ಕಾಂಗ್ರೆಸ್ ನಲ್ಲಿ ಸಿಎಂ ಆಗೋ ಅರ್ಹತೆ ಇರುವವರು ಬಹಳಷ್ಟು ಜನರಿದ್ದಾರೆ. ಮಾಜಿ ಸಿಎಂ ವೀರಪ್ಪ ಮಾಯ್ಲಿ ಹೇಳಿಕೆ
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಆ.1): ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗುವ ಯೋಗ್ಯತೆ ಇರುವವರು ಬಹಳಷ್ಟು ಅಭ್ಯರ್ಥಿಗಳು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ಈ ಪಟ್ಟಿಯಲ್ಲಿ ಎಸ್.ಆರ್.ಪಾಟೀಲರು ಸಹ ಪ್ರಮುಖರಾಗಿದ್ದಾರೆ. ನಾಯಕರನ್ನು ಅಷ್ಟು ಸುಲಭವಾಗಿ ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದ ಅವರು, ನನ್ನನ್ನೇ ಅನೇಕ ಸಲ ಮೂಲೆಗುಂಪು ಮಾಡೋಕೆ ನೋಡಿದ್ದರು, ಆದ್ರೆ ನಾನು ಎದ್ದು ಬಂದೆ.ನಾನು ಕೇಂದ್ರದ ಮಂತ್ರಿಯಾದೆ, ಇಲ್ಲಿ ಮಂತ್ರಿಯಾದೆ. ಆದರೆ ವೈಯಕ್ತಿಕವಾಗಿರೋ ಕೆಲವು ಗುಂಪುಗಳು ಯಾರನ್ನೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ,ಎಸ್.ಆರ್ ಪಾಟೀಲ(S.R.Patil) ರಂತವರನ್ನೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ, ಅವರು ಸ್ವಯಂ ಪ್ರಕಾಶ ಸೂರ್ಯನಂತಿದ್ದಾರೆ ಎಂದು ಹೊಗಳಿದರು.
ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ - ಮೊಯ್ಲಿ ವಿಶ್ವಾಸ:
undefined
ಇದೇ ಸಮಯದಲ್ಲಿ, ಕಾಂಗ್ರೆಸ್(Congress) ನಲ್ಲಿ ಹಿರಿಯರಿಗೆ ಮನ್ನಣೆ ಸಿಗ್ತಿಲ್ಲವಲ್ಲ ಎಂಬುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂತಹ ಆಂತರಿಕವಾದ ಕೆಲಸ ನಿಧಾನವಾಗಿಯೇ ಆಗುತ್ತವೆ. ಇವತ್ತಿಲ್ಲ ನಾಳೆ ಬದಲಾವಣೆ ಆಗಲೇಬೇಕು.ಕಾಂಗ್ರೆಸ್ ಆಂತರಿಕವಾಗಿ ಮತ್ತೆ ಚೇತನಗೊಳ್ಳುತ್ತದೆ. ಚೇಂಜ್ ಆಫ್ ವೀಲ್ ನ ವೇಗವನ್ನು ಯಾರಿಗೂ ತಡಿಯೋಕಾಗಲ್ಲ ಎಂದು ಹೇಳಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ.
ಈಗಲೂ ಹಿರಿಯರಿಗೆ ಮನ್ನಣೆ ಸಿಗುತ್ತಿದೆ. ನಾನು ಸಹ ಕೇಂದ್ರ ಎಲೆಕ್ಷನ್ ಸಮಿತಿಯಲ್ಲಿ ಇದ್ದೆನೆ. ಬೇರೆ ಬೇರೆ ಕಮಿಟಿಯಲ್ಲೂ ನಾನು ಇದ್ದೇನೆ.ವರದಿ ಕೊಟ್ಟಿದ್ದೇನೆ.ಆದ್ದರಿಂದ ನಾನು ಈಗಲೂ ಸಕ್ರಿಯವಾಗಿದ್ದೇನೆ ಎಂದು ಮಾಜಿ ಸಿಎಂ ಮೊಯ್ಲಿ ತಿಳಿಸಿದರು.
ಸಿಎಂ ಪೈಪೋಟಿ ಅನಾರೋಗ್ಯಕರ ಬೆಳವಣಿಗೆಯಾಗದೆ ಆರೋಗ್ಯಕರವಾಗಿರಬೇಕು:
ಇದೇ ಸಮಯದಲ್ಲಿ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆರೋಗ್ಯಕರ ಚರ್ಚೆ ನಡೆದರೆ ಏನು ತೊಂದರೆ ಇಲ್ಲ. ಅದು ಅನಾರೋಗ್ಯದ ದಾರಿ ಹಿಡಿಬಾರದು. ಪಕ್ಷದ ಒಗ್ಗಟ್ಟಿಗೆ ಆಘಾತ ಆಗಬಾರದು ಎಂಬುದು ನನ್ನ ಅಭಿಪ್ರಾಯ ವಾಗಿದೆ.ಆರೋಗ್ಯ ರೀತಿಯಲ್ಲಿ ಪೈಪೋಟಿ ನಡೀಬಹುದು. ನಾವಿದ್ದಾಗಲೂ ಪೈಪೋಟಿ ಇತ್ತು ಅನಾರೋಗ್ಯ ಇರಲಿಲ್ಲ ಎಂದ ಅವರು, ಬಹುಮತ ಬಂದಮೇಲೆ ಕೇಂದ್ರದಿಂದ ವೀಕ್ಷಕರನ್ನ ಕಳಿಸ್ತಾರೆ. ಅಭಿಪ್ರಾಯ ಪಡೆದು ಅವರು ಹೇಳ್ತಾರೆ ಇಂತವರು ಮುಖ್ಯಮಂತ್ರಿ ಅಂತ,
ಯಾಕಂದ್ರೆ ನಮ್ಮಲ್ಲಿ ಈಗ ಮುಖ್ಯಮಂತ್ರಿ ಇಲ್ಲ. ಈಗ ಇರುವವರೆಲ್ಲ ಮಾಜಿ ಮುಖ್ಯಮಂತ್ರಿ ಮಂತ್ರಿಗಳೇ, ಪ್ರಜಾಪ್ರಭುತ್ವ ಕ್ರಮವಾದ ಆರೋಗ್ಯಕರ ಬೆಳವಣಿಗೆ,ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕು. ನಾನೇ ಅಂತ ಲೋನ್ ಲೀ ವಾಕ್ ಆಗಬಾರದು ಎಂದು ಎಚ್ಚರಿಸಿದ ವೀರಪ್ಪ ಮೋಯ್ಲಿ ಅವರು,ಸಮುದಾಯದ ಸಾಮೂಹಿಕ ಆಗಬೇಕು ಎಂದರು.
ಜಾತಿ ಅಸ್ತ್ರ ಬಳಸಿ ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ:
ಇದರ ಜೊತೆಗೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜಾತಿ ಅಸ್ತ್ರ ಪ್ರಯೋಗ ವಿಚಾರವಾಗಿ ಮಾತನಾಡಿ, ಜಾತಿ ಅಸ್ತ್ರ ಉಪಯೋಗ ಮಾಡಿಕೊಳ್ಳೋದು ನೂರಕ್ಕೆ ನೂರು ತಪ್ಪು,ಜಾತಿ ಅಸ್ತ್ರ ಉಪಯೋಗ ಮಾಡಿಕೊಂಡು, ಈ ರಾಜ್ಯದಲ್ಲಿ ಯಾರೂ ಮುಖ್ಯಮಂತ್ರಿ ಆಗಲ್ಲ.
ನಮ್ಮ ಸಮುದಾಯದಲ್ಲಿ ನಾನು ಒಬ್ಬನೇ ಇದ್ದರೂ ಎಲ್ಲ ಎಂಎಲ್ ಎ ಗಳು ಸೇರಿ ನನ್ನ ಮುಖ್ಯಮಂತ್ರಿ ಮಾಡಿದ್ದರು, ಆದ್ದರಿಂದ, ಜಾತಿ ಆಧಾರದ ಮೇಲೆ, ಬರೀ ಒಂದು ಜಾತಿಯವರು ಸೇರಿದರೆ ಮುಖ್ಯಮಂತ್ರಿ ಆಗೋಕೆ ಸಾಧ್ಯವಿದೆಯಾ..? ಸಾಧ್ಯವಿಲ್ಲ ಎಂದು ತಿಳಿಸಿ,ಆದ್ದರಿಂದ ಜಾತಿ ಮುಂದೆ ತರೋದು ಪಕ್ಷಕ್ಕೆ ವಿರುದ್ಧ ಆಗುತ್ತೆ,ಅದರಿಂದ ಒಂದು ಜಾತಿಯ, ಮತೀಯ ದೃವಿಕರಣ ಕಾಂಗ್ರೆಸ್ ನಲ್ಲಿ ಆಗಬಾರದು,ಈ ಎಚ್ಚರಿಕೆಯನ್ನ ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು ಎಂದರು.
ಸಿಎಂ ಕುರ್ಚಿಗೆ ರೇಸ್: ಸಿದ್ದು, MBP, ಪರಂ, ಖರ್ಗೆಯನ್ನು ಹಿಂದಿಕ್ತಾರಾ ಡಿಕೆಶಿ..?
ಒಕ್ಕಲಿಗರ ಸಭೆಯಲ್ಲಿ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ,ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಅನಾಹುತ ಆಗುತ್ತೆ, ಕಾಂಗ್ರೆಸ್ ಪಕ್ಷದಲ್ಲಿ ಅವರು ಮುಖ್ಯಮಂತ್ರಿ ಆಗೋಕೆ ಹೊರಟಿದ್ದು,ಕಾಂಗ್ರೆಸ್ ಬುಡವನ್ನೇ ಅವರು ಕತ್ತರಿಸಿದರೆ, ಅದನ್ನೇ ಅತಂತ್ರ ಮಾಡಿದರೆ ಯಾರೂ ಕೂಡ ಮುಖ್ಯಮಂತ್ರಿ ಆಗೋಕೆ ಆಗಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.ಜನರಿಗೆ ವಿಶ್ವಾಸ ಬರಲ್ಲ.ಒಗ್ಗಟ್ಟಿನಿಂದ ಹೋದಾಗ ಕಾಂಗ್ರೆಸ್ ಮೇಲೆ ವಿಶ್ವಾಸ ಬರುತ್ತೆ.ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ವಾತಾವರಣ ಇದೆ. ಆ ಅಭಿಪ್ರಾಯ ಉಳಿಸಿಕೊಳ್ಳೋದು ಎಲ್ಲ ಮುಖಂಡರ ಜವಾಬ್ದಾರಿ ಇದೆ. ಜಾತಿಯ ದೃವಿಕರಣ ಮತೀಯ ದೃವಿಕರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ಆಗಲ್ಲ. ಮತೀಯ ಜಾತಿಯ ದೃವಿಕರಣ ಆಗುವ ಸಂಭವ ಇದೆ. ಅದನ್ನ ತಕ್ಷಣ ನಿಲ್ಲಿಸಬೇಕು. ನಾನ್ ಪ್ರೋಡಿಕ್ಟಿವ್ ಕೆಲಸಕ್ಕೆ ಯಾರು ಕೈ ಹಾಕಬಾರದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದ ಸಂಯಮ ಲಕ್ಷ್ಮಣ ರೇಖೆ:
ಈ ಸಮಯದಲ್ಲಿ,ಸಿದ್ದರಾಮಯ್ಯ ವ್ಯಕ್ತಿ ಪೂಜೆ ವಿಚಾರವಾಗಿ ಮಾತನಾಡಿ,ಸಿದ್ದರಾಮೋತ್ಸವ ಅಲ್ಲ ಅಂತ ಅವರೇ ಹೇಳಿದ್ದಾರೆ.ಎಲ್ಲ ಅಭಿಮಾನಿಗಳಿಗೆ ಒಂದು ಲಕ್ಷ್ಮಣ ರೇಖೆ ಹಾಕಬೇಕು. ಪಕ್ಷದ ಸಂಯಮ ಲಕ್ಷ್ಮಣ ರೇಖೆ,ಅದನ್ನ ಮೀರಿ ಹೋದರೆ ರಾವಣ ಸೀತೆಯನ್ನು ಎತ್ತಿಕೊಂಡು ಹೋದಂತೆ ಆಗುತ್ತೆ,ರಾಜಕೀಯವಾಗಿ ನಾವು ಎಂದೂ ವೈಯಕ್ತಿಕವಾದ ವೈಭವೀಕರಣ ಮಾಡಬಾರದು.
ಕಾಂಗ್ರೆಸ್ಸಲ್ಲೀಗ ಸಿಎಂ ಹುದ್ದೆಗೆ ಎಂ.ಬಿ.ಪಾಟೀಲ್ ಟವೆಲ್!
ಇದನ್ನು ಮಾಡ್ತಿಲ್ಲ ಅಂತ ಅವರೇ ಹೇಳಿದ್ದಾರೆ. ಇದನ್ನು ಪಕ್ಷದ ಸಂಘಟನೆಗೆ ಉಪಯೋಗ ಮಾಡಿಕೊಳ್ಳಲಿ ಅಂತ ಅವರೇ ಹೇಳಿದ್ದಾರೆ.
ಹೀಗಾಗಿ ನಾನು ಸಹ ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ.\ ಯಾಕೆಂದರೆ ಅದು ಪಕ್ಷದ ಸಂಘಟನೆ ದೃಷ್ಟಿಯಿಂದ ಎಂಬ ಕಾರಣಕ್ಕೆ ಹೋಗುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದರು.