ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಶ್ರಮಿಸುವೆ: ಶಾಸಕ ಕೆ.ವೈ.ನಂಜೇಗೌಡ

By Kannadaprabha News  |  First Published May 18, 2023, 10:23 PM IST

ನನ್ನ ಮೊದಲ ಅದ್ಯತೆ ತಾಲೂಕಿನಲ್ಲಿ ಎರಡನೇ ಬಾರಿಗೆ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ತಾಲೂಕಿನ ಜನತೆಯ ಋುಣ ತೀರಿಸುವ ಸಲುವಾಗಿ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.


ಮಾಲೂರು (ಮೇ.18): ರಾಜ್ಯದ ಜನತೆ ಕಾಂಗ್ರೆಸ್‌ಗೆ ಸಂಪೂರ್ಣವಾಗಿ ಆಶ್ರೀರ್ವದಿಸಿದ್ದು, ಅದೃಷ್ಟಇದ್ದರೆ ಸಚಿವನಾಗುತ್ತೇನೆ. ಆದರೆ ನನ್ನ ಮೊದಲ ಅದ್ಯತೆ ತಾಲೂಕಿನಲ್ಲಿ ಎರಡನೇ ಬಾರಿಗೆ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ತಾಲೂಕಿನ ಜನತೆಯ ಋುಣ ತೀರಿಸುವ ಸಲುವಾಗಿ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಮಾಲೂರು ಹೊಸಕೋಟೆ ರಸ್ತೆಯ ವಿಶ್ವನಾಥ ಕನ್ವೆನ್ಷನ್‌ ಹಾಲ್‌ನಲ್ಲಿ ಮಾಲೂರು ಮಾಸ್ತಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಅವರು, ಈ ಬಾರಿ ನನ್ನನ್ನು ಸೋಲಿಸಲು ಎಲ್ಲ ಪಕ್ಷದವರು ಪ್ರಯತ್ನ ನಡೆಸಿದರು. ಆದರೆ ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟು ಶಾಸಕರಾಗಲು ಅವಕಾಶ ನೀಡಿದ್ದಾರೆ ಎಂದರು.

Latest Videos

undefined

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವೆ: ಆನಂದ್ ಆಸ್ನೋಟಿಕರ್

ಅಂತರ ಕಡಿಮೆ ಇದ್ದರೂ ಗೆಲುವೆ: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪುರಸಭೆ ಅಧ್ಯಕ್ಷರು, ಸದಸ್ಯರು ಇರುವ ಕಡೆ ಚುನಾವಣೆಯಲ್ಲಿ ಮತಗಳಿಕೆಯಲ್ಲಿ ಕಡಿಮೆ ಬಂದಿದೆ. ಗೆಲುವಿನ ಅಂತರ ಕಡಿಮೆ ಇರಬಹುದು. ಆದರೆ ಅದು ಗೆಲುವೇ. ಕಾರ್ಯಕರ್ತರು ತಾಲೂಕಿನ ಯಾವ ಮತಗಟ್ಟೆಯಲ್ಲಿ ಮತಗಳು ಕಡಿಮೆ ಬಂದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಮುಂಬರುವ ಚುನಾವಣೆ ವೇಳೆಗೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದರು.

ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲಿಲ್ಲ. ವೈಯಕ್ತಿಕ ದ್ವೇಷದಿಂದ ರಾಜ್ಯ, ಜಿಲ್ಲೆಯಲ್ಲಿ ಬಿಜೆಪಿ ನೆಲಕಚ್ಚಿದೆ. ಇಲ್ಲಿನ ಸಂಸದರು ಅಭಿವೃದ್ಧಿಗೆ ಸಹಕಾರ ನೀಡಿಲ್ಲ, ದ್ವೇಷ, ಹಗೆತನ ಸಾಧಿಸುವುದೆ ಅವರ ಕೆಲಸವಾಗಿತ್ತು. ಅಧಿಕಾರಿಗಳು ನಮ್ಮ ಮಾತು ಕೇಳಲಿಲ್ಲ. ಅಧಿಕಾರಿಗಳು ಭಯಭೀತರಾಗಿದ್ದರು. ಲಂಚಗುಳಿತನ ಸರ್ಕಾರಿ ಕಚೇರಿಗಳಲ್ಲಿ ತುಂಬಿಹೋಗಿತ್ತು. ಭ್ರಷ್ಟಾಚಾರದಿಂದ ನೋವು ತಿಂದಿದ್ದೇವೆ ಎಂದರು.

'ಪ್ಲಾಟಿನಂ ರೇಟಿಂಗ್' ಗರಿ ಮುಡಿಗೇರಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2!

ಕ್ಷೇತ್ರದ ಅಭಿವೃದ್ಧಿಗೆ ಅನುದಾನ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ಸರ್ಕಾರದಿಂದ ಹೆಚ್ಚುವರಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವ ಮೂಲಕ ತಾಲೂಕಿಗೆ ಒಳ್ಳೆಯ ಅಧಿಕಾರಿಗಳನ್ನು ಹಾಕಿಸಿಕೊಂಡು ಬಂದು ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು. ಈಗಿನ ನಮ್ಮ ಸರ್ಕಾರದಿಂದ ಪಟ್ಟಣದ ಅಭಿವೃದ್ಧಿಗೆ 50 ಕೋಟಿ ರೂಗಳ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಎಂ.ಎನ್‌.ಅನಿಲ್‌ ಕುಮಾರ್‌, ಮಾಜಿ ಶಾಸಕ ಎ.ನಾಗರಾಜು, ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ ಮಾತನಾಡಿದರು.

click me!