ಎದುರಾಳಿ ಪ್ರಮುಖರ ವಿರುದ್ಧದ ಕಾಂಗ್ರೆಸ್‌ ಅಭ್ಯರ್ಥಿ ಸಸ್ಪೆನ್ಸ್‌..!

By Kannadaprabha NewsFirst Published Mar 26, 2023, 2:30 AM IST
Highlights

ಬೊಮ್ಮಾಯಿ, ಎಚ್‌ಡಿಕೆ, ಅಶೋಕ್‌, ಈಶ್ವರಪ್ಪ, ವಿಜಯೇಂದ್ರ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಘೋಷಣೆ ಇಲ್ಲ, ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ 17 ಮಂದಿ ಪೈಕಿ 8 ಜನರ ಕ್ಷೇತ್ರಕ್ಕೂ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಇಲ್ಲ. 

ಬೆಂಗಳೂರು(ಮಾ.26):  ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಯಡಿಯೂರಪ್ಪ ಪುತ್ರ ವಿಜಯೇಂದ್ರ (ಶಿಕಾರಿಪುರ) ಸೇರಿದಂತೆ ಎದುರಾಳಿ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ದೊರಕಿಲ್ಲ.

ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಚಿಂತನೆ ಹೊಂದಿದೆ. ಆದರೆ, ವಿನಯ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಜತೆಗೆ, ವಿನಯ ಕುಲಕರ್ಣಿ ಅವರಿಗೆ ಅವರ ಬಯಕೆಯ ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ.

ವಿಜಯ ಸಂಕಲ್ಪ ಅಲ್ಲ, ವಿಜಯ ಮಹೋತ್ಸವ ಸಮಾವೇಶ' ರಣಕಹಳೆ ಮೊಳಗಿಸಿದ ನಮೋ!

ಉಳಿದಂತೆ ಸಚಿವರಾದ ಆರ್‌. ಅಶೋಕ್‌ (ಪದ್ಮನಾಭನಗರ), ಗೋವಿಂದÜ ಕಾರಜೋಳ ( ಮುಧೋಳ), ಮುರುಗೇಶ್‌ ನಿರಾಣಿ (ಬೀಳಗಿ), ಬಿ. ಶ್ರೀರಾಮುಲು (ಮೊಳಕಾಲ್ಮೂರು), ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ), ನಾಯಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌ (ವಿಜಯಪುರ), ಜಗದೀಶ್‌ ಶೆಟ್ಟರ್‌ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌), ಈಶ್ವರಪ್ಪ (ಶಿವಮೊಗ್ಗ), ಎಚ್‌.ಡಿ. ಕುಮಾರಸ್ವಾಮಿ (ಚನ್ನಪಟ್ಟಣ) ಸೇರಿದಂತೆ ಪ್ರಮುಖ ಎದುರಾಳಿ ಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿಲ್ಲ.

ಅದೇ ರೀತಿ ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿರುವ ಮಾಜಿ ಗಣಿ ಧಣಿ ಜನಾರ್ದನ ರೆಡ್ಡಿ ಅವರು ಸ್ಪರ್ಧಿಸಬಯಸಿರುವ ಗಂಗಾವತಿ ಕ್ಷೇತ್ರಕ್ಕೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇನ್ನೂ ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣದ 17 ಕ್ಷೇತ್ರಗಳ ಪೈಕಿ ಎಂಟು (ರಮೇಶ್‌ ಜಾರಕಿಹೊಳಿ- ಗೋಕಾಕ್‌, ಎಸ್‌.ಟಿ. ಸೋಮಶೇಖರ್‌- ಯಶವಂತಪುರ, ಗೋಪಾಲಯ್ಯ- ಮಹಾಲಕ್ಷ್ಮೇಲೇಔಟ್‌, ಬೈರತಿ ಬಸವರಾಜ- ಕೆ.ಆರ್‌. ಪುರ, ಶಿವರಾಮ ಹೆಬ್ಬಾರ್‌- ಯಲ್ಲಾಪುರ, ಡಾ. ಕೆ. ಸುಧಾಕರ್‌- ಚಿಕ್ಕಬಳ್ಳಾಪುರ, ಮಹೇಶ್‌ ಕುಮಟಳ್ಳಿ- ಅಥಣಿ, ನಾರಾಯಣ ಗೌಡ- ಕೆ.ಆರ್‌. ಪೇಟೆ) ಕ್ಷೇತ್ರಗಳಿಗೂ ಟಿಕೆಟ್‌ ಘೋಷಿಸಲಾಗಿಲ್ಲ.

click me!