Karnataka Politics 'ಬದಲಾವಣೆ ಜಗದ ನಿಯಮ, ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗ್ಬಹುದು'

Published : Jan 21, 2022, 07:24 PM IST
Karnataka Politics 'ಬದಲಾವಣೆ ಜಗದ ನಿಯಮ, ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗ್ಬಹುದು'

ಸಾರಾಂಶ

ರಾಜ್ಯರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಬಿಜೆಪಿ ಶಾಸಕ ಇಷ್ಟು ದಿನ ಸಂಕ್ರಾಂತಿ ಎಂದಿದ್ದ ಯತ್ನಾಳ್ ಇದೀಗ ಹೊಸ ವರ್ಷ ಯುಗಾದಿ ಸರದಿ ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗ್ಬಹುದು ಯತ್ನಾಳ್

ಬೆಂಗಳೂರು, (ಜ.21): ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal)  ಮಾತನಾಡಿದ್ರೆ ಸಾಕು ಕರ್ನಾಟಕ ರಾಜಕಾರಣದಲ್ಲಿIKarnataka Politics) ಸಂಚಲನ ಮೂಡಿಸುತ್ತದೆ.

ಇಷ್ಟು ದಿನ ಸಂಕ್ರಾಂತಿ ಎಂದಿದ್ದ ಯತ್ನಾಳ್ ಇದೀಗ ಹೊಸ ವರ್ಷ ಯುಗಾದಿ(Ugadi) ಬರ್ತಿದೆ.  ಬದಲಾವಣೆ ಜಗದ ನಿಯಮ. ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

BJP Politics: ಸಂಕ್ರಾಂತಿವರೆಗೂ ವೇಟ್‌ ಮಾಡಿ ರಾಜ್ಯದಲ್ಲಿ ಬದಲಾವಣೆ: ಸ್ಫೋಟಕ ಹೇಳಿಕೆ ಕೊಟ್ಟ ಯತ್ನಾಳ್‌

ಹೌದು....ಇಂದು(ಶುಕ್ರವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಗಾದಿಗೆ ಸರ್ಕಾರದಲ್ಲೂ ಬದಲಾವಣೆ ಆಗಬಹುದು. ಸೂರ್ಯ ಚಂದ್ರ ಇರುವ ತನಕ ನಿರಾಣಿ ಮುಖ್ಯಮಂತ್ರಿ ಆಗೋದಿಲ್ಲ. ಬ್ಲೇಜರ್ ಹೊಲಿಸಿ ಇಟ್ಟುಕೊಂಡರೆ ಮಾರಾಟಕ್ಕೆ ಇದೆ ಎಂದು ಎಂಜಿ ರಸ್ತೆಯಲ್ಲಿ ಮಾರಾಟಕ್ಕೆ ಹಾಕಬಹುದು ವ್ಯಂಗ್ಯವಾಡಿದರು. 

ಹರಿಹರ ಮತ್ತು ಮೂರನೇ ಪೀಠ ಅದು ನಿರಾಣಿ ಮಠ. ನಮ್ಮ ಮಠ ಪಂಚಮಸಾಲಿ ಸಮುದಾಯದ ಮಠ ಕೂಡಲಸಂಗಮ.
ಇನ್ನುಳಿದ ಎರಡು ಮಠ ಅದು ನಿರಾಣಿ ಮಠ ಎಂದು ಟಾಂಗ್ ಕೊಟ್ಟರು.

ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಅವಕಾಶ ನೀಡಬಾರದಿತ್ತು. ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ರೆ ಎಲ್ಲಾ ಹಾರಿ ಹೋಗ್ತಾ ಇದ್ರು. ದೇವರ ಜೊತೆ ಸಂಭಾಷಣೆ ಮಾಡಬೇಕಿತ್ತು ಎಂದರು.

ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದಕ್ಕಾಗಿ ಜನತೆ ಪರ ಸರ್ಕಾರಕ್ಕೆ ಅಭಿನಂದನೆ. ಜನರಲ್ಲಿ ಒಂದು ಗೊಂದಲ ಇತ್ತು ಕೊರೋನಾ ಕೇವಲ ಶುಕ್ರವಾರ ಸಂಜೆ ಬಂದು ಸೋಮವಾರ ಹೋಗ್ತದಾ ಎನ್ನುವ ಗೊಂದಲ ಇತ್ತು.ನೈಟ್ ಕರ್ಫ್ಯೂ ಯಾಕೆ ಅಂದ್ರೆ ಏನಾದರೂ ಸ್ವಲ್ಪ ಆದ್ರೂ ಇಟ್ಕೊಬೇಕು. ಏನೋ ಮಾಡಿದ್ದೇವೆ ಎನ್ನುವ ಕಾರಣಕ್ಕೆ ನೈಟ್ ಕರ್ಫ್ಯೂ ಮುಂದುವರಿಕೆ ಎಂದು ವ್ಯಂಗ್ಯವಾಗಿ ಸರ್ಕಾರಕ್ಕೆ ತಿವಿದರು.

ಇನ್ನು ಯತ್ನಾಳ್ ಹೇಳಿಕೆಗೆ ನಾನು ಉತ್ತರ ನೀಡೊದಿಲ್ಲ. ಅವರು ದೊಡ್ಡವರು. ಎಲ್ಲದರಲ್ಲೂ ದೊಡ್ಡವರು. ಮುಖ್ಯಮಂತ್ರಿ ಆಗೋದು ನನ್ನ ಕೈಲಿ ಇಲ್ಲ ಎಂದರು.

ಸೂಟು ಹೊಲಿಸಿ ಕೊಂಡಿದ್ದೀರಂತೆ ಎನ್ನುವ ಪ್ರಶ್ನೆಗೆ ಗರಂ ಆದ ನಿರಾಣಿ, ಹೌದು, ಸೂಟು ಹೊಲಿಸಿಕೊಂಡಿದ್ದೇನೆ. ಹಾಗೆ ಓಡಾಡೋಕೆ ಆಗತ್ತಾ? ಎಂದು ಪರೋಕ್ಷವಾಗಿ ಯತ್ನಾಳ್‌ಗೆ ಪ್ರಶ್ನಿಸಿದರು.

ರಾಜ್ಯದಲ್ಲಿನ(Karnataka) ಎಲ್ಲ ಚಟುವಟಿಕೆಗಳನ್ನು ಪ್ರಧಾನಿ ಗುಪ್ತಚರ ಇಲಾಖೆ ಗಮನಿಸುತ್ತಿದೆ. ಕಚೇರಿಗೆ ಹೋಗದೆ ಇರುವ ಸಚಿವರು ಯಾರು? ಎಂಬುವುದನ್ನು ನೋಡುತ್ತಿದೆ. ರಾಜ್ಯದ ಎಲ್ಲ ಬೆಳವಣಿಗೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನಿಗಾ ವಹಿಸಿದ್ದಾರೆ. ಸಂಕ್ರಾಂತಿ ಬಳಿಕ ಪ್ರಧಾನಿ ಮೋದಿ ಅವರು ದೊಡ್ಡ ಬದಲಾವಣೆ ಮಾಡಲಿದ್ದಾರೆ. ಕಳೆದ ಸಂಕ್ರಾಂತಿಗೂ ಹೇಳಿದ್ದೆ. ಬಿ.ಎಸ್‌. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಈ ಬಾರಿಯೂ ಸಂಕ್ರಾಂತಿವರೆಗೆ ತಡೆಯಬೇಕು. ಮಹತ್ವದ ಬದಲಾವಣೆ ಆಗುತ್ತದೆ ಎಂದು ಹೇಳಿದ್ದರು.

ಜನವರಿ 14ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ(Cabinet Expansion). ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸುಳಿವು ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಲಿದೆ. ಇದಲ್ಲದೆ ವಿಜಯಪುರ(Vijayapura) ಜಿಲ್ಲಾ ಉಸ್ತುವಾರಿ ಸಚಿವರೂ ಬದಲಾವಣೆಯಾಗಲಿದ್ದಾರೆ. ಸೂಕ್ತವಾದವರು ಉಸ್ತುವಾರಿ ಸಚಿವರಾಗಲಿದ್ದಾರೆ ಎಂದ ಅವರು, ನನಗೆ ಪಕ್ಷ ಸಿಹಿ ಸುದ್ದಿ ಕೊಡಲಿದೆ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!