
ವೆಲ್ಲೂರು: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಸ್ಟ್ಯಾಂಡ್ ಅಪ್ ಕಮೆಡಿಯನ್ ಎಂದು ಟವಿಕೆ ಪಕ್ಷದ ಸ್ಥಾಪಕ, ನಟ ವಿಜಯ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ಟಿವಿಕೆ ಸಭೆಯಲ್ಲಿ ಮಾತನಾಡಿದ ಅವರು, ‘ತಮ್ಮ ಆಳ್ವಿಕೆಯಲ್ಲಿ ತಮಿಳುನಾಡು ಸೂಪರ್‌ಸ್ಟಾರ್ ರಾಜ್ಯ ಎಂದು ಸ್ಟಾಲಿನ್ ಹೇಳುತ್ತಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಕಾಮರಾಜ್, ಅಣ್ಣಾದೊರೈ ಮತ್ತು ಎಂಜಿಆರ್ ಅವರ ಅಡಿಯಲ್ಲಿ ಸೂಪರ್‌ಸ್ಟಾರ್ ರಾಜ್ಯವಾಗಿತ್ತು, ಆದರೆ ಸ್ಟಾಲಿನ್ ಅವರ ಅಡಿಯಲ್ಲಿ ಅಲ್ಲ. ಈಗ ಅದು ಸೂಪರ್ ಸ್ಟ್ಯಾಂಡ್-ಅಪ್ ಕಾಮಿಕ್ ನಡೆಸುವ ರಾಜ್ಯವಾಗಿದೆ’ ಎಂದು ವ್ಯಂಗ್ಯವಾಡಿದರು.
ಅಲ್ಲದೆ, ‘ನಾನು ಅನುಭವ ಇಲ್ಲದಿದ್ದರೂ ಹುಲ್ಲು ತಿನ್ನಿಸಿ ಜಲ್ಲಿಕಟ್ಟು ಗೂಳಿಯನ್ನು ಪಳಗಿಸುವ ಪುಟ್ಟ ಬಾಲಕನಂತೆ’ ಎಂದು ಹೇಳಿದ ವಿಜಯ್, ಸ್ಟಾಲಿನ್‌ರನ್ನು ಮಣಿಸುವ ಪರೋಕ್ಷ ಎಚ್ಚರಿಕೆ ನೀಡಿದರು.
ಪಿಟಿಐ ನವದೆಹಲಿ‘ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ತಮಿಳುನಾಡು ಸಿಎಂ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಸಮರ್ಥರು. ಹಾಗಾಗಿ ಅವರು ಸಂಚಾಲಕ ಸ್ಥಾನಕ್ಕೆ ಸೂಕ್ತ. ಇದು ಕಾಂಗ್ರೆಸ್ ಹಿತಾಸಕ್ತಿಗೂ ಒಳ್ಳೆಯದು’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಪಿಟಿಐ ಜತೆ ಈ ಬಗ್ಗೆ ಮಾತನಾಡಿರುವ ಅವರು, ‘ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ 2029ರ ಗುರಿ ತಲುಪಬೇಕಾದರೆ ಇಂಡಿಯಾ ಕೂಟವನ್ನು ಮುನ್ನಡೆಸಲು ಸ್ಟಾಲಿನ್ ಅವರಿಗಿಂತ ಉತ್ತಮರು ಬೇರೆ ಯಾರಿಲ್ಲ. ಮುಂದಿನ ಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲ್ಲಿಸುವುದು ಅವರಿಂದ ಸಾಧ್ಯ. ಇಲ್ಲದಿದ್ದರೆ ರಾಹುಲ್ ಗಾಂಧಿ ಪ್ರಧಾನಿಯಾಗಲು ಸಾಧ್ಯವಿಲ್ಲ’ ಎಂದರು.ಇದೇ ವೇಳೆ ಅವರು ‘ಡಿಎಂಕೆ ಹಲವು ವರ್ಷಗಳಿಂದ ಕಾಂಗ್ರೆಸ್‌ನ ಅತ್ಯಂತ ವಿಶ್ವಾಸಾರ್ಹ ಮಿತ್ರಪಕ್ಷ. ಸ್ಟಾಲಿನ್ ಒಗ್ಗಟ್ಟನ್ನು ಹೇಗೆ ಸೃಷ್ಟಿಸಬೇಕೆಂದು ತಿಳಿದಿರುವ ಸಮರ್ಥ ಆಡಳಿಗಾರ’ ಎಂದು ಹೊಗಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.