ಶೃಂಗೇರಿ: ಮತ ಮರು ಎಣಿಕೆಯಲ್ಲಿ ಕೂಡ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡಗೆ ಗೆಲುವು, ಕಾರ್ಯಕರ್ತರ ಸಂಭ್ರಮ

Published : May 02, 2026, 05:29 PM IST
sringeri constituency

ಸಾರಾಂಶ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂಲ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೈಕೋರ್ಟ್ ನಿರ್ದೇಶನದಂತೆ ನಡೆದ ಈ ಮರುಪರಿಶೀಲನೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಗೆಲುವು ಮತ್ತೊಮ್ಮೆ ದೃಢಪಟ್ಟಿದೆ.

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೈಕೋರ್ಟ್ ನಿರ್ದೇಶನದಂತೆ ಕಟ್ಟುನಿಟ್ಟಿನ ಭದ್ರತೆಯ ನಡುವೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಮರು ಎಣಿಕೆ ವೇಳೆ ಆರಂಭದಿಂದಲೇ ಬಿಗುವಿನ ವಾತಾವರಣ ಕಂಡುಬಂದಿತ್ತು. 2023 ರ ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಅಂಚೆ ಮತಪತ್ರಗಳನ್ನು ಶನಿವಾರ ಎಣಿಕೆ ಮಾಡಲಾಗಿದ್ದು, ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ನಡುವಿನ ಪೈಪೋಟಿಯಲ್ಲಿ ರಾಜೇಗೌಡ ಅವರಿಗೆ ಮೇಲುಗೈ ಆಗಿದೆ.

ಮರು ಎಣಿಕೆ ಬಳಿಕ ಹೊರಬಂದ ಮಾಹಿತಿಯ ಪ್ರಕಾರ, 2023ರ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಂಚೆ ಮತಗಳ ಮರು ಪರಿಶೀಲನೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ತಮ್ಮ ಗೆಲುವನ್ನು ಮತ್ತೊಮ್ಮೆ ದೃಢಪಡಿಸಿಕೊಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಹೇಳಿದ್ದೇನು?

ಈ ವೇಳೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಅವರು ಎಣಿಕೆ ಕೇಂದ್ರದಿಂದ ಹೊರಬಂದ ನಂತರ ಪ್ರತಿಕ್ರಿಯೆ ನೀಡಿದ್ದು, ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. 279 ಅಸಿಂಧು ಮತಗಳ ಬಗ್ಗೆ ನಮ್ಮ ವಾದ ಇದ್ದರೂ, ಮರು ಎಣಿಕೆ ಸಂದರ್ಭದಲ್ಲಿ ಬಹುತೇಕ ಅವುಗಳನ್ನು ಮತ್ತೆ ಅಸಿಂಧು ಮತಗಳಾಗಿಯೇ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಮರು ಎಣಿಕೆಯ ಈ ‘ಅಗ್ನಿಪರೀಕ್ಷೆ’ಯಲ್ಲೂ ರಾಜೇಗೌಡ ಅವರು ಜಯಶಾಲಿಯಾಗಿ ಹೊರಹೊಮ್ಮಿದ್ದು, ಅವರ ಮುನ್ನಡೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಮೊದಲಿಗೆ 201 ಮತಗಳ ಮುನ್ನಡೆ ಹೊಂದಿದ್ದ ಅವರು, ಇದೀಗ ಸುಮಾರು 203 ಮತಗಳ ಮುನ್ನಡೆ ಸಾಧಿಸಿರುವುದಾಗಿ ತಿಳಿದುಬಂದಿದೆ.

ಕಾಂಗ್ರೆಸ್ ವಿಜಯೋತ್ಸವ

ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಸಂಭ್ರಮಾಚರಣೆ ನಡೆಯಿತು. ಐಡಿಎಸ್‌ಜಿ ಕಾಲೇಜು ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು. ಕೆಲ ಕಾರ್ಯಕರ್ತರು ಪ್ರತಿಸ್ಪರ್ಧಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧವೂ ಘೋಷಣೆಗಳನ್ನು ಕೂಗಿದ ದೃಶ್ಯಗಳು ಕಂಡುಬಂದವು.

ಒಟ್ಟಿನಲ್ಲಿ, ಮರು ಎಣಿಕೆ ಪ್ರಕ್ರಿಯೆಯ ಬಳಿಕವೂ ಮೂಲ ಫಲಿತಾಂಶ ಅಚಲವಾಗಿದ್ದು, ರಾಜೇಗೌಡ ಅವರ ಗೆಲುವು ಮತ್ತೊಮ್ಮೆ ದೃಢಪಟ್ಟಿದೆ. ಈ ಮೂಲಕ ಶೃಂಗೇರಿ ಕ್ಷೇತ್ರದ ರಾಜಕೀಯ ಪೈಪೋಟಿಗೆ ತೆರೆ ಬಿದ್ದಂತಾಗಿದೆ.

ಹಿನ್ನೆಲೆ

2023 ರಲ್ಲಿ, 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 279 ತಿರಸ್ಕರಿಸಲ್ಪಟ್ಟವು, ಆದರೆ ಮೂರು ನೋಟಾ ಮತಗಳು ಇದ್ದವು. ಒಟ್ಟು 1,540 ಅಂಚೆ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು ಮತ್ತು ಎಣಿಕೆಯ ನಂತರ, ರಾಜೇಗೌಡ ಅವರನ್ನು 201 ಮತಗಳ ಕಡಿಮೆ ಅಂತರದಿಂದ ವಿಜೇತರೆಂದು ಘೋಷಿಸಲಾಯಿತು. ಎರಡನೇ ಸ್ಥಾನ ಪಡೆದ ಜೀವರಾಜ್, ನಂತರ ಹೈಕೋರ್ಟ್ ಮೆಟ್ಟಿಲೇರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಹೈಡ್ರಾಮಾ, ಸ್ಟ್ರಾಂಗ್ ರೂಮ್‌ನಲ್ಲಿ ಟ್ರಂಕ್‌ಗಳು ಓಪನ್ ಆಗಿ ಗೊಂದಲ
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ, ಸಮೀಕ್ಷೆಗಳಿಂದ ಬಾಂಗ್ಲಾದೇಶಕ್ಕೆ ನಡುಕ, ಮಮತಾ ಮತಬ್ಯಾಂಕ್ ಯಾರು ಅನ್ನೋದು ಬಾಯಿಬಿಟ್ಟ ಬಾಂಗ್ಲಾದೇಶಿ ಸಂಸದ!