Prajadhwani yatre: ಬಿಜೆಪಿ ಸರ್ಕಾರದ ಪಾಪದ ಕೊಡ ಭರ್ತಿ: ಎಸ್‌.ಎಸ್‌.ಮಲ್ಲಿಕಾರ್ಜುನ ವಾಗ್ದಾಳಿ

By Kannadaprabha News  |  First Published Jan 18, 2023, 12:17 PM IST

ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದ್ದು, ಶೇ.40 ಕಮಿಷನ್‌ ಸರ್ಕಾರದ ವಿರುದ್ಧ ಧ್ವನಿ ಎತ್ತಲು, ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಜ.19ರಂದು ಪ್ರಜಾಧ್ವನಿ ಯಾತ್ರೆ ಜಿಲ್ಲೆ, ನಗರಕ್ಕೆ ಬರಲಿದೆ ಎಂದು ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.


ದಾವಣಗೆರೆ (ಜ.18) : ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದ್ದು, ಶೇ.40 ಕಮಿಷನ್‌ ಸರ್ಕಾರದ ವಿರುದ್ಧ ಧ್ವನಿ ಎತ್ತಲು, ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಜ.19ರಂದು ಪ್ರಜಾಧ್ವನಿ ಯಾತ್ರೆ ಜಿಲ್ಲೆ, ನಗರಕ್ಕೆ ಬರಲಿದೆ ಎಂದು ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ ಹಾವೇರಿಯಿಂದ ಬಸ್ಸಿನಲ್ಲಿ ಹೊರಟು, ದಾವಣಗೆರೆಗೆ ಅದೇ ಮಧ್ಯಾಹ್ನ 4ಕ್ಕೆ ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು, ಹೈಸ್ಕೂಲ್‌ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ ಎಂದರು. ಎಸಿಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಪ ಸದಸ್ಯ ಬಿ.ಕೆ.ಹರಿಪ್ರಸಾದ ಮುಂತಾದವರು ಆಗಮಿಸುವರು ಎಂದರು.

Tap to resize

Latest Videos

DAVANAGERE: ಶಾಮನೂರು ಶಿವಶಂಕರಪ್ಪನವರ ಪುತ್ರನ ಸಕ್ಕರೆ ಕಂಪನಿಯಿಂದ ಸುತ್ತ ಹಳ್ಳಿಗಳ ಜನರ ಆಕ್ರೋಶ

ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ ನಡೆಯಲಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಶೇ.40 ಕಮಿಷನ್‌ನ ಬಿಜೆಪಿ ಸರ್ಕಾರ(BJP govt)ದ ಪಾಪದ ಕೊಡ ತುಂಬಿದೆ. ಇಂತಹ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಪ್ರಜಾಧ್ವನಿ ಯಾತ್ರೆ(Prajadhwani yatre) ಮೂಲಕ ರಾಜ್ಯದ ಜನರಲ್ಲೂ ಬಿಜೆಪಿ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಎಂದರು. ಸಿದ್ದರಾಮಯ್ಯ (Siddaramaiah)ಸರ್ಕಾರದ ಅವಧಿಯಲ್ಲಿ ಶಾಮನೂರು ಶಿವಶಂಕರಪ್ಪ(Shamanur shivashankrappa) ಹಾಗೂ ತಾವು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ದಾವಣಗೆರೆಯಲ್ಲಿ ಮಂಜೂರು ಮಾಡಿದ ಕೆಲಸಗಳೇ ಆಗಿಲ್ಲ. ಇಂತಹ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯ? ಇನ್ನು ಗುತ್ತಿಗೆದಾರರ ಸಂಘದ 82 ವರ್ಷದ ಕೆಂಪಣ್ಣ ಬಿಜೆಪಿ ಸರ್ಕಾರದ ಪರ್ಸಂಟೇಜ್‌ ದಂಧೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸ್ಥಿತಿ ಏನಾಗಿದೆ? ಕೆಂಪಣ್ಣಗೆ ಜೈಲಿಗೆ ಹಾಕುವ, ಹೆದರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಮಹಾನಗರ ಪಾಲಿಕೆಯಲ್ಲೂ ಗುತ್ತಿಗೆದಾರರ ಸಂಘ ಮತ್ತು ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಆದರೆ, ಈಗಿನ ಬಿಜೆಪಿಯವರು ಆಸ್ತಿ ಮಾಡಲು ಹೊರಟಿದ್ದಾರೆ. ಕಮಿಷನ್‌ ಆಸೆಗಾಗಿ ಅಭಿವೃದ್ಧಿ ಕೆಲಸಗಳನ್ನೇ ಮಾಡುತ್ತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯ ಏಳೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಜಯಭೇರಿ ಭಾರಿಸಲಿದೆ ಎಂದು ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.

ಶಾಸಕರಾದ ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ, ಎಸ್‌.ರಾಮಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಎಚ್‌.ಪಿ.ರಾಜೇಶ, ಕೆ.ಎಸ್‌.ಬಸವಂತಪ್ಪ, ತೇಜಸ್ವಿ ವಿ.ಪಟೇಲ್‌, ಶಿವಗಂಗಾ ಬಸವರಾಜ, ಕೆ.ಜಿ.ಶಿವಕುಮಾರ, ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌.ಮಂಜುನಾಥ ಗಡಿಗುಡಾಳ್‌, ನಂದಿಗಾವಿ ಶ್ರೀನಿವಾಸ, ಡಾ.ಮಹೇಶ್ವರಪ್ಪ, ನಾಗೇಂದ್ರಪ್ಪ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಮುದೇಗೌಡ್ರ ಗಿರೀಶ, ಗೋವಿಂದ ರೆಡ್ಡಿ, ಬಿ.ಎಚ್‌.ವೀರಭದ್ರಪ್ಪ, ಹುಲಿಕಟ್ಟೆಕೊಟ್ರೇಶ ನಾಯ್ಕ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ, ಸದಸ್ಯ ವಿನಾಯಕ ಪೈಲ್ವಾನ್‌, ಶಾಮನೂರು ಟಿ.ಬಸವರಾಜ, ಕೊಂಡಜ್ಜಿ ನಿಖಿಲ್‌, ಕೆ.ಎಲ್‌.ಹರೀಶ ಬಸಾಪುರ, ಶ್ರೀಕಾಂತ ಬಗರೆ ಇತರರಿದ್ದರು. ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳಾದ ಸುಮಾರು 46ಕ್ಕೂ ಹೆಚ್ಚು ಜನರಿದ್ದರು.

ಯಡಿಯೂರಪ್ಪ ಅವರನ್ನ ಸೈಡ್ ಲೈನ್ ಮಾಡಲು ಸಾದ್ಯವೇ ಇಲ್ಲ: ಬಿವೈ ವಿಜಯೇಂದ್ರ

ವನ್ಯಜೀವಿಗಳ ಪತ್ತೆ ಪ್ರಕರಣ ವಿಚಾರದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವ ಬಿಜೆಪಿಯವರ ತಲೆಯಲ್ಲಿ ಮೆದುಳು ಇಲ್ಲ. ವಿನಾಕಾರಣ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಹೆಚ್ಚು ಮಾತನಾಡಲ್ಲ. ಪ್ರಕರಣವು ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ಎಸ್‌.ಎಸ್‌.ಮಲ್ಲಿಕಾರ್ಜುನ, ಮಾಜಿ ಸಚಿವ

click me!