಕರಣ ಕೊಡಲು ಸದಾ ಸಿದ್ಧನಿದ್ದೇನೆ ಎಂದ ಮಾಜಿ ಸಚಿವರು ತಿಳಿಸಿದ್ದಾರೆ.

ಭೂಮಿ ರನ್ಯಾಗೆ ಹಸ್ತಾಂತರವಾಗಿಲ್ಲ: ನಟಿ ರನ್ಯಾ ಹರ್ಷವರ್ಧಿನಿ ರನ್ಯಾ ಹೆಸರಿನಲ್ಲಿ ಕ್ಷಿರೋದಾ ಇಂಡಿಯಾ ಪ್ರೈ.ಲಿ.ಗೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರಾತಿಗೆ 2023ರಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಐಎಡಿಬಿಯಿಂದ ರನ್ಯಾ ಗೆ ಲ್ಯಾಂಡ್ ಅಲಾಟ್ ಮೆಂಟ್ ಆಗಿತ್ತು. ೧೩೮ ಕೋಟಿ ವೆಚ್ಚದಲ್ಲಿ ಕಬ್ಬಿಣದ ಟಿಎಮ್ ಟಿ ಬಾರ್ ಹಾಗೂ ಕಬ್ಬಿಣ ಉತ್ಪನ್ನಗಳ ತಯಾರಿಕೆ ಕಾರ್ಖಾನೆ ಆರಂಭಿಸಿ 160 ಜನರಿಗೆ ಉದ್ಯೋಗ ನೀಡುವ ತಿಳಿಸಿದ್ದರು. 

ನಟಿ ರನ್ಯಾ ರಾವ್‌ ಜೊತೆ ನಂಟು ಹೊಂದಿರುವ ಸಚಿವರ ಹೆಸರು ಹೇಳಿ: ಪ್ರತಿಪಕ್ಷ

ತುಮಕೂರು ಶಿರಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಜಾಗ ಅಲಾಟ್‌ಮೆಂಟ್‌ ಆಗಿತ್ತು. ಆದರೆ ರನ್ಯಾ ಕೆಐಎಡಿಬಿಗೆ ಹಣ ಕಟ್ಟಿಲ್ಲ. ಅಲಾಟ್ ಮೆಂಟ್ ಆದ ಭೂಮಿಯನ್ನು ರನ್ಯಾ ಪಡೆದಿಲ್ಲ..ಇದರಿಂದ ಭೂಮಿ ರನ್ಯಾಗೆ ಹಸ್ತಾಂತರವಾಗಿಲ್ಲ. ಭೂಮಿ ಕೆಐಎಡಿಬಿ ಸುಪರ್ದಿಯಲ್ಲಿದೆ ಎಂದು ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ಆಪ್ತರು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್