ಸಿದ್ದರಾಮಯ್ಯ ಸಾಧನೆಯಿಂದಲೇ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ

By Kannadaprabha News  |  First Published Aug 1, 2022, 3:15 PM IST
  • ಸಿದ್ದರಾಮಯ್ಯ ಸಾಧನೆಯಿಂದಲೇ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ
  • ಆಲ್ಬಮ್‌ ಸಾಂಗ್‌ ಬಿಡುಗಡೆಗೊಳಿಸಿದ ಸಂತೋಷ ಲಾಡ್‌ ವಿಶ್ವಾಸ
  • ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಘಟನೆ ಲೋಕಾರ್ಪಣೆ

ಹುಬ್ಬಳ್ಳಿ (ಆ.1) : ಕರ್ನಾಟಕದ ರಾಜಕಾರಣದಲ್ಲಿ ಸೈದ್ಧಾಂತಿಕ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ವ್ಯಕ್ತಿ ಎಂದರೆ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಆಡಳಿತ ಸಾಧನೆಯಿಂದಲೇ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್‌ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನದ ಆಲ್ಬಮ್‌ ಸಾಂಗ್‌ ಬಿಡುಗಡೆ ಹಾಗೂ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಘಟನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವತಿ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡ ಸಂತೋಷ್ ಲಾಡ್ ಫೌಂಡೇಶನ್

Tap to resize

Latest Videos

ಸಿದ್ದರಾಮಯ್ಯ(Siddaramaiah) ಹಾಗೂ ಎಂ.ಪಿ. ಪ್ರಕಾಶ್‌(M.P.Prakash) ಅವರ ಗರಡಿಯಲ್ಲಿ ನಾನು ಬೆಳೆದಿದ್ದೇನೆ. ಸಿದ್ದರಾಮಯ್ಯ ಅವರು ಎಲ್ಲ ಬಡವರಿಗಾಗಿ ನೂರಾರು ಯೋಜನೆ ಜಾರಿಗೆ ತಂದಿದ್ದಾರೆ. ಬಸವ ತತ್ವದಂತೆ ಆಡಳಿತ ನೀಡಿದ್ದಾರೆ. ನೀರಾವರಿ ಇಲಾಖೆಗೆ ಪ್ರತಿವರ್ಷ . 50 ಸಾವಿರ ಕೋಟಿ ನೀಡಿದ್ದಾರೆ. ರೈತರಿಗಾಗಿ ಬಡ್ಡಿರಹಿತ ಸಾಲ ನೀಡಲು ಆರಂಭಿಸಿದರು. ಅದನ್ನು ಈಗ ಗುಜರಾತ್‌ನಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

 

ಬಿಜೆಪಿ(BJP) ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯಾವ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ. ಇಂದು ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳು ಹದಗೆಟ್ಟಿವೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ ಎಂಬುದು ಕಾಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ್‌ ಜಿ. ಗದಿಗೆಪ್ಪಗೌಡ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಕಡ್ಡಾಯ, ಅಕ್ಕಮಹಾದೇವಿ, ಹಡಪದ ಅಪ್ಪಣ್ಣ, ಕುವೆಂಪು ಜಯಂತಿಯನ್ನು ಆರಂಭಿಸಿದ ಸಿದ್ದರಾಮಯ್ಯ ಅವರು ಯಾವುದೇ ಜಾತಿಭೇದವಿಲ್ಲದೆ ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಿ ಸಮಾಜದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಇತರ ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ನಾಯಕರಾಗಿದ್ದಾರೆ. ಅವರ ಹೆಸರಿನಲ್ಲಿ ರಚಿಸಿರುವ ಬಳಗದಿಂದ ಸಮಾಜ ಸೇವೆ ಮುಂದುವರಿಯಬೇಕೆಂದು ಹಾರೈಸಿದರು.

Santosh Lad Foundation: 3 ತಿಂಗಳು ಉಚಿತ Online KAS ಕೋಚಿಂಗ್ ತರಬೇತಿ

ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅನ್ವರ್‌ ಮುಧೋಳ, ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ವೀರಭದ್ರಪ್ಪ ಅಸುಂಡಿ, ಶಂಕರ ಹೊಸಮನಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಆರ್‌. ಪಾಟೀಲ, ರೈತ ಸಂಘದ ಉಪಾಧ್ಯಕ್ಷ ಡಿ.ಟಿ. ಪಾಟೀಲ ಹಾಗೂ ಕಾಂಗ್ರೆಸ್‌ ಮುಖಂಡ ಪಪ್ಪು ರಾಯನಗೌಡ್ರ, ವಿನೋದ ಅಸೂಟಿ, ಅಭಿಮಾನಿ ಬಳಗದ ಉಪಾಧ್ಯಕ್ಷ ಪ್ರವೀಣ ಕಟ್ಟಿ, ಪ್ರಧಾನ ಕಾರ್ಯದರ್ಶಿ ವಿಜನಗೌಡ ಪಾಟೀಲ, ಬಸವರಾಜ ಮಲಕಾರೆ ಮತ್ತಿತರರಿದ್ದರು. ಅನುಮೋದಿನಿ ಮಹಾಲೆ ಪ್ರಾರ್ಥಿಸಿದರು. ವೈಷ್ಣವಿ ದೇವಾಡಿಗ ಭರತನಾಟ್ಯ ಪ್ರದರ್ಶಿಸಿದರು. ಡೊಳ್ಳು ಬಾರಿಸುವ ಮೂಲಕ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಘಟನೆ ಲೋಕಾರ್ಪಣೆಗೊಳಿಸಲಾಯಿತು.

click me!