ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ

Published : May 18, 2023, 10:02 PM IST
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ

ಸಾರಾಂಶ

ಪಕ್ಷದ ಕೆಲವರ ಪಾಪದ ಕೆಲಸದಿಂದ ನನಗೆ ಸೋಲಾಯಿತು. ತಮ್ಮ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ. ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ ಎಂದು ಚಾಮರಾಜನಗರ ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಕಿಡಿಕಾರಿದರು. 

ಚಾಮರಾಜನಗರ (ಮೇ.18): ಪಕ್ಷದ ಕೆಲವರ ಪಾಪದ ಕೆಲಸದಿಂದ ನನಗೆ ಸೋಲಾಯಿತು. ತಮ್ಮ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ. ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ ಎಂದು ಚಾಮರಾಜನಗರ ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಕಿಡಿಕಾರಿದರು. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಚಾಮರಾಜನಗರಕ್ಕೆ ಆಗಮಿಸಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಕೃತಜ್ಞತಾ ಸಭೆ ನಡೆಸಿದರು. ಕೆಲವರು ಈ ಪಾಪದ ಕೆಲಸ ಮಾಡಿದ್ದಾರೆ, 7-8 ಮಂದಿಯಿಂದ ಈ ಸೋಲುಂಟಾಯಿತು, ನನ್ನ ಸಮಾಜದವರೇ ನನಗೆ ಕೈ ಕೊಟ್ಟರು, ಯಾರಾರ‍ಯರೋ ಬೋರ್ಡ್‌ ಅಧ್ಯಕ್ಷರು, ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದರು.

ಈಗ ಅವರು ಒಳೇಟು ಕೊಟ್ಟರು, ಇವರು ಒಳೇಟು ಕೊಟ್ಟರು, ಕ್ರಮ ಕೈಗೊಳ್ಳಿ ಎನ್ನುತ್ತಿದ್ದೀರಿ, ಈ ಕೆಲಸವನ್ನು 6 ತಿಂಗಳ ಹಿಂದೆ ಮಾಡಬೇಕಿತ್ತು, ಆಗ ಮಾಡಲಿಲ್ಲ- ಈಗ ಮಾಡಿ ಎನ್ನುತ್ತಿದ್ದೀರಿ, ನಾನು ನಿಮ್ಮನ್ನು ನಂಬಿಕೊಂಡಿದ್ದೆ ತಪ್ಪಾಯಿತು. ಮಾದೇಶ್ವರನ ಆಣೆ. ನನ್ನ ಮಕ್ಕಳಾಣೆ ನಾನಾಗಿ ಇಲ್ಲಿಗೆ ಬರಲಿಲ್ಲ. ಹೈಕಮಾಂಡ್‌ ಹೇಳಿದ್ದರಿಂದ ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಇಲ್ಲಿಗೆ ಬಂದೆ. ಪಕ್ಷ ತಾಯಿಗೆ ಸಮಾನ ಪಕ್ಷದೊಳಗಿದ್ದು, ದ್ರೋಹ ಬಗೆಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್‌ ಅವರೇ ನೈತಿಕತೆ ಇದ್ದರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಒದ್ದು ಓಡಿಸಿ ಎಂದು ಸೂಚನೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವೆ: ಆನಂದ್ ಆಸ್ನೋಟಿಕರ್

ಅಮಿತ್‌ ಷಾ ಮಾತೇ ಮುಳುವಾಯ್ತಾ: ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವರುಣದಲ್ಲಿ ಸೋಮಣ್ಣ ಗೆಲ್ಲಿಸಿ ದೊಡ್ಡ ವ್ಯಕ್ತಿ ಮಾಡುತ್ತೇವೆ ಅಂದರು. ಇದನ್ನು ಕೇಳಿಸಿಕೊಂಡ ಕೆಲವರು ನನಗೆ ಬಗಣಿಗೂಟ ಇಟ್ಟರು ಎಂದು ಮಾಜಿ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷ ಇವತ್ತಿಂದ ನಿಮ್ಮ ಪೆನ್ನು ಪೇಪರ್‌ ಕೆಲಸ ಮಾಡಲಿ. ಪಕ್ಷ ವಿರೋ​ಧಿ ಚಟುವಟಿಕೆ ಮಾಡಿದವರನ್ನು ಕಿತ್ತು ಹಾಕಲಿ ಎಂದು ಚಾಮರಾಜನಗರ ಕ್ಷೇತ್ರ ಸೋಲಿನ ಕುರಿತು ಸೋಮಣ್ಣ ಪರೋಕ್ಷವಾಗಿ ಒಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರಕ್ಕೆ ಅವನು ಮೊದಲು ಬಂದಾಗಲೇ ಒಳಕ್ಕೆ ಬಿಡಬಾರದಿತ್ತು. ಮಠಗಳಿಗೆ ಅನುದಾನ ನೀಡಿ ಅದರಲ್ಲೇ ಕಮಿಷನ್‌ ಪಡೆದ. ನನ್ನ ವಿರುದ್ಧ ಜಾತಿ ಎತ್ತಿಕಟ್ಟಿದ, ನನ್ನ ಮಗ ಇಲ್ಲಿಗೆ ಬರುತ್ತಾನೆ ಎಂದು ಕಥೆ ಕಟ್ಟಿದ. ನನ್ನ ವಿರುದ್ಧ ಅಪಪ್ರಚಾರ ಮಾಡಿದ. ಅವನ ಮಾತು ಕೇಳಿಕೊಂಡು ನನ್ನ ವಿರುದ್ಧ ಕೆಲವರು ಕುತಂತ್ರ ಮಾಡಿದರು. ಅವನಿಗೆ ಯಾರು ಹೇಳಿ ಕೊಟ್ಟರು ಎಂದು ನನಗೆ ಗೊತ್ತು. ಯಥಾರಾಜ ತಥಾ ಪ್ರಜೆ ಎಂದರು. ನೀವೆಲ್ಲಾ ಬೆಂಗಳೂರಿಗೆ ಹೋಗಿ ಪಕ್ಷಕ್ಕೆ ದೂರು ಕೊಟ್ಟರೂ ಏನು ಪ್ರಯೋಜನವಿಲ್ಲ. ನಾನು, ಕಾಂಗ್ರೆಸ್‌ನಲ್ಲಿ ಇದ್ದಿದ್ದಾಗ ನನ್ನ ಬೆಲೆ ಏನೆಂದು ಗೊತ್ತಾ, ಈಗಲೂ ನಾನು ಕಾಂಗ್ರೆಸ್‌ನಲ್ಲಿದ್ದರೆ ಹೇಗಿರುತ್ತಿದ್ದೆ ಗೊತ್ತಾ ಎಂದರು. ನಮ್ಮ ಸಮಾಜದವರು ಬೆಂಗಳೂರಿನಲ್ಲಿ ಕುಳಿತು ಆಟವಾಡಿಸುತ್ತಿದ್ದಾರೆ. ಇಲ್ಲಿಗೆ ಒಬ್ಬ ಬಂದು ಆಟವಾಡುತ್ತಿದ್ದಾನೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನನ್ನ ಮನೆ ಹಾಳು ಮಾಡಿದ್ರು: ನನ್ನ ಸೋಲಿಗೆ ಯಾರ ಕಾರಣ ಅಂತ ಗೊತ್ತಿದೆ. ಯಾರೂ ಈ ಮಾಮಾ ಕೆಲಸ ಮಾಡಿದ್ದು ಅಂತಾ ಗೊತ್ತು. ಒಂದು ಬುಕ್‌ ಬರೆಯೋವಷ್ಟುನಂಗೂ ಗೊತ್ತಿದೆ. ನಾನು ಏನೂ ತಿಳಿಯದೆ ಇರುವ ಮುಗ್ಧ ಅಲ್ಲ. ಎಂಟತ್ತು ಜನರ ಪಾಪದ ಕೆಲಸದಿಂದ ನನ್ನ ಮನೆ ಹಾಳಾಗಿದೆ. ಮನೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಜೊತೆಯಲ್ಲೇ ಇದ್ದೆ ಕತ್ತು ಕುಯ್ದಿದ್ದಾರೆ. ಸ್ವಂತ ತಮ್ಮನ್ನೇ ಮರ್ಡರ್‌ ಮಾಡಿದವನು. ಅಂತಹವರ ಜೊತೆ ಹೋಗುವ ನಮ್ಮವರು ಎಂತಹ ಮುಟ್ಟಾಳರು. ನಾನಾಗೆ ಕೇಳಿಕೊಂಡು ಇಲ್ಲಿಗೆ ಬಂದಿರಲಿಲ್ಲ, ಪಕ್ಷದ ಆದೇಶದ ಮೇರೆಗೆ ಬಂದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೆ. ಆದರೆ, ಒಬ್ಬನಿಗೋಸ್ಕರ ಇಡಿ ಜಿಲ್ಲೆ ಹಾಳು ಮಾಡಿದರು ಎಂದು ವಿಜಯೇಂದ್ರ ಆಪ್ತ ರುದ್ರೇಶ್‌ ವಿರುದ್ಧ ಸೋಮಣ್ಣ ಪರೋಕ್ಷ ವಾಗ್ದಾಳಿ ನಡೆಸಿದರು.

'ಪ್ಲಾಟಿನಂ ರೇಟಿಂಗ್' ಗರಿ ಮುಡಿಗೇರಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2!

ಸೋಲಿಸಲು ಡೈರೆಕ್ಷನ್‌ ಅಲ್ಲಿಂದಾನೆ ಬಂದಿತ್ತು: ನನ್ನನ್ನು ಸೋಲಿಸಲು ಅಲ್ಲಿಂದಾನೆ ಡೈರಕ್ಷನ್‌ ಬಂದಿತ್ತು. ನನ್ನ ಸೋಲಿಗೆ ನಮ್ಮ ಸಮಾಜದವರೇ ಕಾರಣ. ಮುಂಚೂಣಿ ನಾಯಕರೇ ಕಾರಣ. ಯಾರ ಹೆಸರು ಹೇಳದೆ ಪಕ್ಷದಲ್ಲಿರುವ ತಮ್ಮದೇ ಸಮಾಜದ ಮುಂಚೂಣಿ ನಾಯಕನ ವಿರುದ್ಧ ಗುಡುಗಿದರು. 12 ಚುನಾವಣೆ ಎದುರಿಸಿರುವ ನನಗೆ ಯಾವತ್ತು ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ. ಇಲ್ಲಿಗೆ ನಾನಾಗಿಯೇ ಬರಲ್ಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ. ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು. ಕಾಯಕಲ್ಪ ಕೊಡಬೇಕು ಅಂದ್ಕೊಂಡಿದ್ದೆ. ಆದರೆ, ನಮ್ಮ ಸಮಾಜದವರೇ ನನ್ನ ಸೋಲಿಗೆ ಕಾರಣ ಎಂದು ಅಸಮಧಾನ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ