ಕೋಲಾರದ ಕಾಂಗ್ರೆಸ್‌ನಲ್ಲಿ ಸಮಸ್ಯೆಯಿದ್ದು, ಇಲ್ಲಿ ಸ್ಪರ್ಧೆಗೂ ಮುನ್ನವೇ ನೀವು ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದವರನ್ನು ನಂಬಿಕೊಂಡು ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಉಚಿತವಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸಂಸದ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದ್ದಾರೆ.
ಕೋಲಾರ (ನ.16) : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪಧಿಸಲು ಕೋಲಾರವನ್ನು ಆಯ್ಕೆ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಕೋಲಾರದ ಕಾಂಗ್ರೆಸ್‌ನಲ್ಲಿ ಸಮಸ್ಯೆಯಿದ್ದು, ಇಲ್ಲಿ ಸ್ಪರ್ಧೆಗೂ ಮುನ್ನವೇ ನೀವು ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದವರನ್ನು ನಂಬಿಕೊಂಡು ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಉಚಿತವಲ್ಲ ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದ್ದಾರೆ.
ಕಳೆದ ಒಂದು ವರ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ (Constituency) ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ (Kolar) ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ನಾನು ನಾಮಿನೇಷನ್ ಸಲ್ಲಿಸಲು ಬರುತ್ತೇನೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು. ಮುಂದುವರೆದು ಹೈಕಮಾಂಡ್‌ನಿಂದ ಕೋಲಾರದಲ್ಲಿಯೇ ಸ್ಪರ್ಧೆ ಮಾಡುವುದಕ್ಕೆ ಸೂಚನೆ ಬಂದಲ್ಲಿ ನಾನು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಸ್ಪರ್ಧೆಯ ಬಗ್ಗೆ ಖಚಿತ ಮಾಹಿತಿ ನೀಡಿದ್ದರು. ಆದರೆ, ಈಗ ಸ್ಥಳೀಯ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ (Muniyappa) ಅವರು ಸಿದ್ದರಾಮಯ್ಯ ಅವರಿಗೆ ನೀವು ಕೋಲಾರಕ್ಕೆ ಬರುವ ಮುನ್ನ ಯಾರನ್ನು ನಂಬಿಕೊಂಡು ಬರುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವಂತೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯಗೆ ಕ್ಷೇತ್ರ ಯಾವುದಯ್ಯ ಅನ್ನೋದೆ ಟೆನ್ಷನ್?
ಕೋಲಾರ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ: ಸಿದ್ದರಾಮಯ್ಯ ಅವರ ಕೋಲಾರದಲ್ಲಿ ಸ್ಪರ್ಧೆಗೆ ಬೆಂಬಲವಿದೆ. ಆದರೆ, ಕೋಲಾರ ಕಾಂಗ್ರೆಸ್ ನಲ್ಲಿ ಸಮಸ್ಯೆ ಇದೆ. ಮೂಲ ಕಾಂಗ್ರೆಸ್ (Origin Congress) ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲವನ್ನು ಸರಿಪಡಿಸಿಕೊಂಡು ಕೋಲಾರಕ್ಕೆ ಬಂದಲ್ಲಿ ಮಾತ್ರ ಅವರ ಸ್ಪರ್ಧೆಗೆ ಅನುಕೂಲ ಆಗಲಿದೆ. ಕಳೆದ ಬಾರಿ ಬಿಜೆಪಿ (BJP) ಪರವಾಗಿ ಕೆಲಸ ಮಾಡಿದವರನ್ನು ನಂಬಿಕೊಂಡು ಕೋಲಾರಕ್ಕೆ ಬರಬೇಡಿ. ಹಾಗೇನಾದರೂ ಅವರನ್ನು ನಂಬಿಕೊಂಡು ಬಂದಲ್ಲಿ ನಿಮ್ಮ ಗೆಲುವಿಗೆ ಕಷ್ಟ (Difficult)ವಾಗಲಿದೆ. ನೀವು ಇಲ್ಲಿ ಸ್ಪರ್ಧೆಗೆ ಬರುವುದಕ್ಕೂ ಮುನ್ನ ಸಮಸ್ಯೆ ಸರಿಪಡಿಸಿಕೊಂಡು (Problem Corrected) ಬರುವಂತೆ ಸಲಹೆ ನೀಡಿದ್ದೇನೆ. ಇನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕೆ.ಎಚ್. ಮುನಿಯಪ್ಪ ತಿಳಿಸಿದರು.
ರಾಜ್ಯ ರಾಜಕಾರಣಕ್ಕೆ ಬರಲು ಒತ್ತಡ: ಕಾಂಗ್ರೆಸ್ ಹೈಕಮಾಂಡ್‌ನಿಂದ ರಾಜ್ಯ ರಾಜಕಾರಣಕ್ಕೆ ಹೋಗುವಂತೆ ಒಂದು ವರ್ಷದಿಂದ ಒತ್ತಡ ಹೇರಲಾಗುತ್ತಿದೆ. ಹೈಕಮಾಂಡ್ (High Command) ತೀರ್ಮಾನದಂತೆ ನಾನು ನಡೆದುಕೊಳ್ಳಬೇಕಾಗುತ್ತದೆ. ಇಲ್ಲಿಯವರೆಗೆ ಹೈಕಮಾಂಡ್‌ನಿಂದ ಯಾವುದೇ ಸೂಚನೆ ನೀಡಿಲ್ಲ. ಅವರು ಹೇಳಿದರೆ ರಾಜ್ಯ ರಾಜಕಾರಣಕ್ಕೆ ಬರಬೇಕಾಗುತ್ತದೆ. ಇನ್ನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಸಿಎಲ್‌ಪಿ ಮತ್ತು ಪಿಸಿಸಿ ಅಧ್ಯಕ್ಷರು ಹೇಳುತ್ತಾರೆ. ಇದಕ್ಕೆ ಗೆಲುವು ಮಾತ್ರ ಮಾನದಂಡವಾಗಿ ನೋಡಲಾಗುತ್ತದೆ. ಒಂದೊಂದು ಸೀಟಿನ ಗೆಲುವು ಕೂಡ ಪಕ್ಷಕ್ಕೆ ಮುಖ್ಯವಾಗುತ್ತದೆ ಎಂದು ಮುನಿಯಪ್ಪ ಹೇಳಿದರು.
ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಅಖಾಡಕ್ಕೆ?: ಸಿದ್ದು ಕೋಲಾರ ಸ್ಪರ್ಧೆ ಬೆನ್ನಲ್ಲೇ ಚಿಂತನೆ
ಸಿದ್ದರಾಮಯ್ಯ ಬಂದಾಗ ಗುಜರಾತ್‌ನಲ್ಲಿದ್ದೆ: ಇತ್ತೀಚೆಗೆ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ನಾನು ಗುಜರಾತ್ (Gujarat)ನಲ್ಲಿ ಚುನಾವಣಾ (Election) ಕೆಲಸದಲ್ಲಿದ್ದೆ. ಹೀಗಾಗಿ, ಅವರ ಪ್ರವಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಜೊತೆಗೆ ಮಾತನಾಡಿದ್ದು, ಕೋಲಾರಕ್ಕೆ ಬರಲು ಸ್ವಾಗತಿಸಿದ್ದೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಕೋಲಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಅದನ್ನು ಸರಿ ಮಾಡುವಂತೆ ಹೇಳಿದ್ದು, ಅದಕ್ಕೆ ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಸಂಚು ಮಾಡುತ್ತಿಲ್ಲ. ಲಾಯಲ್ (ಮೂಲ) ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಯಾರ್‍ಯಾರು ಎಂಬುದನ್ನು ಗುರುತಿಸಿ ಅವರನ್ನು ವಿಶ್ವಾಸಕ್ಕೆ (Faith)ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿರುವುದಾಗಿ ಮುನಿಯಪ್ಪ ಹೇಳಿದರು.