Rajasthan Political Crisis: ಲಿಖಿತ ವರದಿ ಕೇಳಿದ ಸೋನಿಯಾ ಗಾಂಧಿ, ಸಭೆಯ ಪ್ರಮುಖ ಅಂಶ ತಿಳಿಸಿದ ಮಾಕನ್‌!

By Santosh NaikFirst Published Sep 26, 2022, 7:52 PM IST
Highlights

ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ನಡುವೆ, ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ದೆಹಲಿ ತಲುಪಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ನೆ ಅವರು ಸೋನಿಯಾ ಗಾಂಧಿ ಅವರಿಗೆ ರಾಜಸ್ಥಾನದ ಬೆಳವಣಿಗೆಗಳ ಬಗ್ಗೆ ವಿವರವಾಗಿ ಮಾಹಿತಿ ಒಪ್ಪಿಸಿದ್ದಾರೆ.  ಈ ವೇಳೆ ಸೋನಿಯಾ ಗಾಂಧಿ ಇಬ್ಬರೂ ನಾಯಕರಿಂದ ಲಿಖಿತ ವರದಿ ಕೇಳಿದ್ದಾರೆ.

ನವದೆಹಲಿ (ಸೆ. 26): ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಅಶೋಕ್ ಗೆಹ್ಲೋಟ್ ಬಣದ ಶಾಸಕರು ರಾಜೀನಾಮೆ ಪತ್ರ ನೀಡಿದ್ದರೆ, ಸ್ವತಃ ಗೆಹ್ಲೋಟ್ ಕೂಡ ಬಿಕ್ಕಟ್ಟು ನಿಭಾಯಿಸುವಲ್ಲಿ ಸೋಲು ಕಂಡಿದ್ದಾರೆ. ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಇದೀಗ ನವದೆಹಲಿಯಲ್ಲೂ ಕೋಲಾಹಲ ಹೆಚ್ಚಾಗಿದೆ. ಇದೀಗ ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಸ್ವತಃ ಸೋನಿಯಾ ಗಾಂಧಿ ಸಕ್ರಿಯವಾಗಿ ಕಣಕ್ಕಿಳಿದಿರುವ ಬಗ್ಗೆ ವರದಿಯಾಗಿದೆ. ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಮಾಡುವ ಸಲುವಾಗಿ ಪಕ್ಷದ ಹಿರಿಯ ನಾಯಕರಾದ ಅಜಯ್‌ ಮಾಕೆನ್‌ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಜೈಪುರಕ್ಕೆ ತೆರಳಿದ್ದರು. ಆದರೆ, ಅಲ್ಲಿನ ಶಾಸಕಾಂಗ ಪಕ್ಷದೊಂದಿಗೆ ಯಾವುದೇ ಸಭೆ ನಡೆಸಲು ಸಾಧ್ಯವಾಗದೇ ನವದೆಹಲಿಗೆ ವಾಪಸಾಗಿದ್ದಾರೆ. ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಅದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಪಾತ್ರ ಈ ಎಲ್ಲದರ ಬಗ್ಗೆ ಮಾಹಿತಿ ನೀಡಲು 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ್ದರು. ಈ ಸಭೆ ಈಗ ಅಂತ್ಯಗೊಂಡಿದೆ. ಸಭೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಜಯ್‌ ಮಾಕೆನ್‌, ರಾಜಸ್ಥಾನದಲ್ಲಿ ಆದ ಬೆಳವಣಿಗೆ ಮಹತ್ವದ ವಿಚಾರಗಳನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೇನೆ ಎಂದರು.

ರಾಜಸ್ಥಾನದ ಸಂಪೂರ್ಣ ಬೆಳವಣಿಗೆ ಕುರಿತು ಸೋನಿಯಾ ಗಾಂಧಿ ಅವರಿಗೆ ವಿವರವಾದ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ರಾಜಸ್ಥಾನದಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ಕರೆಯಲಾಗಿತ್ತು ಎಂದು ಅಜಯ್ ಮಾಕನ್ ಹೇಳಿದ್ದಾರೆ. ನಾವು ಅಲ್ಲಿನ ಶಾಸಕರ ಜತೆ ಮಾತನಾಡಿ ಸೋನಿಯಾ ಗಾಂಧಿ ಅವರಿಗೆ ನಾವು ವರದಿ ನೀಡಬೇಕಿತ್ತು. ಆದರೆ, ಇದಕ್ಕೆ ಶಾಸಕರು ಷರತ್ತುಗಳನ್ನು ಹಾಕಿದ್ದು, ಅದನ್ನು ನಾವು ವಿರೋಧಿಸಿದ್ದೇವೆ. ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಮತ್ತು ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ನಂತರ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಜಯ್ ಮಾಕನ್ ಹೇಳಿದ್ದಾರೆ. ಇದು ಹಿತಾಸಕ್ತಿ ಸಂಘರ್ಷವಲ್ಲದಿದ್ದರೆ ಇನ್ನೇನು ಎಂದು ಹೇಳಿದರು.

ನಿರ್ಣಯ ಅಂಗೀಕರಿಸಿದರೆ ಅದಕ್ಕೆ ಷರತ್ತುಗಳನ್ನು ಯಾವುದೇ ಕಾರಣಕ್ಕೆ ವಿಧಿಸಲಾಗುವುದಿಲ್ಲ ಎಂದು ಅಜಯ್ ಮಾಕನ್ (Ajay Maken) ಹೇಳಿದ್ದಾರೆ. ಇದು ಕಾಂಗ್ರೆಸ್ ಸಂಪ್ರದಾಯವಲ್ಲ. ಶಾಸಕರು ಮೂರು ಷರತ್ತುಗಳನ್ನು ಹಾಕಿದ್ದಾರೆ ಎಂದು ಹೇಳಿದರು. ಅಜಯ್ ಮಾಕನ್ ಪ್ರಕಾರ, ಅಕ್ಟೋಬರ್ 19 ರ ನಂತರ ಹೊಸ ಮುಖ್ಯಮಂತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕರ ಪರವಾಗಿ ಷರತ್ತು ಹಾಕಲಾಯಿತು, ಎರಡನೇ ಷರತ್ತು ಶಾಸಕರ (Rajasthan Political Crisis) ಗುಂಪಿನಲ್ಲಿಯೇ ಮಾತನಾಡಬೇಕು. ಪ್ರತಿಯೊಬ್ಬ ಶಾಸಕರೊಂದಿಗೆ ಮಾತನಾಡಬಾರದು ಮತ್ತು ಅಶೋಕ್ ಗೆಹ್ಲೋಟ್ ಅವರೇ ಇದನ್ನು ಹೇಳಿದ್ದಾರೆ ಎಂದರು.

ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರ ಪಾಳೆಯದಿಂದಲೇ ಇರಬೇಕು ಎನ್ನುವುದು ಅವರ ಮೂರನೇ ಷರತ್ತು ಎಂದು ಅಜಯ್ ಮಾಕೆನ್ ಹೇಳಿದ್ದಾರೆ. ಇಡೀ ಘಟನೆಯ ಬಗ್ಗೆ ನಾವು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ಲಿಖಿತವಾಗಿ ವಿವರವಾದ ವರದಿ ನೀಡುವಂತೆ ಸೋನಿಯಾ ಗಾಂಧಿ ಕೇಳಿದ್ದಾರೆ. ನಾಳೆ ಬೆಳಗಿನ ವೇಳೆಗೆ, ಸೋನಿಯಾ ಗಾಂಧಿ (Sonia Gandhi) ಅವರಿಗೆ ಲಿಖಿತ ವರದಿಯನ್ನು ನೀಡುತ್ತೇವೆ.

Rajasthan Political Crisis: ರಾಜಸ್ಥಾನದ ರಾಜಕೀಯ ನಾಟಕಕ್ಕೆ ಎಂಟ್ರಿಯಾದ ಕಮಲ್ ನಾಥ್!

ರಾಜಸ್ಥಾನದಲ್ಲಿ ನಡೆದಿರುವ ಘಟನೆಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ವಿವರ ನೀಡುವುದಾಗಿ ಸೋನಿಯಾ ಗಾಂಧಿ ಭೇಟಿಗೂ ಮುನ್ನ ಅಜಯ್ ಮಾಕನ್ ಹೇಳಿದ್ದರು. ರಾಜಸ್ಥಾನದ ಕೊನೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಯಶಸ್ವಿಯಾಗಿ ದಾಟಿಸಿದ ಕೆಸಿ ವೇಣುಗೋಪಾಲ್ ಕೂಡ 10 ಜನಪಥ್ ತಲುಪಿದ್ದಾರೆ. ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್ ರಾಮೇಶ್ವರ ದುಡಿ ಕೂಡ 10 ಜನಪಥ್ ತಲುಪಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಕೂಡಲೇ ದೆಹಲಿಗೆ ತಲುಪುವಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ ಸೂಚಿಸಿದೆ.

ಪಂಜಾಬ್‌ನಲ್ಲಿ ಮಾಡಿದ ಪಿತೂರಿಯನ್ನೇ ರಾಜಸ್ಥಾನದಲ್ಲಿ ಮಾಡ್ತಿದ್ದಾರೆ: ಶಾಸಕನ ಎಚ್ಚರಿಕೆ!

ಅಧ್ಯಕ್ಷ ಸ್ಥಾನದ ರೇಸ್‌ನಿಂದ  ಹೊರಬಿದ್ದ ಗೆಹ್ಲೋಟ್?: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಪಕ್ಷದ ಮುಂದಿನ ಅಧ್ಯಕ್ಷರ ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಅವರನ್ನು ಪರಿಗಣಿಸಲಾಗಿದೆ. ಅಶೋಕ್ ಗೆಹ್ಲೋಟ್ ಅವರನ್ನು ಗಾಂಧಿ ಕುಟುಂಬದ ನಿಕಟವರ್ತಿ ಎಂದು ಪರಿಗಣಿಸಲಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಉದಯಪುರ ಘೋಷಣೆ ಮುಂದಿನ ಅಧ್ಯಕ್ಷರಿಗೂ ಅನ್ವಯವಾಗಲಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದರು. ಇದೀಗ ರಾಜಸ್ಥಾನದ ಇತ್ತೀಚಿನ ಬಿಕ್ಕಟ್ಟಿನ ನಂತರ ಅಶೋಕ್ ಗೆಹ್ಲೋಟ್ ಅವರು ಮುಂದಿನ ಕಾಂಗ್ರೆಸ್ ಅಧ್ಯಕ್ಷರ ರೇಸ್‌ನಿಂದ ಹೊರಗುಳಿಯಬಹುದು ಎಂಬ ವರದಿಗಳು ಸಹ ಬರುತ್ತಿವೆ.

click me!