ಶಾಸಕರ ಹಕ್ಕುಚ್ಯುತಿ ಪ್ರಕರಣ ಹೆಚ್ಚಳ: ಅಧಿಕಾರಿಗಳ ವರ್ತನೆಗೆ ಕಡಿವಾಣ? ಸ್ಪೀಕರ್ ಖಾದರ್ ಹೇಳಿದ್ದೇನು?

Kannadaprabha News   | Kannada Prabha
Published : Mar 26, 2026, 02:00 PM IST
Speaker UT Khader Warns Officials Over Rising MLA Privilege Breach Cases in Karnataka

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡರು ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಹಲವು ಶಾಸಕರು ಧ್ವನಿಗೂಡಿಸಿದ್ದು, ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಲು ಸರ್ಕಾರವು ಸೂಕ್ತ ಎಸ್‌ಒಪಿ ರೂಪಿಸಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು.

ವಿಧಾನಸಭೆ: ಶಾಸಕರ ಗೌರವಕ್ಕೆ ಚ್ಯುತಿಯಾಗುತ್ತಿರುವ ಪ್ರಕರಣಗಳ ಪುನರಾವರ್ತನೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಸ್‌ಒಪಿ ರೂಪಿಸುವ ಅಗತ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಸದನದಲ್ಲಿ ಬುಧವಾರ ಜೆಡಿಎಸ್‌ ಸದಸ್ಯ ಜಿ.ಟಿ.ದೇವೇಗೌಡ ಈ ವಿಚಾರ ಪ್ರಸ್ತಾಪಿಸಿ, ನಾನು ಪ್ರತಿನಿಧಿಸುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹಕ್ಕುಚ್ಯುತಿಯಾಗಿದೆ. ಕ್ಷೇತ್ರದ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಸಂಬಂಧಪಡದ ವ್ಯಕ್ತಿಗಳು ಅಧಿಕಾರಿಗಳನ್ನು ಕರೆದುಕೊಂಡು ಬಂದು ಕಾಮಗಾರಿಗಳಿಗೆ ಟೆಂಡರ್‌ ಮಾಡಿಸಿದ್ದೇನೆ. ಕಾಮಗಾರಿ ಪ್ರಾರಂಭಿಸಿದ್ದೇನೆ ಎಂದು ಹೇಳಿಕೊಂಡು ಬೀದಿ, ಬೀದಿ ಸುತ್ತುತ್ತಿದ್ದಾರೆ. ನಾನು ಸದನದಲ್ಲಿ ಭಾಗಿಯಾಗಿರುವಾಗಲೇ ಈ ರೀತಿ ಆಗಿದೆ. ಹೀಗಾಗಿ ನಗರಸಭೆ ಆಯುಕ್ತ ಚಂದ್ರಶೇಖರ್‌, ಎಇಇ ಹರ್ಷ, ಮಧು ಸೇರಿದಂತೆ ಇತರ ಅಧಿಕಾರಿಗಳನ್ನು ಸದನಕ್ಕೆ ಕರೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ವಿ.ಸುನೀಲ್‌ ಕುಮಾರ್‌, ಈ ರೀತಿಯ ಘಟನೆಗಳು ಹಲವು ಕ್ಷೇತ್ರಗಳಲ್ಲಿ ಪುನರಾವರ್ತನೆ ಆಗುತ್ತಲೇ ಇವೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎರಡೂ ಕಡೆಯ ಶಾಸಕರಿಗೆ ಇದು ಅನುಭವಕ್ಕೆ ಬಂದಿದ್ದಿದೆ. ಅಧಿಕಾರಿಗಳ ಹದ್ದುಮೀರಿದ ವರ್ತನೆಗೆ ಕಡಿವಾಣ ಬೀಳಬೇಕು. ಶಾಸಕರ ಹಕ್ಕು ರಕ್ಷಣೆಯಾಗಬೇಕು. ಅಧಿಕಾರಿಗಳನ್ನು ಹೀಗೆಯೇ ಬಿಟ್ಟರೆ ತಲೆ ಮೇಲೆ ಬಂದು ಕೂರುತ್ತಾರೆ. ಹೀಗಾಗಿ, ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್‌, ಶಿಷ್ಟಾಚಾರ ಉಲ್ಲಂಘನೆ ಪ್ರಕರಣದ ಬಗ್ಗೆ ಇದೇ ಸದನದಲ್ಲಿ ಚರ್ಚೆ ಆಗಿದೆ. ಈಗ ಮತ್ತೊಂದು ಘಟನೆ ಪ್ರಸ್ತಾಪ ಆಗಿದೆ. ಪುನರಾವರ್ತನೆ ಆಗುತ್ತಿರುವುದಕ್ಕೆ ಕಡಿವಾಣ ಬೀಳಬೇಕು. ಶಾಸಕರಿಗೆ ಗೌರವ ತರುವ ರೀತಿಯಲ್ಲಿ ಸರ್ಕಾರ ಸೂಕ್ತ ಎಸ್‌ಒಪಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುದ್ಧದ ನಡುವೆ ಆಗಸದಲ್ಲಿ ಭಯಾನಕ ಕಾಗೆಗಳು! ಇದೆಂಥ ಮುನ್ಸೂಚನೆ? ಮುನ್ನೆಲೆಗೆ ಬಂದ ಸಿಎಂ ಕಾರಿನ ಸ್ಟೋರಿ
ರಾಹುಲ್ ಗಾಂಧಿ ಬಿಜೆಪಿಯ 'ಬಿ-ಟೀಮ್' ಇದ್ದಂತೆ: ಕಾಂಗ್ರೆಸ್ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ