ಸುಶಾಂತ್ ಸಿಂಗ್ ಸಾವಿನ ತನಿಖೆ: ಶಿವಸೇನೆ ಮೇಲೆ ಬಿಗಿ ಕುಣಿಕೆ?

Published : Aug 24, 2020, 11:49 AM IST
ಸುಶಾಂತ್ ಸಿಂಗ್ ಸಾವಿನ ತನಿಖೆ:  ಶಿವಸೇನೆ ಮೇಲೆ ಬಿಗಿ ಕುಣಿಕೆ?

ಸಾರಾಂಶ

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ ಮೊದಲ ಒಂದು ತಿಂಗಳು ನಾನ್‌ ಪೊಲಿಟಿಕಲ್‌ ಆಗಿ ಕಾಣುತ್ತಿತ್ತು. ಆದರೆ ಯಾವಾಗ ಬಿಹಾರ ಪೊಲೀಸರ ಬಳಿ ಸುಶಾಂತ್‌ ತಂದೆ ರಿಯಾ ವಿರುದ್ಧ ಪ್ರಕರಣ ದಾಖಲಿಸಿದರೋ ಆಗಿನಿಂದ ಇದು ರಾಜಕೀಯ ಹಗ್ಗಜಗ್ಗಾಟಕ್ಕೂ ಬಳಕೆ ಆಗುತ್ತಿದೆ. 

ನವದೆಹಲಿ (ಆ. 24): ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ ಮೊದಲ ಒಂದು ತಿಂಗಳು ನಾನ್‌ ಪೊಲಿಟಿಕಲ್‌ ಆಗಿ ಕಾಣುತ್ತಿತ್ತು. ಆದರೆ ಯಾವಾಗ ಬಿಹಾರ ಪೊಲೀಸರ ಬಳಿ ಸುಶಾಂತ್‌ ತಂದೆ ರಿಯಾ ವಿರುದ್ಧ ಪ್ರಕರಣ ದಾಖಲಿಸಿದರೋ ಆಗಿನಿಂದ ಇದು ರಾಜಕೀಯ ಹಗ್ಗಜಗ್ಗಾಟಕ್ಕೂ ಬಳಕೆ ಆಗುತ್ತಿದೆ. ಈಗೀಗ ನಮ್ಮ ದೇಶದಲ್ಲಿ ಯಾವುದೇ ಘಟನೆ ಕೂಡ ಮೋದಿ ಪರ ಮತ್ತು ವಿರುದ್ಧದ ಸಮುದ್ರ ಮಂಥನದ ರೂಪ ತಾಳುತ್ತದೆ. ಎ

ರಡು ತಿಂಗಳಲ್ಲಿ ಬಿಹಾರದ ಚುನಾವಣೆ ಇರುವುದರಿಂದ ಅಲ್ಲಿನ ರಾಜಕಾರಣಿಗಳು ‘ನೋಡಿ, ಒಬ್ಬ ಬಿಹಾರಿಯ ಜೊತೆ ಮುಂಬೈ ಹೇಗೆ ನಡೆದುಕೊಳ್ಳುತ್ತದೆ. ಶಿವಸೇನೆಗೆ ನಾವು ಪಾಠ ಹೇಗೆ ಕಲಿಸುತ್ತೇವೆ ನೋಡಿ’ ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೇಗೂ ಬಿಹಾರಿಗಳಿಗೆ ತಮ್ಮನ್ನು ವಿರೋಧಿಸಿ ‘ಮರಾಠಿ ಭೂಮಿ ಪುತ್ರ’ ಎಂದು ರಾಜಕೀಯ ಮಾಡುತ್ತಾ ಬಂದಿರುವ ಠಾಕ್ರೆ ಕುಟುಂಬದ ಬಗ್ಗೆ ಕೋಪ ಇದ್ದೇ ಇದೆ.

ಸುಶಾಂತ್ ಸಿಂಗ್ ಸಾವು: ತೀರ್ಪಿನ ಪರಿಣಾಮಗಳೇನು?

ಇನ್ನು ಒಂದು ವೇಳೆ ಸಿಬಿಐ ತನಿಖೆಯಿಂದ ಶಿವಸೇನೆ ಮೇಲೆ ಕುಣಿಕೆ ಬಿಗಿ ಆದರೆ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಶಿವಸೇನೆಯಿಂದ ಮೈತ್ರಿ ಕಳಚಿ ಬಿಜೆಪಿ ಜೊತೆ ಬಂದರೂ ಆಶ್ಚರ್ಯವಿಲ್ಲ. ಮೊದಲೇ ಆಡಳಿತದ ಅನುಭವ ಇಲ್ಲದೆ ಉದ್ಧವ್‌ ಠಾಕ್ರೆ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ತನಿಖೆಯ ಸಂದರ್ಭದಲ್ಲಿ ಹೊಸ ಸತ್ಯಗಳು ಹೊರಗೆ ಬಂದರೆ ಅವುಗಳನ್ನು ತಾಳಿಕೊಳ್ಳುವ ಶಕ್ತಿ ಶಿವಸೇನೆ ಜೊತೆಗಿನ ಮೈತ್ರಿಕೂಟಕ್ಕೆ ಇದ್ದಂತಿಲ್ಲ.

ಅಸಹಜ ಸಾವು ಮತ್ತು ಸಿಬಿಐ

ಇವತ್ತಿನ ಸೋಷಿಯಲ್‌ ಮೀಡಿಯಾ ದಿನಗಳಲ್ಲಿ ಯಾವುದೇ ಸಾವು ದಿಢೀರ್‌ ಆಗಿ ಇನ್ನಷ್ಟುತನಿಖೆಯ ಅವಶ್ಯಕತೆಯಿದೆ ಎಂಬ ತರ್ಕಕ್ಕೆ ಬಂದು ನಿಲ್ಲುವುದು ಸ್ವಾಭಾವಿಕ. ಹೀಗಾಗಿ ದೇಶದಲ್ಲಿ ಏನೇ ಅಸಹಜವಾಗಿ ನಡೆದರೂ ಸಿಬಿಐ ತನಿಖೆಗೆ ಬಂದು ನಿಲ್ಲುತ್ತದೆ. ಕರ್ನಾಟಕದಲ್ಲಿ 5 ವರ್ಷದ ಹಿಂದೆ ನಡೆದ ಡಿ.ಕೆ. ರವಿ ಅಸಹಜ ಸಾವು ಕೂಡ ದಿನಕ್ಕೊಂದು ತಿರುವು ಪಡೆಯುತ್ತಿತ್ತು.

ಎಷ್ಟರ ಮಟ್ಟಿಗೆ ಎಂದರೆ ಪ್ರಮುಖ ರಾಜಕಾರಣಿ ಒಬ್ಬರು ಬಂದು ನೇಣು ಬಿಗಿದರು ಎನ್ನುವಷ್ಟರ ಮಟ್ಟಿಗೆ. ಆದರೆ ಕಳೆದ ವರ್ಷ ಈ ಪ್ರಕರಣ ಪ್ರೇಮದ ಕಾರಣದಿಂದ ನಡೆದ ಆತ್ಮಹತ್ಯೆ ಎಂದು ಸಿಬಿಐ ಹೇಳಿದೆ. ಇದನ್ನೇ ಆಗಿನ ಬೆಂಗಳೂರು ಪೊಲೀಸ್‌ ಆಯುಕ್ತರು ಹೇಳಿ ಭಾರೀ ಟೀಕೆಗೆ ಒಳಗಾಗಿದ್ದರು. ಕೊಡಗಿನ ಪೊಲೀಸ್‌ ಅಧಿಕಾರಿ ಗಣಪತಿ ಕೊಲೆ ಪ್ರಕರಣ ಕೂಡ ಆತ್ಮಹತ್ಯೆ ಎಂದು ವರದಿ ಬಂದಿದೆ. ಮುಂಬೈ ನಟಿ ಜಿಯಾ ಖಾನ್‌ ಸಾವಿನ ಪ್ರಕರಣದಲ್ಲಿ ಕೂಡ ಮೃತದೇಹದ ಬಳಿ ಸೂಸೈಡ್‌ ನೋಟ್‌ ದೊರೆತರೂ ನಟ ಸೂರಜ್‌ ಪಾಂಚೋಲಿ ವಿರುದ್ಧ ಸಾಕ್ಷ್ಯ ಕ್ರೋಢೀಕರಿಸಲು ಸಾಧ್ಯವಾಗಿಲ್ಲ. ಹತ್ಯೆ ಎಂದು ಸಾಬೀತಾದರೆ ಸರಿ, ಇಲ್ಲವಾದರೆ ಆತ್ಮಹತ್ಯೆ ಪ್ರಕರಣಗಳಲ್ಲಿ aಚಿಛಿಠಿಞಛ್ಞಿಠಿ ಟ್ಛ s್ಠಜ್ಚಿಜಿdಛಿಸಾಬೀತು ಮಾಡುವುದು ದೇಶದ ಅತ್ಯುನ್ನತ ತನಿಖಾ ಸಂಸ್ಥೆಗೂ ಕಷ್ಟಎಂದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?