
ಮಂಡ್ಯ (ಜೂ. 23): 'ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ' ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಸರ್ಕಾರಿ ಜಮೀನಿನ ಮೇಲಿನ ಪರಭಾರೆ ವಿವಾದದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಹದೇವಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಘಟನೆ ವಿವರ:
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, 'ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡದಂತೆ' ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 'ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದ್ರೆ, ನೇಣಿಗೆ ಹಾಕುವುದು ಗ್ಯಾರಂಟಿ' ಎಂದು ಬಹಿರಂಗ ಧಮ್ಕಿ ನೀಡಿದ ವಿಡಿಯೋ ಇದೀಗ ಜನಮನ ಸೆಳೆಯುತ್ತಿದೆ. ಈ ವಿದ್ಯಮಾನ ಜನರ ಸಮ್ಮುಖದಲ್ಲೇ ನಡೆದ ಈ ಘಟನೆಯಲ್ಲಿ ಶಾಸಕರು, 'ಸಾಬ್ರ ಹೆಸರಿನಲ್ಲಿ ಯಾವುದೇ ನೊಂದಣಿ ಅಥವಾ ಜಮೀನು ಹಸ್ತಾಂತರ ಮಾಡಿದರೆ ನಾನೇ ನೋಡಿಕೊಳ್ಳುತ್ತೇನೆ, ಅದಕ್ಕೆ ತಕ್ಕ ತೀವ್ರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಧಮ್ಕಿಯ ಹಿಂದಿನ ನಿಖರ ಹಿನ್ನೆಲೆ ಹಾಗೂ ವಿವಾದಿತ ಬಗರ್ ಹುಕುಂನ ಜಮೀನಿನ ದಾಖಲೆಗಳು ಮತ್ತು ಶಾಸಕರ ಹೇಳಿಕೆಗೆ ಸಂಬಂಧಿಸಿದ ನೈಜ ವಿಷಯಗಳು ಇನ್ನೂ ದೃಢವಾಗಿ ಬಹಿರಂಗವಾಗಿಲ್ಲ. ಆದರೆ ಶಾಸಕನ ಹೇಳಿಕೆ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ.
ಸಾರಾಂಶ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.