ಶಾಸಕ ಪ್ರದೀಪ್ ಈಶ್ವರ್ ಗೃಹ ಕಚೇರಿ ಮೇಲೆ ಕಲ್ಲುತೂರಾಟ: ಕಿಟಕಿಯ ಗಾಜು ಪುಡಿ ಪುಡಿ

By Kannadaprabha News  |  First Published Jun 6, 2024, 8:23 AM IST

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಚಿಕ್ಕಬಳ್ಳಾಪುರದ ಗೃಹ ಕಚೇರಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.


ಚಿಕ್ಕಬಳ್ಳಾಪುರ (ಜೂ.06): ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಚಿಕ್ಕಬಳ್ಳಾಪುರದ ಗೃಹ ಕಚೇರಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದು ವಿಜೇತ ಅಭ್ಯರ್ಥಿ ಡಾ. ಕೆ ಸುಧಾಕರ್ ರವರ ವಿಜಯೋತ್ಸವವೂ ನಡೆಯಿತು. 

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆಗೆ ಅಂಟಿಕೊಂಡಿರುವಂತೆ ಕಂದವಾರ ಗ್ರಾಮದ ಸಮೀಪದ ಗಣೇಶ್ ಪದ್ಮ ಲೇಔಟ್‌ನಲ್ಲಿರುವ ಶಾಸಕ ಪ್ರದೀಪ್ ಈಶ್ವರ್ ರವರ ಮನೆಗೆ ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಬುಧವಾರ ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಾಂತರ ಠಾಣಾ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ಫುಟೇಜ್ ಪರಿಶೀಲನೆ ನಡೆಸಿದರು. ಕಳೆದ ರಾತ್ರಿ ಕಲ್ಲೆಸೆತ ಪ್ರಕರಣ ನಡೆದ ಸಂದರ್ಭದಲ್ಲಿ ಶಾಸಕರು ಮನೆಯಲ್ಲಿ ಇರಲಿಲ್ಲ.

Tap to resize

Latest Videos

ಗೃಹಕಚೇರಿ ಮೇಲೆ ಕಲ್ಲು: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಫಲಿತಾಂಶದ ದಿನವೆ ಘೋಷಣೆ ಕೂಗಿ ನಂತರ ಮಂಗಳವಾರ ತಡರಾತ್ರಿ ಶಾಸಕ ಪ್ರದೀಪ್ ಈಶ್ವರ್ ಅವರ ಗೃಹ ಕಚೇರಿ ಮೇಲೆ ಕಲ್ಲು ತೂರಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಪ್ರಕರಣದ ಬಗ್ಗೆ ದೂರವಾಣಿ ಮೂಲಕ ಶಾಸಕ ಪ್ರದೀಪ್ ಈಶ್ವರ್ ರನ್ನು ಸಂಪರ್ಕಿಸಿದಾಗ, ನನಗೂ ಈ ವಿಷಯ ತಿಳಿದು ಬಂದಿದೆ. ನಾನು ಈ ಬಗ್ಗೆ ಕೂಲಂಕಶ ತನಿಖೆಗೆ ಪೊಲೀಸ್ ಇಲಾಖೆಗೆ ತಿಳಿಸಿದ್ದು ಬೆಂಗಳೂರಿನಿಂದ ಶ್ವಾನ ದಳ ಮತ್ತು ಇತರ ತಜ್ಞರು ಪರಿಶೀಲಿಸಲಿದ್ದಾರೆ. ಸದರಿ ಪ್ರಕರಣವನ್ನು ನಾನು ಮುಖ್ಯಮಂತ್ರಿಗಳಿಗೂ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತಂದಿದ್ದೇನೆ. 

ಪದತ್ಯಾಗ ಮಾಡಲು ಸಿಎಂ ಸಿದ್ದು ಸೂಚನೆ ಹಿನ್ನೆಲೆ: ಸಚಿವ ಬಿ.ನಾಗೇಂದ್ರ ಇಂದೇ ರಾಜೀನಾಮೆ?

ಅವರೂ ಪ್ರಕರಣದ ತೀವ್ರತೆಯನ್ನು ಗಮನಿಸಿ ಪ್ರಕರಣವನ್ನು ಕೂಲಂಕಶವಾಗಿ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆ ನಡೆದು ಒಂದು ವರ್ಷವಾಯಿತು. ಈ ವರ್ಷದ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ, ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಬಂದ ದಿನವೇ ಈ ರೀತಿ ಕಿಡಿಗೇಡಿಗಳು ರಾಜಕೀಯ ಮತ್ಸರದಿಂದ ಈ ರೀತಿ ಕಲ್ಲೆಸೆದಿರುವುದು ತಮ್ಮ ಕ್ಷೇತ್ರದಲ್ಲಿ ರಾಜಕೀಯ ಮತ್ಸರದ ವಾತಾವರಣ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!