Raichuru Politics: ಸಿಂಧನೂರು 'ಕೈ' ಟಿಕೆಟ್ ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು

By Ravi JanekalFirst Published Oct 8, 2022, 10:41 AM IST
Highlights
  • ಸಿಂಧನೂರು 'ಕೈ' ಟಿಕೆಟ್ ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು
  • ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ ಮತ್ತು ಕರಿಯಪ್ಪ ನಡುವೆ ಬಿಗ್ ಫೈಟ್
  • ಯಾರಿಗೆ ಮಣೆ ಹಾಕುತ್ತೆ ಕಾಂಗ್ರೆಸ್ ಹೈಕಮಾಂಡ್?

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಅ.8) : ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನೂ 6-7 ತಿಂಗಳು ಬಾಕಿಯಿದೆ. ಆದ್ರೂ ರಾಯಚೂರು ಜಿಲ್ಲೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಿನಿಂದಲ್ಲೇ ಚುನಾವಣೆ ಪ್ರಚಾರ ಶುರು ಮಾಡಿದ್ದಾರೆ. 

Raichur Politics: ಒಂದೇ ಟಿಕೆಟ್‌ಗೆ ತಾತ-ಮೊಮ್ಮಗನ ನಡುವೆ ತೀವ್ರ ಪೈಪೋಟಿ; ಯಾರಿಗೆ ಕೊಡುತ್ತೆ ಕೈ?

ಹಾಲಿ ಜೆಡಿಎಸ್(JDS) ಶಾಸಕ ವೆಂಕಟರಾವ್ ನಾಡಗೌಡ(Venkata rao Nadagowda) ತಾವು ಶಾಸಕರಾದ ವೇಳೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಿಳಿಸುತ್ತಾ ಗ್ರಾಮ ವಾಸ್ತವ್ಯ ಮಾಡಲು ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ. ಅಕ್ಟೋಬರ್ 12ರಿಂದ ಸಿಂಧನೂರು(Sindhanuru) ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಶುರು ಮಾಡಲಿದ್ದಾರೆ. ಇತ್ತ ಕಾಂಗ್ರೆಸ್(Congress) ನಾಯಕರು ‌ನಾವೂ ಯಾವುದರಲ್ಲಿ ಕಮ್ಮಿ ಇಲ್ಲವೆಂಬಂತೆ ಮೂವರು ನಾಯಕರು ಸುತ್ತಾಟ ನಡೆಸಿದ್ದಾರೆ.

ತಾತಾ ಮತ್ತು ಮೊಮ್ಮಗನ ಬದಲಾಗಿ ಕೆ. ಕರಿಯಪ್ಪಗೆ ಸಿಗುತ್ತಾ ಟಿಕೆಟ್?

ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ(Hampanagowda Badarli) ಮತ್ತು ಬಸನಗೌಡ ಬಾದರ್ಲಿ(Basanagowda Badarli) ನಡುವೆ ಬಿಗ್ ಫೈಟ್ ಇರುವ ವಿಚಾರ ಎಲ್ಲರಿಗೂ ಗೊತ್ತು. ಇದರ ಮಧ್ಯೆ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಹಿಂದುಳಿದ ನಾಯಕ ಎಂದು ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡ ಕೆ. ಕರಿಯಪ್ಪ(K.Kariyappa)ಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. 

ಇದಕ್ಕೆ ಪುಷ್ಟಿ ನೀಡುವಂಥ ಬೆಳವಣಿಗೆಗಳು ಸಿಂಧನೂರು ತಾಲೂಕಿನ ಜವಳಗೇರಾ(Javalagera) ಗ್ರಾಮದಲ್ಲಿ  ನಡೆದಿವೆ. ಇತ್ತೀಚಿಗೆ ಜವಳಗೇರಾ ಗ್ರಾಮದಲ್ಲಿ ವೆಂಕಟೇಶ್ವರ ದೇವರ ಜಾತ್ರೆ ನಡೆಯಿತು. ಈ ಜಾತ್ರೆಯ ರಥೋತ್ಸವ ವೇಳೆ ಕೆ. ಕರಿಯಪ್ಪನವರ ಅಭಿಮಾನಿಗಳು ರಥೋತ್ಸವ ವೇಳೆ ಬಾಳೆಹಣ್ಣಿನ ಮೇಲೆ ಸಿಂಧನೂರಿ‌ನ ಮುಂದಿನ ಶಾಸಕ ಕೆ. ಕರಿಯಪ್ಪ, ರಾಜ್ಯಕ್ಕೆ ಸಿಎಂ ಸಿದ್ದರಾಮಯ್ಯ(Siddaramaaiah)ಎಂದು ಬರೆದ ಬಾಳೆಹಣ್ಣು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಕೆ. ಕರಿಯಪ್ಪ ಕುರುಬ ಸಮುದಾಯದ ಮುಖಂಡರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. 

ಕೆ.ಕರಿಯಪ್ಪನ ಅಭಿಮಾನಿಗಳ ಡಿಮ್ಯಾಂಡ್ ಏನು?

ಕೆ. ಕರಿಯಪ್ಪ ಕಳೆದ 22-23 ವರ್ಷಗಳಿಂದ ರಾಜಕೀಯ(Politics)ದಲ್ಲಿ  ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ(Kalyana Karnataka)ದ ಕುರುಬ ಸಮುದಾಯದ ನಾಯಕ. 2023ರ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಅದು ಸಿಂಧನೂರು ಕ್ಷೇತ್ರಕ್ಕೆ ನೀಡಬೇಕು ಎಂಬ ಬೇಡಿಕೆ ಕೆ.ಕರಿಯಪ್ಪ ಅಭಿಮಾನಿಗಳು ಹಾಗೂ ಕುರುಬ ಸಮುದಾಯ ಮುಖಂಡರ ಒತ್ತಾಯವಾಗಿದೆ. ಈಗಾಗಲೇ ಕೆ.ಕರಿಯಪ್ಪ ಮತ್ತು ಕುರುಬ ಸಮುದಾಯದ ಕೆಲ ಮುಖಂಡರು ಹೈಕಮಾಂಡ್ (High Command)ನ ಕೆಲ ನಾಯಕರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದಾರೆ. 

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹತ್ತಾರು ಕುರುಬ ಸಮುದಾಯ ಮುಖಂಡರು ಇದ್ದಾರೆ. ಆದ್ರೆ ಯಾವ ಮುಖಂಡರು ಸಹ ವಿಧಾನಸಭಾ ಚುನಾವಣೆ ಸ್ಪರ್ಧೆ ಮಾಡಲು ಮುಂದೆ ಬರುತ್ತಿಲ್ಲ. ಆದ್ರೆ ಸಿಂಧನೂರು ಕ್ಷೇತ್ರದಲ್ಲಿ ಕೆ.ಕರಿಯಪ್ಪ ಅವರು ವಿಧಾನಸಭಾ ಚುನಾವಣೆ ಸ್ಪರ್ಧೆ ಮಾಡಲು ಮುಂದೆ ಬಂದಿದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ, ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಕುರುಬ ಸಮುದಾಯದ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ರಾಯಚೂರು(Raichur) ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿಯೂ ಕುರುಬ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಕುರುಬರಿಗೆ ಟಿಕೆಟ್ ಸಿಕ್ಕರೆ ಅನುಕೂಲವಾಗುತ್ತೆ ಅಂತಿದ್ದಾರೆ ಕೆ. ಕರಿಯಪ್ಪನ ಅಭಿಮಾನಿಗಳು.

ಕಾಂಗ್ರೆಸ್ ಟಿಕೆಟ್ ಗಾಗಿ ಕೆ.ಕರಿಯಪ್ಪ ತೆರೆಮರೆಯಲ್ಲಿ ಕಸರತ್ತು: 

ಸಿಂಧನೂರು ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರವಾಗಿದೆ. ಈ  ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌(Congress-JDS) ನಡುವೆ ನೇರ ಹಣಾಹಣಿಯಿದೆ, ಇಲ್ಲಿ ಬಿಜೆಪಿಗೆ ಸದ್ಯ ನೆಲೆ ಇಲ್ಲ. ಇಲ್ಲಿಯೂ ಒಮ್ಮೆ ಕಾಂಗ್ರೆಸ್‌, ಮತ್ತೊಮ್ಮೆ ಜೆಡಿಎಸ್‌ ಗೆಲ್ಲುತ್ತಿವೆ. ಹೀಗಾಗಿ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ ಯುವ ಮುಖಂಡ ಬಸನಗೌಡ ಬಾದರ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಸಂಕಷ್ಟ ಎದುರಾಗಿದೆ. ಇದರ ಮಧ್ಯೆ ಕಾಂಗ್ರೆಸ್ ನ ಹಿಂದುಳಿದ ನಾಯಕವೆಂದು ಗುರುತಿಸಿಕೊಂಡ ಕೆ.ಕರಿಯಪ್ಪ ಕೂಡ ನಾನು ಸ್ಪರ್ಧೆ ಮಾಡುತ್ತೇನೆ ಅಂತ ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ. 

ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕೆ.ಕರಿಯಪ್ಪ ‌ಈಗಾಗಲೇ ಹೈಕಮಾಂಡ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್(D.K.Shivakumar) ಸೇರಿದಂತೆ ಬೇರೆ ಬೇರೆ ನಾಯಕರಿಗೆ ಭೇಟಿ ‌ಮಾಡಿದ್ದಾರೆ. ಕುರುಬ ಸಮುದಾಯದ ಅಭ್ಯರ್ಥಿ ಆಗಿ ನಾನು ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಈ ಬಾರಿ ಕುರುಬರಿಗೆ ಅವಕಾಶ ನೀಡಬೇಕೆಂದು ಕೆ.ಕರಿಯಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಂತೆ ಹೈಕಮಾಂಡ್ ‌ಕೂಡ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ತಿಳಿಸಿದ್ದಾರೆ. ಹೀಗಾಗಿ ಸಿಂಧನೂರು ಕ್ಷೇತ್ರದಲ್ಲಿ ಇರುವ 35 ಸಾವಿರಕ್ಕೂ ಹೆಚ್ಚು ಕುರುಬ ಮತದಾರರನ್ನ ಸೆಳೆಯಲು ಕೆ.ಕರಿಯಪ್ಪ ಕ್ಷೇತ್ರದಲ್ಲಿ ಭರ್ಜರಿ ಓಡಾಟ ಶುರು ಮಾಡಿದ್ದಾರೆ.

ಸಾಮಾಜಿಕ ನ್ಯಾಯದಡಿ ನನಗೆ ಟಿಕೆಟ್ ಸಿಗುವುದು ಖಚಿತ: 

ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈಗ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಬಸನಗೌಡ ಬಾದರ್ಲಿ ಅಂತೆ ಕೆ.ಕರಿಯಪ್ಪ ಕೂಡ ಸಿಂಧನೂರು ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸದಲ್ಲಿ ಶುರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ‌ನ್ಯಾಯವಿದೆ. ಕುರುಬ ಸಮುದಾಯದ ಮುಖಂಡನೆಂದು  ಕಾಂಗ್ರೆಸ್ ಟಿಕೆಟ್ ನೀಡುತ್ತೆ ಎಂಬ ಆತ್ಮವಿಶ್ವಾಸದಿಂದ ಕೆ. ಕರಿಯಪ್ಪ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದಾರೆ. 

ಸಿಂಧನೂರು: ಲಾರಿ-ಕಾರು ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ

ಒಟ್ಟಿನಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಸ್ವಪಕ್ಷದಲ್ಲಿಯೇ ಭಾರೀ ಪೈಪೋಟಿ ನಡೆದಿದೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುವುದು ಕಾದು ನೋಡಬೇಕಾಗಿದೆ.

click me!