
ವಿಧಾನಸಭೆ (ಮಾ.26): ನಾನು ಹಿಂದೆ ರಾಹುಕಾಲದಲ್ಲೂ ಬಜೆಟ್ ಮಂಡಿಸಿದ್ದೇನೆ. ಯಮಗಂಡಕಾಲದಲ್ಲೂ ಬಜೆಟ್ ಮಂಡಿಸಿದ್ದೇನೆ. ನನಗೆ ಎಲ್ಲಾ ಕಾಲ, ದಿನವೂ ಒಂದೇ. ಕರ್ಮ ಸಿದ್ಧಾಂತ ಒಪ್ಪಲ್ಲ, ಮೂಢನಂಬಿಕೆ ನಂಬಲ್ಲ, ಯುಗಾದಿ, ಶಿವರಾತ್ರಿ ದಿನವೂ ಮಾಂಸ ತಿನ್ನುತ್ತೇನೆ. ದೇವರನ್ನು ನಂಬುತ್ತೇನೆ, ಕೇವಲ ದೇವಸ್ಥಾನದಲ್ಲಿ ಮಾತ್ರ ಇರುತ್ತಾನೆ ಎಂದು ನಂಬುವುದಿಲ್ಲ. ಎಲ್ಲ ಕಡೆ ಇದ್ದಾನೆ ಎಂದು ನಂಬುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಅಧಿಕಾರಿಗಳು, ಮನೆಯವರು ಹೇಳಿದರು ಎನ್ನುವ ಕಾರಣಕ್ಕೆ ಈ ಬಾರಿ ರಾಹುಕಾಲದ ನಂತರ ಬಜೆಟ್ ಮಂಡಿಸಿದೆ ಅಷ್ಟೆ. ನನಗೆ ಯಾರು ಮುಖ್ಯಮಂತ್ರಿ ಆದರೂ ಸಂತೋಷವೇ. ಅಶೋಕ್ ಆದರೂ ಸಂತೋಷ, ಅರವಿಂದ ಬೆಲ್ಲದ್, ಸುನೀಲ್ ಕುಮಾರ್ ಸೇರಿ ನಮ್ಮಲ್ಲಿ ಯಾರು ಮುಖ್ಯಮಂತ್ರಿಯಾದರೂ ಖುಷಿ. ಅಲ್ನೋಡಿ ವಿಜಯೇಂದ್ರ ನೋಡ್ತಿದ್ದಾರೆ. ಅವರು ನಿಮಗ್ಯಾರಿಗೂ ಮುಖ್ಯಮಂತ್ರಿಯಾಗಲು ಬಿಡಲ್ಲ ಎಂದರು.
ಹಾಗಾದರೆ, ಡಿ.ಕೆ.ಶಿವಕುಮಾರ್ ಸಿಎಂ ಆದರೂ ಸಂತೋಷ ಎಂದು ಹೇಳಿ ಎಂದು ಅಶೋಕ್ ಕಿಚಾಯಿಸಿದರು.
ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್, ಇತರರು ಮುಖ್ಯಮಂತ್ರಿ ಆಗಬಾರದಾ? ಹೀಗೆ ವಿವಿಧ ಸಚಿವ, ಶಾಸಕರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು 224 ಶಾಸಕರಿಗೂ ಮುಖ್ಯಮಂತ್ರಿ ಆಗಲು ಅರ್ಹರೇ, ಯೋಗ್ಯತೆ ಎಲ್ಲರಿಗೂ ಇರುತ್ತದೆ. ಆದರೆ, ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ ಎಂದ ಅವರು, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.