ಕಲ್ಲು ಕುಟಕು ಕೆಲಸ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸುವ ಉದ್ದೇಶದಿಂದ ಭಾನುವಾರ ಸಂಜೆ ತೋಟಗಾರಿಕೆ ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ಭೇಟಿ ನೀಡಿದರು.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಮೇ.02): ಸಾಕಷ್ಟು ವರ್ಷಗಳಿಂದ ಕೋಲಾರ (Kolar) ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹುಣಸಿಕೋಟೆ ಗ್ರಾಮದಲ್ಲಿರುವ ಬಂಡೆಗಳಲ್ಲಿ ಕಲ್ಲು ಕುಟಕು ಕೆಲಸ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸುವ ಉದ್ದೇಶದಿಂದ ಭಾನುವಾರ ಸಂಜೆ ತೋಟಗಾರಿಕೆ ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾದ ಮುನಿರತ್ನ (Munirathna) ಅವರು ಭೇಟಿ ನೀಡಿದರು. ನೂರಾರು ಕುಟುಂಬಗಳು ತಾವು ಪ್ರಭಾವಿಗಳಿಂದ ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳನ್ನು (Problem) ಸಚಿವರ ಬಳಿ ತೋಡಿಕೊಂಡರು.
undefined
ಬಳಿಕ ಮಾತನಾಡಿದ ಸಚಿವ ಮುನಿರತ್ನ ಅವರು ಅದೆಷ್ಟೇ ಪ್ರಭಾವಿಗಳು ಇದ್ದರೂ ಸಹ ಕಲ್ಲು ಕುಟುಕರಿಗೆ ಸಮಸ್ಯೆ ಆಗೋದಕ್ಕೆ ಬಿಡೋದಿಲ್ಲ. 40 ವರ್ಷಗಳಿಂದ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಏಕಾಏಕಿ ಬಂದು ನಮಗೆ ತೊಂದರೆ ಮಾಡ್ತಾರೆ ಅನ್ನೋ ಭಯ ಅವರಲ್ಲಿದೆ. ಯಾವುದೇ ಕಾರಣಕ್ಕೂ ಭಯ ಪಡಬೇಡಿ ನಿಮ್ಮ ಜೊತೆ ನಾವು ಇದ್ದು ರಕ್ಷಣೆ ನೀಡುತ್ತೇವೆ ಅಂತ ತಿಳಿಸಿದ್ದೇವೆ. ಇಲ್ಲಿನ ನೈಜ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ, ಇಲ್ಲಿ ಯಂತ್ರವನ್ನು ಬಳಸಿಕೊಂಡು ಯಾರು ವೃತ್ತಿ ಮಾಡ್ತಿಲ್ಲ ,ಅವರಿಗೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಅಂತ ತಿಳಿಸಿದರು. ಬಳಿಕ ರಾಜಕೀಯ ವಿಚಾರವಾಗಿ ಮಾತನಾಡಿದ ಸಚಿವ ಮುನಿರತ್ನ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಇದೆಲ್ಲಾ ಊಹಾಪೋಹ.ನಮ್ಮ ಬಿಜೆಪಿ ಪಕ್ಷಕ್ಕೆ ಬದಲಾವಣೆ ಮಾಡುವ ಶಕ್ತಿ ಇದೆ ಅಂತ ವರಿಷ್ಠರು ಹೇಳಿದ್ದಾರೆ.
Karnataka Politics: ಬಿಜೆಪಿ ಆಹ್ವಾನ ನೀಡಿದ್ರೆ ಕಾಂಗ್ರೆಸ್ ಪಕ್ಷವೇ ಖಾಲಿ: ಸಚಿವ ಮುನಿರತ್ನ
ಆದರೆ ನಾಯಕತ್ವ ಬದಲಾವಣೆ ಮಾಡ್ತೇವೆ ಅಂತ ಹೇಳಿಲ್ಲ. ಬಹಳಷ್ಟು ಕಡೆ ಶಾಸಕರ ಬದಲಾವಣೆ ಆಗಿದೆ. ಸಚಿವರಿಗೆ ಟಿಕೆಟ್ ಕೊಡದೆ ಇದ್ದೀವಿ, ಆಯಾ ಕಾಲಕ್ಕೆ ಪಕ್ಷ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತೇ. ಕುಟುಂಬ ರಾಜಕಾರಣ ವಿರೋಧ ಮಾಡೋದ್ರಲ್ಲಿ ನಾನು ಇದ್ದೇನೆ. ಬರೀ ನೀವು, ಮಕ್ಕಳು ಹೆಂಡತಿ ಆಯ್ತು ಅಂತ ಇನ್ನು ಎಷ್ಟು ವರ್ಷ ನಡಿಬೇಕು. ರಾಜಕಾರಣಕ್ಕೆ ಬೇರೆ ಯಾರು ಬರಬಾರದಾ. ಜಾತಿ ಹಾಗೂ ಕುಟುಂಬ ರಾಜಕಾರಣ ಹೋದರೆ ನಮ್ಮ ದೇಶಕ್ಕೆ ಒಳಿತಾಗುತ್ತೆ. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿಗಳು ಸಹ ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭಾ ಸದಸ್ಯರ ಮಕ್ಕಳಿಗೂ ಸಹ ಟಿಕೆಟ್ ನೀಡಲಿಲ್ಲ ಎಂದು ಮುನಿರತ್ನ ಹೇಳಿದರು.
ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು ವಾಗ್ದಾಳಿ: ಕೋಲಾರ (Kolar) ಜಿಲ್ಲೆಗೆ ಉಸ್ತುವಾರಿ ಸಚಿವರು ನೇಮಕವಾಗಿ 8 ತಿಂಗಳು ಕಳೆದರೂ ಜಿಲ್ಲೆಗೆ ಮುನಿರತ್ನ (Munirathna) ಅವರ ಕೊಡುಗೆ ಶೂನ್ಯ. ಯಾವುದೇ ರೀತಿಯ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಉಸ್ತುವಾರಿ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಚಿವ ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು (JDS MLC Govindaraju) ವಾಗ್ದಾಳಿ ನಡೆಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗೋವಿಂದರಾಜು, ಜಿಲ್ಲೆಯಲ್ಲಿ ಒಟ್ಟು 10 ಜನಪ್ರತಿನಿಧಿಗಳು ಇದ್ದೇವೆ. ಈವರೆಗೆ ಜನಪ್ರತಿನಿಧಿಗಳ ಸಮಸ್ಯೆಗಳ ಬಗ್ಗೆ ಮುನಿರತ್ನ ಅವರು ಚರ್ಚೆ ಮಾಡಿಲ್ಲ.
ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮಾವು ಸಂಸ್ಕರಣಾ ಘಟಕ: ಸಚಿವ ಮುನಿರತ್ನ
ಅಲ್ಲದೆ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಸಂಸದ ಮುನಿಸ್ವಾಮಿ ಅವರಿಗೆ ಕೊಟ್ಟಿದ್ದೇನೆ ಎಂದು ದುರಹಂಕಾರದಿಂದ ಸಚಿವರು ಹೇಳಿಕೆ ನೀಡುತ್ತಾರೆ. ಹಾಗಾಗಿ ನಿಷ್ಪ್ರಯೋಜಕ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಚಿವ ಮುನಿರತ್ನ ಅವರು ಜಿಲ್ಲಾ ಪಂಚಾಯತಿಯಲ್ಲಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಇವರಿಗೆ ಆಸಕ್ತಿಯೇ ಇಲ್ಲ, ಜನರ ಸಂಕಷ್ಟ ಹೇಗೆ ಗೊತ್ತಾಗುತ್ತದೆ, ಸಚಿವರು ಅಧಿಕಾರಿಗಳ ಜೊತೆ ಸಭೆ ಮಾಡೋಕೆ ದಿನಾಂಕ ನಿಗದಿ ಮಾಡ್ತಿಲ್ಲ ಎಂದು ಜಿಲ್ಲಾಧಿಕಾರಿಗಳೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.