ಕೆಲವೊಮ್ಮೆ ಕೋರ್ಟ್‌ನಲ್ಲಿ ನ್ಯಾಯ ಸಿಗದೆ ಇರಬಹುದು: ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಮಂತ್ರ!

By Kannadaprabha News  |  First Published Oct 3, 2024, 8:09 AM IST

'ನಮ್ಮ ಎಲ್ಲಾ ನ್ಯಾಯಾಲಯಗಳ ಮೇಲೆ ಒಂದು ಅತ್ಯುನ್ನತ ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಕೆಲವು ಸಾರಿ ನ್ಯಾಯಾಲಯಗಳಲ್ಲಿ ಎಲ್ಲರಿಗೂ ನ್ಯಾಯ ಸಿಗದೆ ಇರಬಹುದು. ಆದರೆ, ನಾವು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.' ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
 


ಬೆಂಗಳೂರು (ಅ.03): 'ನಮ್ಮ ಎಲ್ಲಾ ನ್ಯಾಯಾಲಯಗಳ ಮೇಲೆ ಒಂದು ಅತ್ಯುನ್ನತ ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಕೆಲವು ಸಾರಿ ನ್ಯಾಯಾಲಯಗಳಲ್ಲಿ ಎಲ್ಲರಿಗೂ ನ್ಯಾಯ ಸಿಗದೆ ಇರಬಹುದು. ಆದರೆ, ನಾವು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.' ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್, ಗಾಂಧಿಭವನ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತ್ಯೇಕ ಗಾಂಧಿಜಯಂತಿ ಕಾರ ಕ್ರಮಗಳಲ್ಲಿ ಆತ್ಮಸಾಕ್ಷಿ ನ್ಯಾಯಾಲಯಕ್ಕೆ ತಲೆ ಬಾಗಿ ನಡೆಯಬೇಕು ಎಂದು ಒತ್ತಿ ಹೇಳಿದರು. 

ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿಯವರು ಹೀಗೆ ಆತ್ಮಸಾಕ್ಷಿ ನ್ಯಾಯ ಯಾಲಯದ ಬಗ್ಗೆ ಮತ್ತೆ ಮತ್ತೆ ಮಾತನಾಡಿದ್ದು ಕುತೂಹಲಕ್ಕೆ ಕಾರಣವಾಯಿತು. 'ಮಹಾತ್ಮಗಾಂಧಿ ಅವರ ಆದರ್ಶ, ಆಶಯಗಳಂತೆ ನಾವು ನಡೆದುಕೊಳ್ಳಬೇಕು. ನಮ್ಮ ನ್ಯಾಯಾಲಯಗಳ ಮೇಲೆ ಒಂದು ನ್ಯಾಯಾಲಯ ಇದೆ. ಅದೇ ಆತ್ಮಸಾಕ್ಷಿ ನ್ಯಾಯಾಲಯ. ಅದು ಇತರ ಎಲ್ಲಾ ನ್ಯಾಯಾಲಯಗಳನ್ನೂ ಮೀರಿಸುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ. ಅದರಿಂದ ನಾವೆ ಲ್ಲರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು' ಎಂದು ಹೇಳಿದರು. 

Tap to resize

Latest Videos

undefined

ಇಂದು ಸುಳ್ಳು ಸುದ್ದಿ, ತೇಜೋವಧೆ ಸುದ್ದಿ ಹೆಚ್ಚಿವೆ: ಸಿಎಂ ಸಿದ್ದರಾಮಯ್ಯ ಕಳವಳ

'ಯಾರಾದರೂ ಹೊಗಳಲಿ, ತೆಗಳಲಿ, ಟೀಕೆ ಮಾಡಲಿ, ಬಿಡಲಿ, ಗುರುತಿಸಲಿ ಬಿಡಲಿ ನಾವು ಪ್ರತಿಯೊಬ್ಬರೂ ಆತ್ಮಸಾಕ್ಷಿಯ ನ್ಯಾ ಯಾಲಯ ದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿಯೇ ನಡೆದು ಕೊಳ್ಳಬೇಕು' ಎಂದು ಕರೆ ನೀಡಿದರು. 'ಇಂದು ಗಾಂಧೀಜಿ ಹಾಗೂ ಶಾಸ್ತ್ರಿಜೀ ಜನ್ಮ ದಿನ. ಇವರಿಬ್ಬರ ಬದುಕಿನ ಮೌಲ್ಯ ಮತ್ತು ಸಂದೇ ಶಗಳನ್ನು ಜನ ಮಾನಸದಲ್ಲಿ ವಿಸ್ತರಿಸುತ್ತಲೇ ಸರ್ಕಾರ ಸಮ ಸಮಾಜನಿರ್ಮಿಸಲುಪೂರಕವಾದ ಕಾಠ್ಯಕ್ರಮ ರೂಪಿಸ ಬೇಕಾಗುತ್ತದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಈ ಮಹಾ ತರಿಗೆ ಸಲ್ಲಿಸುವ ನಿಜವಾದ ಗೌರವ' ಎಂದರು.

click me!