ಸಿದ್ದು ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ಬಣ್ಣ ಬಯಲು ಮಾಡಿದ ರಾಜೀವ್ ಚಂದ್ರಶೇಖರ್!

By Suvarna News  |  First Published Sep 14, 2023, 10:11 PM IST

ಅಲ್ಪಸಂಖ್ಯಾತರ ಒಲೈಕೆಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೊಳಿಸಿರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.  ಇದರ ಬೆನ್ನಲ್ಲೇ ಒಬಿಸಿ ಸಮುದಾಯ ಸೇರ್ಪಡೆ ಮಾತನ್ನಾಡಿದ್ದ ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಈ ಯೋಜನೆ ಮೀಸಲಿಟ್ಟಿದೆ.


ನವದೆಹಲಿ(ಸೆ.14) ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಅನ್ನೋ ಗಂಭೀರ ಆರೋಪಕ್ಕೆ ಇದೀಗ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಕೇವಲ ಅಲ್ಪಸಂಖ್ಯಾತರನ್ನು ಮಾತ್ರ ಫಲಾನುಭವಿ ಮಾಡಲಾಗಿತ್ತು. ಈ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ ಬಳಿಕ ಒಬಿಸಿ ಸಮುದಾಯ ಸೇರಿಸುವ ಸೂಚನೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ಒಬಿಸಿ ಸಮುದಾಯವನ್ನು  ಈ ಯೋಜನೆಗೆ ಸೇರಿಸಿಲ್ಲ. ಸರಣಿ ಟ್ವೀಟ್ ಮೂಲಕ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿರುವ ರಾಜೀವ್ ಚಂದ್ರಶೇಖರ್, ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ಮತ್ತೆ ಸರ್ಕಾರವನ್ನು ಎಚ್ಚರಿಸಿರುವ ರಾಜೀವ್ ಚಂದ್ರಶೇಖರ್, ಒಬಿಸಿ ಸಮುದಾಯ ಸೇರ್ಪಡೆ ಇನ್ನೂ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಎಲ್ಲಾ ವರ್ಗ ಹಾಗೂ ಸಮುದಾಯ ತಲುಪುತ್ತಿದ್ದರೆ, ಪಟ್ಟಿ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. 

Tap to resize

Latest Videos

ಕಾಂಗ್ರೆಸ್‌ನಿಂದ ಓಲೈಕೆ ರಾಜಕಾರಣ; ಹಿಂದೂಯೇತರ ಸಮುದಾಯಗಳಿಗೆ ಮಾತ್ರ ಈ ಸೌಲಭ್ಯ: ಕೇಂದ್ರ ಸಚಿವ ವಾಗ್ದಾಳಿ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ನೇತೃತ್ವದ ಕಾಂಗ್ರೆಸ್ ಸರ್ಕಾರ  ಹೊಸ ಸ್ವಾವಲಂಬಿ ಸಾರಥಿ ಯೋಜನೆಯನ್ನು ಮೊದಲು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಲಭ್ಯವಾಗುವಂತೆ ರೂಪಿಸಲಾಗಿತ್ತು. ಈ ಕುರಿತು ನಾನು ಕರ್ನಾಟಕ ಕಾಂಗ್ರೆಸ್ ಸರ್ಕಾರದ  ತುಷ್ಠೀಕರಣ ರಾಜಕಾರಣವನ್ನು ಬಯಲಿಗೆಳಿದ ಬೆನ್ನಲ್ಲೇ ಜನಸಾಮಾನ್ಯರು ಆಕ್ರೋೋಶ ವ್ಯಕ್ತವಾಗಿತ್ತು. ಆಕ್ರೋಶದ ಬಳಿಕ  ಸಿದ್ದರಾಮಯ್ಯ ಸರ್ಕಾರವು OBC ಸಮುದಾಯವನ್ನು ಈ ಯೋಜನೆ ಅಡಿ ಸೇರಿಸಲು ಸೂಚನೆ ನೀಡಿದೆ. ಆದರೆ ಈ ದಿನಾಂಕದವರೆಗೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಈ  ಯೋಜನೆಯಲ್ಲಿ ಸೇರಿಸಿಲ್ಲ. 

ಡಿಎಂಕೆ ಒತ್ತಡಕ್ಕೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್‌: ರಾಜೀವ್‌ ಚಂದ್ರಶೇಖರ್‌ 

ರಾಹುಲ್ ಗಾಂಧಿಯವರ ಕಾಂಗ್ರೆಸ್/ಯುಪಿಎ/ಐಎನ್‌ಡಿಐ ಮೈತ್ರಿಕೂಟಗಳು ಪ್ರತಿ ಹಂತದಲ್ಲಿಯೂ ತುಷ್ಟೀಕರಣದ ರಾಜಕಾರಣಕ್ಕೆ ಆದ್ಯತೆ ನೀಡುತ್ತವೆ‌. ಆದರೆ ಅವರ ಪ್ರತಿಯೊಂದು ತುಷ್ಟೀಕರಣದ ರಾಜಕಾರಣದ ನೀತಿಯು ಖಂಡಿತವಾಗಿ ಬಹಿರಂಗಗೊಳ್ಳಲಿದೆ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ‌. ಪತ್ರಕರ್ತರನ್ನು ಬೆದರಿಸುವುದು ಮತ್ತು ಬಂಧಿಸುವುದರಿಂದ ಸತ್ಯ ಬಹಿರಂಗವಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ  ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.  

 

ಕರ್ನಾಟಕದ ಮತ್ತು ನೇತೃತ್ವದ ಸರ್ಕಾರವು ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ಘೋಷಿಸಿದ ಹೊಸ ಯೋಜನೆಯನ್ನು ಮೊದಲು ಕೇವಲ ಮಾತ್ರ ಲಭ್ಯವಾಗುವಂತೆ ರೂಪಿಸಲಾಗಿತ್ತು.

🚨 ನನ್ನ ಟ್ವೀಟ್ ಹಾಗೂ ಜನಸಾಮಾನ್ಯರ ಆಕ್ರೋಶದ ನಂತರ ಸಿದ್ದರಾಮಯ್ಯ ಸರ್ಕಾರವು…

— Rajeev Chandrasekhar 🇮🇳 (@Rajeev_GoI)

 

ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.  ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಸವಾಲು, ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆ ಪ್ರಾಮಾಣಿಕವಾಗಿದ್ದರೆ, ಎಲ್ಲಾ ವರ್ಗದ ಫಲಾನುಭವಿಗಳನ್ನು ತಲುಪುವುದಾದರೇ,  ಸಬ್ ಕಾ ಸಾಥ್, ಸಬ್ ಕಾ ವಿಕಾಸ್  ಆಶಯದಲ್ಲಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ  ಮೋದಿ  ಸರ್ಕಾರದ ನೀತಿಯಂತೆ ಪ್ರತಿ ತಿಂಗಳು ಫಲಾನುಭವಿಗಳ ಪಟ್ಟಿ ಬಹಿರಂಗಪಡಿಸಲಿ ಎಂದು ರಾಜೀವ್ ಚಂದ್ರಶೇಖರ್ ಸವಾಲು ಹಾಕಿದ್ದಾರೆ.

click me!