Rajasthan Political Crisis: ರಾಜಸ್ಥಾನದ ರಾಜಕೀಯ ನಾಟಕಕ್ಕೆ ಎಂಟ್ರಿಯಾದ ಕಮಲ್ ನಾಥ್!

By Santosh NaikFirst Published Sep 26, 2022, 4:49 PM IST
Highlights

ಒಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ ಪಕ್ಷ ರಾಜಸ್ಥಾನದಲ್ಲಿ ಬಿರುಕು ಬಿಡುತ್ತಿದೆ. ರಾಜಕೀಯ ಬಿಕ್ಕಟ್ಟು ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿ ತೀವ್ರವಾಗಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡ ಈ ನಾಟಕಕ್ಕೆ ಎಂಟ್ರಿಯಾಗಿದ್ದಾರೆ.

ಜೈಪುರ (ಸೆ. 26): ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರ ರೇಸ್‌ಗೆ ಇಳಿದ ನಂತರವಂತೂ ರಾಜಸಥಾನ ರಾಜಕೀಯ ಪಾದರಸದಷ್ಟೇ ಬಿಸಿಯಾಗಿದೆ. ಒಟ್ಟಾರೆ ಕಾಂಗ್ರೆಸ್‌ ಪಕ್ಷದ ಆಂತರಿಕ ಕಲಹ ಮತ್ತೊಮ್ಮೆ ಸ್ಪಷ್ಟವಾಗಿ ಹೊರಗಡೆ ಕಂಡಿದೆ. ಗ್ಲೆಹೋಟ್‌ ಬಣದ ಭಾರೀ ವಿರೋಧದ ನಡುವೆಯೂ ರಾಜಸ್ಥಾನದ ಸಿಎಂ ಆಗಿ ಸಚಿನ್‌ ಪೈಲಟ್‌ ಅಧಿಕಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಈ ಗದ್ದಲದ ನಡುವೆ ಈಗ ರಾಜಸ್ಥಾನದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎದ್ದಿದೆ. ರಾಜಸ್ಥಾನದ ರಾಜಕೀಯ ಬೆಳವಣಿಗೆಯಲ್ಲಿ ಕಮಲ್ ನಾಥ್ ಕೂಡ ಪ್ರವೇಶಿಸಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಕಮಲ್ ನಾಥ್, ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣದ ನಡುವೆ ಸಮನ್ವಯ ತರಲು ಪ್ರಯತ್ನಿಸುತ್ತಾರೆ. ಮತ್ತೊಂದೆಡೆ, ಅಶೋಕ್ ಗೆಹ್ಲೋಟ್, ಖರ್ಗೆ ಮತ್ತು ಮಾಕನ್ ಅವರ ಸಭೆ ಜೈಪುರದ ಮ್ಯಾರಿಯಟ್ ಹೋಟೆಲ್‌ನಲ್ಲಿ ನಡೆದಿದೆ. ಅಶೋಕ್ ಗ್ಲೆಹೋಟ್‌ ಜೊತೆ ಅಜಯ್‌ ಮಾಕನ್ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಅವರ ಸಭೆ ಕೊನೆಗೊಂಡ ಬಳಿಕ, ಇಬ್ಬರೂ ದೆಹಲಿಗೆ ತೆರಳಿದ್ದಾರೆ. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೂತನ ಸಿಎಂ ಆಯ್ಕೆ ಮುಂದೂಡಿಕೆಯಾಗುವ ಲಕ್ಷಣ ಕಂಡುಬರುತ್ತಿದೆ.

ಸಚಿನ್ ಪೈಲಟ್ ಅವರನ್ನು ಸಿಎಂ ಮಾಡುವ ಕುರಿತು ಕಾಂಗ್ರೆಸ್ ಶಾಸಕ ಪ್ರಶಾಂತ್ ಬೈರ್ವಾ ಕೂಡ ಹೇಳಿಕೆ ನೀಡಿದ್ದಾರೆ. ಸಚಿನ್‌ ಪೈಲಟ್‌ಗೆ ಬೆಂಬಲ ನೀಡಿರುವ ಶಾಸಕರು ಯಾರೋ ಬೇರೆ ಪಕ್ಷದವರಲ್ಲ ಅವರೂ ಕೂಡ ಕಾಂಗ್ರೆಸ್‌ ಪಕ್ಷದವರೇ ಆಗಿದ್ದಾರೆ. ಬೆಳಗಿನ ತಪ್ಪು ಸಂಜೆ ಮತ್ತೆ ಆದರೆ, ಅದನ್ನು ಮರೆತು ಹೋಗಿದ್ದೇವೆ ಎನ್ನಲಾಗುವುದಿಲ್ಲ.ಇದರೊಂದಿಗೆ, ಗೆಹ್ಲೋಟ್ ರಾಜಕೀಯದ ವಿಶ್ವಕೋಶ ಮತ್ತು ಸಚಿನ್ ಪೈಲಟ್ ಕಾಂಗ್ರೆಸ್‌ನ ಭವಿಷ್ಯ ಎಂದು ಬೈರ್ವಾ ಹೇಳಿದರು. ಸಚಿನ್ ಪೈಲಟ್ ಅವರನ್ನು ಬೆಂಬಲಿಸುವ ಶಾಸಕರು ಜೈಪುರದ (Jaipur) ಅವರ ನಿವಾಸದಲ್ಲಿ ಜಮಾಯಿಸುತ್ತಿದ್ದಾರೆ. ಮುಂದಿನ ಕಾರ್ಯತಂತ್ರವನ್ನು ಶಾಸಕರು ಚರ್ಚೆ ಮಾಡಲಿದ್ದಾರೆ.. ಶಾಸಕ ವೇದಪ್ರಕಾಶ್ ಸೋಲಂಕಿ ಮತ್ತು ಕಿಲಾಡಿ ಲಾಲ್ ಬೈರ್ವಾ ಸೇರಿದಂತೆ ಇತರ ಕೆಲವು ಶಾಸಕರು ಪೈಲಟ್ ಅವರ ನಿವಾಸವನ್ನು ತಲುಪಿದ್ದಾರೆ. ಈ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಲಾಲ್ ಬೈರ್ವಾ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಬಿಕ್ಕಟ್ಟಿಗೆ ಗೆಹ್ಲೋಟ್ ( Ashok Gehlot) ಕಾರಣ ಎಂದು ನೇರವಾಗಿ ಅವರು ಆರೋಪ ಮಾಡಿದ್ದಾರೆ.

ಪಂಜಾಬ್‌ನಲ್ಲಿ ಮಾಡಿದ ಪಿತೂರಿಯನ್ನೇ ರಾಜಸ್ಥಾನದಲ್ಲಿ ಮಾಡ್ತಿದ್ದಾರೆ: ಶಾಸಕನ ಎಚ್ಚರಿಕೆ!

ನಾನು ಗೆಹ್ಲೋಟ್ ಮತ್ತು ಪೈಲಟ್ ಬಣದಲ್ಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ದಿವ್ಯಾ ಮದೆರ್ನಾ (Divya Maderna) ಹೇಳಿದ್ದಾರೆ. ನನಗೆ ನನ್ನದೇ ಬಣವಿದ್ದು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾನಿದ್ದೇನೆ. ಎಲ್ಲೆಲ್ಲಿ ಶಾಸಕಾಂಗ ಪಕ್ಷದ ಅಧಿಕೃತ ಸಭೆ ಇದೆಯೋ ಅಲ್ಲಿಗೆ ಹೋಗುತ್ತೇನೆ, ಧರಿವಾಲ್ ಮನೆಯಲ್ಲಿ ನಡೆಯುವ ಸಭೆಗೆ ಹೋಗಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಸಚಿನ್ ಪೈಲಟ್ ಹೊಸ ಹೇಳಿಕೆ ನೀಡಿದ್ದಾರೆ. ಈಗಲೇ ದೆಹಲಿಗೆ ಹೋಗುತ್ತಿಲ್ಲ ಎಂದರು. ಸದ್ಯ ಜೈಪುರದಲ್ಲಿಯೇ ಇರಲಿದೆ ಎಂದು ಸಚಿನ್‌ ಪೈಲಟ್‌ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರದ ನಂತರವಷ್ಟೇ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ.

Rajasthan Political Crisis: ಪೈಲಟ್‌ ವಿಮಾನ ಮತ್ತೆ ಕ್ರ್ಯಾಶ್‌, ಅಶಕ್ತ ಹೈಕಮಾಂಡ್‌ ವಿರುದ್ಧ ಗೆಹ್ಲೋಟ್‌ ಗೇಮ್‌

ಮೂರನೇ ಬಣಕ್ಕೆ ಆಗಲಿದೆಯೇ ಲಾಭ: ಎರಡೂವರೆ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಎದುರಾಗಿದ್ದ ರಾಜಕೀಯ ಬಿಕ್ಕಟ್ಟಿನ (Rajasthan Political Crisis) ಎರಡನೇ ಭಾಗವನ್ನು ಮತ್ತೆ ನೋಡಲಾಗುತ್ತಿದೆ. ಈ ಬಾರಿ ಪಾತ್ರಗಳು ಬದಲಾಗಿವೆ. ಸಚಿನ್ ಪೈಲಟ್ ಅವರನ್ನು ಸಿಎಂ ಮಾಡುವ ಸಾಧ್ಯತೆ ಬಗ್ಗೆ ಅಶೋಕ್ ಗೆಹ್ಲೋಟ್ ಪಾಳಯದ ಶಾಸಕರ ಬಂಡಾಯ ಧೋರಣೆಯಿಂದಾಗಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರನೇ ಬಣಕ್ಕೆ ಲಾಭವಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಬಣ ರಾಜಕೀಯ ಗುದ್ದಾಟದಲ್ಲಿ ಬಿಜೆಪಿ (BJP) ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆಯಲ್ಲಿದೆ.

click me!