ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ನಗರದ ಉಪ್ಪಾರ ಮೊಹಲ್ಲಾದಿಂದ ಸಗರದ ಎಲ್ಲಮ್ಮ ದೇವಸ್ಥಾನದವರೆಗೆ ರಾಜು ಸುಣ್ಣದಮನಿ 18 ಕಿ.ಮೀ. ವರೆಗೆ ದೀಡ್ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿ ಹರಕೆ ತೀರಿಸಿದರು.
ಸುರಪುರ (ಮೇ.27) : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ನಗರದ ಉಪ್ಪಾರ ಮೊಹಲ್ಲಾದಿಂದ ಸಗರದ ಎಲ್ಲಮ್ಮ ದೇವಸ್ಥಾನದವರೆಗೆ ರಾಜು ಸುಣ್ಣದಮನಿ 18 ಕಿ.ಮೀ. ವರೆಗೆ ದೀಡ್ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜಾ ರಾಮಪ್ಪ ನಾಯಕ(Raja venkatappa nayak MLA surpur) ಮತ್ತು ಪ್ರಕಾಶ ಹಳ್ಳಿಗಿಡ, ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ವಿಜಯ ಸಾಧಿಸಿದ ಬಳಿಕ ತಾಲೂಕಿನಲ್ಲಿ ಹರಕೆ, ಪೂಜೆ ಪುನಸ್ಕಾರಗಳು ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ರಾಜು ಸುಣ್ಣದಮನಿ ನಿಸ್ವಾರ್ಥ ಮನೋಭಾವದಿಂದ ಬಿಸಿಲಿನ ಪ್ರಖರತೆಯನ್ನೂ ಲೆಕ್ಕಿಸದೆ 18 ಕಿ.ಮೀ. ದೀಡ್ ನಮಸ್ಕಾರ ಹಾಕುತ್ತಿದ್ದಾರೆ. ಈ ಬಾರಿಯ ಗೆಲುವು ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನದ ಗೆಲುವಾಗಿದೆ ಎಂದು ತಿಳಿಸಿದರು.
undefined
ರಾಜುಗೌಡ ಶಾಸಕರಾಗಲೆಂದು ನಾಲ್ಕು ವರ್ಷ ಬರಿಗಾಲಲ್ಲೇ ತಿರುಗಿದವರು!
ನೂತನ ಶಾಸಕ, ಅನುಭವಿ ರಾಜಕಾರಣಿ, ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ರಾಜಾ ವೆಂಕಟಪ್ಪ ನಾಯಕರಿಗೆ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ನೀಡಬೇಕು. ಸುಮಾರು ಏಳು ಚುನಾವಣೆಗಳಲ್ಲಿ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದು, ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅವರ ಅಪಾರ ಅನುಭವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ಹರಕೆ ತೀರಿಸಲಾಗಿದೆ ಎಂದರು. ಮುಖಂಡ ಹಣಮಂತ ನಗರಖಾನಿ, ಮಹೇಶ್ ಜೋಶಿ, ಸಂತೋಷ್ ಕುಮಾರ ಸಗರ ಸೇರಿದಂತೆ ಇತರರಿದ್ದರು.