ಬಿಜೆಪಿಯಿಂದ ಗೆದ್ದ ಮೂರು ಬಂಗಾಳ ಎಂಪಿಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಟಿಎಂಸಿ ನಾಯಕ

By Anusha Kb  |  First Published Jun 7, 2024, 12:09 PM IST

ಪಶ್ಚಿಮ ಬಂಗಾಳದಲ್ಲಿ ಭಾರಿ ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ಫಲಿತಾಂಶದ ಬಳಿಕ ಶಾಕ್ ಆಗಿದ್ದು, ಈಗ ಕೇಸರಿ ಪಾಳಯಕ್ಕೆ ಅಲ್ಲಿ ಮತ್ತೊಂದು ಶಾಕ್‌ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.


ಪಶ್ಚಿಮ ಬಂಗಾಳ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಭಾರಿ ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ಫಲಿತಾಂಶದ ಬಳಿಕ ಶಾಕ್ ಆಗಿದ್ದು, ಈಗ ಕೇಸರಿ ಪಾಳಯಕ್ಕೆ ಅಲ್ಲಿ ಮತ್ತೊಂದು ಶಾಕ್‌ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇಲ್ಲಿ ಗೆದ್ದಿರುವ ಮೂವರು ಬಿಜೆಪಿ ಸಂಸದರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ ಎಂದು ಬಾಂಗ್ಲಾದ ಮಾಧ್ಯಮಗಳು ವರದಿ ಮಾಡಿವೆ. ಇದು ಮಿತ್ರಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಲು ಹೊರಟಿರುವ ಬಿಜೆಪಿಗೆ ಶಾಕ್ ನೀಡುವುದಂತು ಗ್ಯಾರಂಟಿ.

ಕೇಂದ್ರದಲ್ಲಿ ಸರ್ಕಾರ ರಚನೆಯ ಸಿದ್ಧತೆಯಲ್ಲಿ ಇರುವ ಬಿಜೆಪಿಗೆ ಹಲವು ಬೇಡಿಕೆ ಹಾಗೂ ಷರತ್ತುಗಳೊಂದಿಗೆ ಎನ್‌ಡಿಎ ಮಿತ್ರರಾದ ಟಿಡಿಪಿ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್‌ ಕುಮಾರ್ ಈಗಾಗಲೇ ಬೆಂಬಲ ಸೂಚಿಸಿದ್ದಾರೆ.  ಈ ಎರಡು ಪಕ್ಷಗಳು ಲೋಕಸಭೆಯ ಸ್ಪೀಕರ್ ಹುದ್ದೆಯನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ಕೇಳಿದ್ದಾರೆ. ಇದರ ಜೊತೆಗೆ ಚಂದ್ರಬಾಬು ನಾಯ್ಡು ಕೇಂದ್ರ ಕ್ಯಾಬಿನೆಟ್‌ನಲ್ಲೂ 4 ಪ್ರಮಖ ಸಚಿವ ಹುದ್ದೆ ನೀಡುವಂತೆ ಕೇಳಿದ್ದಾರೆ. ಮತ್ತೊಂದೆಡೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡ ಕೇಂದ್ರದಲ್ಲಿ ಐದು ಸಚಿವ ಸ್ಥಾನವನ್ನು ನೀಡಬೇಕು ಜೊತೆಗೆ ರಾಜ್ಯ ಖಾತೆಗಳನ್ನು ಕೂಡ ನೀಡಬೇಕು ಎಂದು ಕೇಳಿವೆ. ಅಲ್ಲದೇ ನಿತೀಶ್ ಕುಮಾರ್ ಅವರ ಈ ಹಿಂದಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಅವರು ಯಾವುದೇ ಕ್ಷಣದಲ್ಲಿ ಬೇಕಾದರೂ ಗೇಮ್ ಚೇಂಜ್ ಮಾಡುವಂತಹ ಕಲೆ ಹೊಂದಿರುವುದು ಬಿಜೆಪಿಗೂ ಗೊತ್ತೇ ಇದೆ. ಹೀಗಾಗಿ ಈಗ ಪಶ್ಚಿಮ ಬಂಗಾಳದಲ್ಲಿ ಮೂವರು ಬಿಜೆಪಿ ಸಂಸದರು ಟಿಎಂಸಿ ಸಂಪರ್ಕದಲ್ಲಿದ್ದಾರೆ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿರುವುದರಿಂದ ಈಗಾಗಲೇ ಪೂರ್ಣ ಬಹುಮತವವಿಲ್ಲದೇ ಪರದಾಡುತ್ತಿರುವ  ಬಿಜೆಪಿಗೆ ಮತ್ತೊಂದು ಶಾಕ್ ನೀಡಲಿದೆ. 

Tap to resize

Latest Videos

undefined

ಇಂಡಿಯಾ ಕೂಟವೂ ಕೂಡ ಮೊನ್ನೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತನ್ನ ಮಿತ್ರ ಪಕ್ಷಗಳ ಜೊತೆ ಹಲವು ಬಾರಿ ಚರ್ಚೆ ಮಾಡಿ ನಂತರ ಕೊನೆಯದಾಗಿ ಸರ್ಕಾರ ರಚನೆಯ ಪ್ರಸ್ತಾಪದಿಂದ ಹಿಂದೆ ಸರಿದಿತ್ತು. ಈ ಇಂಡಿಯಾ ಕೂಟದ ಸಭೆಯಲ್ಲಿ ಟಿಎಂಸಿಯ ಪರವಾಗಿ ಅಭಿಷೇಕ್ ಬ್ಯಾನರ್ಜಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಜೊತೆ ಮೊದಲ ಸಾಲಿನಲ್ಲಿಯೇ ಕುಳಿತ ಅಭಿಷೇಕ್ ಇಂಡಿಯಾ ಮೈತ್ರಿಕೂಟದ ಪ್ರಮುಖ ಭಾಗವಾಗಿದ್ದಾರೆ. ಹೀಗಾಗಿ ಅಭಿಷೇಕ್ ಅವರ ಈ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ. 

ಟಿವಿಯ ರಾಮ ಬಾಲಿವುಡ್‌ನ ಶತ್ರುಘ್ನ ಇಬ್ಬರ ಕೊರಳೇರಿದ ಜಯದ ಹಾರ

ಸಭೆಯ ನಂತರ ಮಾತನಾಡಿದ ಅಭಿಷೇಕ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಗೆದ್ದಿರುವ ಮೂವರು ಸಂಸದರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಇದರ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ, ಜೆಡಿಯು ಸೇರಿದಂತೆ ಸಣ್ಣ ಸಣ್ಣ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ. ಇದಲ್ಲದೇ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲೂ ರಾಜಕೀಯ  ಸಮೀಕರಣ ಯಾವಾಗ ಬೇಕಾದರೂ ಸಡನ್‌ ಆಗಿ ಬದಲಾಗಬಹುದು ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ. 

ಮಹಾರಾಷ್ಟ್ರದಲ್ಲಿ ಏಕಾಂತ್ ಶಿಂಧೆ ಬಣದ ಶಿವಸೇನೆಯಿಂದ ಸಂಸದರಾಗಿ ಆಯ್ಕೆಯಾದ ಕೆಲ ಸಂಸದರು ಉದ್ಧವ್ ಠಾಕ್ರೆ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ವರದಿ ಆಗಿದೆ. ಇದರ ಜೊತೆಗೆ ಅಭಿಷೇಕ್ ಶರದ್ ಪವಾರ್, ಸಂಜಯ್ ರಾವತ್ ಅವರೊಮದಿಗೆ ಅಭಿಷೇಕ್ ಇಂದು ಮಧ್ಯಾಹ್ನದ ನಂತರ ಸಭೆ ನಡೆಸಲಿದ್ದಾರೆ. ಹೀಗಾಗಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಪ್ರಸ್ತಾಪದಿಂದ ಹಿಂದೆ ಸರಿದಿದ್ದರೂ ಕೂಡ ಒಳಗೆ ಇದಕ್ಕಾಗಿ ಕಸರತ್ತು ನಡೆಯುತ್ತಿದ್ದು, ರಾಜಕೀಯ ಆಟ ಹೇಗೆ ಬೇಕಾದರೂ ಬದಲಾಗಬಹುದು ಎಂದು ಬೆಂಗಾಲಿ ಮಾಧ್ಯಮಗಳು ವರದಿ ಮಾಡಿವೆ. 

ಲೋಕಸಭಾ ಚುನಾವಣೆ: ಬಿಜೆಪಿಯನ್ನು ಬಚಾವ್‌ ಮಾಡಿದ್ದು ಮಾಯಾವತಿ!

ಈ ಅಭಿಷೇಕ್ ಬ್ಯಾನರ್ಜಿ ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ  ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಕೂಡ ಭೇಟಿ ಆಗಿದ್ದು, ಈ ವೇಳೆ ಟಿಎಂಸಿಯ ರಾಷ್ಟ್ರೀಯ ಸದಸ್ಯ ಡೆರೆಕ್ ಒಬ್ರಿಯಾನ್ ಕೂಡ ಇದ್ದರು. ಇವರನ್ನು ಮನೆಗೆ ಸ್ವಾಗತಿಸಿದ ಅಖಿಲೇಶ್ ಯಾದವ್ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಲೋಕಸಭೆಯಲ್ಲಿ ರಾಹುಲ್‌ಗೆ ವಿಪಕ್ಷ ನಾಯಕ ಹೊಣೆ?

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 29 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಗೆಲುವು ಸಾಧಿಸಿದೆ. ಆದರೆ 30 ಸೀಟುಗಳಲ್ಲಿ ನಮ್ಮನ್ನು ಗೆಲ್ಲಿಸಿ ಎಂದು ಕೇಳಿದ್ದ ಬಿಜೆಪಿ ಇಲ್ಲಿ ಈ ಬಾರಿ ಕೇವಲ 12 ಸ್ಥಾನಗಳನ್ನು  ಗೆದ್ದು, 2019ರಲ್ಲಿ ಗೆದ್ದಿದ್ದ ಆರು ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಕಾಂಗ್ರೆಸ್ ಇಲ್ಲಿ 1 ಸ್ಥಾನ ಗಳಿಸಿದೆ.  2019ರಲ್ಲಿ ಇಲ್ಲಿ ಬಿಜೆಪಿ 18 ಸ್ಥಾನ ಗಳಿಸಿತ್ತು, ಟಿಎಂಸಿ 22, ಕಾಂಗ್ರೆಸ್ 2 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಇಂಡಿಯಾ ಮೈತ್ರಿಕೂಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಭಿಷೇಕ್ ಬ್ಯಾನರ್ಜಿ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. 

click me!