ಅಚ್ಚರಿ ಬೆಳವಣಿಗೆಯಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಕಳುಹಿಸಿದ್ದಾರೆ.
ಹೈದರಾಬಾದ್, (ಡಿ.04): ಭಾರೀ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸದ್ಯ ಮಾಹಿತಿ ಪ್ರಕಾರ 150 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿರೂಢ ಪಕ್ಷ ಟಿಆರ್‌ಎಸ್ 566 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್ ಕೇವಲ ಮತ್ತೆ ಅದೇ ಎರಡೂ ಸ್ಥಾನಗಳಿಲ್ಲಿ ಮಾತ್ರ ಜಯಗಳಿಸಿದೆ. ಇದರಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎನ್.ಉತ್ತಮ್ ಕುಮಾರ್ ರೆಡ್ಡಿ ಇಂದು (ಶುಕ್ರವಾರ) ರಾಜೀನಾಮೆ ನೀಡಿದ್ದಾರೆ.
ಹೈದರಾಬಾದ್ ಪಾಲಿಕೆ ರಿಸಲ್ಟ್: ಬಿಜೆಪಿಯ ಭಾಗ್ಯನಗರದ ಕನಸಿಗೆ ಹಿನ್ನಡೆ..!
ರಾಜೀನಾಮೆ ಪತ್ರವನ್ನು ಅಖಿಲ್ ಭಾರತ ಕ್ರಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದು, ಇನ್ನೂ ರಾಜೀನಾಮೆ ಅಂಗೀಕಾರವಾಗಿಲ್ಲ.
150ರಲ್ಲಿ ಈಗಾಗಲೇ 146 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಟಿಆರ್‌ಎಸ್ 56, ಬಿಜೆಪಿ 46 ಹಾಗೂ AIMIM 42 ಹಾಗೂ ಕಾಂಗ್ರೆಸ್ 2 ಗೆಲುವು ಸಾಧಿಸಿದೆ ಎಂದು ತಿಳಿದುಬಂದಿದೆ.
2016ರ ಫೆಬ್ರುವರಿಯಲ್ಲಿ ನಡೆದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿದ್ದು, ಅಸಾದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 04 ಹಾಗೂ ಕಾಂಗ್ರೆಸ್ 02, ಟಿಡಿಪಿ 1 ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿತ್ತು.