ಸಂಸತ್ ಮೇಲೆ ನಡೆದಿರುವ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಂಸತ್ ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯ ಹುನ್ನಾರ ಇದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು (ಡಿ.15): ಸಂಸತ್ ಮೇಲೆ ನಡೆದಿರುವ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಂಸತ್ ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯ ಹುನ್ನಾರ ಇದೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಮೇಲೆ ಅಟ್ಯಾಕ್ ಮಾಡಿದ ಓರ್ವ ಮೈಸೂರಿನವನು. ನಾವು ಸಹ ವಿಧಾನಸಭಾ ಅಧಿವೇಶನ ವೀಕ್ಷಣೆಗೆ ಪಾಸ್ ನೀಡುತ್ತೇವೆ.
ಪಾಸ್ ನೀಡುವ ವೇಳೆ ಸಂಪೂರ್ಣವಾಗಿ ಪರಿಶೀಲಿಸಿ ನಂತರ ಪಾಸ್ ನೀಡುತ್ತೇವೆ ಎಂದರು. ಸಂಸತ್ ಒಳಗೆ ನುಗ್ಗಿರುವವರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಹೋಗಿದ್ದಾರೆ. ಹೀಗಾಗಿ, ಆ ವ್ಯಕ್ತಿಗಳಿಗೂ ಪ್ರತಾಪ್ ಸಿಂಹಗೂ ಪರಿಚಯವಿರುತ್ತೆ. ಕೂಡಲೇ ಅವರನ್ನ ತನಿಖೆಗೆ ಒಳಪಡಿಸಬೇಕು. ಅಲ್ಲಿಯವರೆಗೂ ಪ್ರತಾಪ್ ಸಿಂಹ ಅವರನ್ನ ಅಮಾನನತು ಮಾಡಬೇಕು. ಪ್ರತಾಪ್ ಸಿಂಹ ಅವರನ್ನೇ ನೇರ ಹೊಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ವರುಣ ಕ್ಷೇತ್ರಕ್ಕೆ ಎರಡು ಸಾವಿರ ಮನೆ: ವರುಣ ಕ್ಷೇತ್ರಕ್ಕೆ ಎರಡು ಸಾವಿರ ಮನೆ ಮಂಜೂರಾಗಲಿದ್ದು, ಆಗ ಮನೆ ಇಲ್ಲದವರಿಗೆ ಮನೆಗಳನ್ನು ಕೊಡುವುದಾಗಿ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಕೊಣನೂರು ಗ್ರಾಪಂ ವ್ಯಾಪ್ತಿಯ ಹನುಮನಪುರ, ವರಳ್ಳಿ, ಚಿಂಚನಹಳ್ಳಿ, ಪಿ. ಮರಳ್ಳಿ, ಮರಳ್ಳಿಪುರ, ಪಾಳ್ಯ, ಕೊಣನಪುರ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಹನುಮನಪುರ ಗ್ರಾಮದಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರಕ್ಕೆ ಈಗಾಗಲೇ 2 ಸಾವಿರ ಮನೆಗಳು ಮಂಜುರಾಗಿದ್ದು, ಇನ್ನೂ ಹೆಚ್ಚುವರಿಯಾಗಿ 2 ಸಾವಿರ ಮನೆಗಳನ್ನು ಕೇಳಿದ್ದೇವೆ.
ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಎಲ್ಲಿಂತ ತರ್ತಿರಾ?: ವಿಜಯೇಂದ್ರ
ಅವು ಸದ್ಯದಲ್ಲೇ ಮಂಜುರಾಗಲಿದ್ದು ಆಗ ಅರ್ಜಿ ಕೊಟ್ಟಿರುವ ಎಲ್ಲರಿಗೂ ಮನೆಗಳನ್ನು ನೀಡುತ್ತೇವೆ ಎಂದರು. ಇದೇ ವೇಳೆ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ನಾಗೇಶ್, ಪದ್ಮನಾಭ್, ಗಿರೀಶ್, ರಂಗಸ್ವಾಮಿ, ರಾಜಮ್ಮ, ಪುಟ್ಟಮ್ಮ, ತಹಸೀಲ್ದಾರ್ ಶಿವಕುಮಾರ್, ಇಓ ಜೆರಾಲ್ಡ್ ರಾಜೇಶ್, ಸಿಡಿಪಿಒ ಮಂಜುಳಾ, ಬಿಇಒ ಶಿವಲಿಂಗಯ್ಯ, ಸಿಪಿಐ ಗೋವಿಂದಯ್ಯ ಇದ್ದರು.