ಕಳೆದ 5 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬುವುದು ಸಂಪೂರ್ಣವಾಗಿ ವಿಫಲವಾಗಿದೆ, ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಕೋಲಾರ (ಡಿ.02): ಕಳೆದ 5 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬುವುದು ಸಂಪೂರ್ಣವಾಗಿ ವಿಫಲವಾಗಿದೆ, ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಬರ ಅಧ್ಯಯನಕ್ಕೆ ಯಾವೂದೇ ತಾಲೂಕಿಗೂ ಭೇಟಿ ನೀಡಿಲ್ಲ, ಬರಪರಿಹಾರಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದ ಜಿ.ಪಂನಲ್ಲಿ ದಿಶಾ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಣ ವಸೂಲಾತಿಯಲ್ಲಿ ತೊಡಗಿದೆ. ಕೆಎಂಎಫ್ ಕಟ್ಟಡಕ್ಕೆ ಹಣ ಬಿಡುಗಡೆ ಮಾಡಿದರೆ ತಮ್ಮ ಕುಟುಂಬದವರನ್ನು ಕರೆದುಕೊಂಡು ವಿದೇಶಗಳಲ್ಲಿ ಮೋಜುಮಸ್ತಿ ಮಾಡಲು ಹೋಗಿದ್ದಾರೆ. ಕೆ.ಎಂ.ಎಫ್ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸದೆ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ: ಮಾಜಿ ಸಚಿವ ಸುಧಾಕರ್ ಭವಿಷ್ಯ
ಜನರ ಸಮಸ್ಯೆಗಳ ಕಡೆಗಣನೆ: ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ, ಕಳೆದ ಬಿಜೆಪಿ ಆಡಳಿತದಲ್ಲಿನ ಅಭಿವೃದ್ದಿ ಯೋಜನೆಗಳನ್ನು ರಾಜ್ಯ ಸರ್ಕಾರ ತಾನು ಮಾಡಿದಂತೆ ಬಿಂಬಿಸಲು ಜೇಬಿನಲ್ಲಿ ಕತ್ತರಿ ಇಟ್ಟುಕೊಂಡು ಟೇಪುಗಳನ್ನು ಕತ್ತರಿಸುವ ಮೂಲಕ ಪ್ರಚಾರ ಗಿಟ್ಟಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದಿಂದ ನಿರುದ್ಯೋಗಿಗಳಿಗೆ ಕಳೆದ ೫ ತಿಂಗಳಿಂದ ಭತ್ಯೆ ನೀಡುವುದಾಗಿ ಭರವಸೆ ನೀಡಿ ಈವರೆಗೆ ಮೂಗಿಗೆ ತುಪ್ಪ ಸವರುತ್ತಾ ಬರುತ್ತಿದೆ, ಗೃಹ ಲಕ್ಷ್ಮೀ ಯೋಜನೆಯಲ್ಲಿ ಹಗರಣಗಳ ಸರಮಾಲೆ ಇದೆ, ಶಕ್ತಿ ಯೋಜನೆಯಲ್ಲಿ ಬಸ್ ಸೌಲಭ್ಯವನ್ನು ಕಡಿತಗೊಳಿಸಿದೆ, ಕೇಂದ್ರ ಸರ್ಕಾರ ನೀಡುತ್ತಿರುವ ಪಡಿತರದಲ್ಲೂ ಕಡಿತ ಮಾಡಿ ನೀಡಲಾಗುತ್ತಿದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭ್ರಷ್ಟಚಾರದಲ್ಲಿ ತೊಡಗಿಸಿಕೊಂಡು ಚಾಮುಂಡೇಶ್ವರಿಗೆ ಹಣ ಹಾಕಿರುವುದು ಅಮಂಗಳಕರ ಎಂದರು.
ಶಾಲೆಗಳಿಗೆ ಬಾಂಬ್ ಬೆದರಿಕೆ ಉಗ್ರರ ಕೆಲಸದಂತಿದೆ: ಆರ್.ಅಶೋಕ್
ಹಾಲು ಖರೀದಿ ದರ ಕಡಿತ ಮಾಡಬೇಡಿ: ರೈತರು ಮೇವು ಹೊಂದಿಸಲು ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಒಕ್ಕೂಟದ ಆಡಳಿತ ಮಂಡಳಿ ವಿಲನ್‌ಗಳಂತೆ ವರ್ತಿಸುತ್ತಿದೆ ಹಾಲಿನ ದರ ಕಡಿಮೆ ಮಾಡಬೇಡಿ ಹಾಲು ಉತ್ಪಾದಕರ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು.