Mekedatu Padayatra ಮೇಕೆದಾಟು ಪಾದಯಾತ್ರೆ, ಸಿದ್ದು-ಡಿಕೆಶಿ ಜಂಟಿ ಸುದ್ದಿಗೋಷ್ಠಿಯ ಮುಖ್ಯಾಂಶಗಳು

By Suvarna NewsFirst Published Jan 6, 2022, 11:45 PM IST
Highlights

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಕೊರೋನಾ ರೂಲ್ಸ್ ಅಡ್ಡಿ
ಪಾದಯಾತ್ರೆ ಮಾಡಿಯೇ ತೀರಲು ಕಾಂಗ್ರೆಸ್ ಸಜ್ಜು
ಡಿಕೆಶಿ-ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು, (ಜ.06): ಮೇಕೆದಾಟು (Mekedatu) ಜಾರಿಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕೊರೋನಾ ರೂಲ್ಸ್ ಅಡ್ಡಿಯಾಗಿವೆ. ಆದರೂ ಪಾದಯಾತ್ರೆ(mekedatu padayatra) ಮಾಡಿಯೇ ತೀರುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಸಿದ್ಧರಾಗಿ ನಿಂತಿದ್ದಾರೆ.

ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಈ ಮೂಲಕ ಪಾದಯಾತ್ರೆಗೆ ಕಡಿವಾಣ ಹಾಕಲು ಶತಪ್ರಯತ್ನ ಮಾಡುತ್ತಿದೆ. ಇನ್ನು ಈ ಬಗ್ಗೆ ಸಿದ್ದು-ಡಿಕೆಶಿ ಜಂಟಿಸುದ್ದಿಗೋಷ್ಠಿ ನಡೆಸಿದರು.

Asianet Suvarna Special ಡಿಕೆ ಕೌಂಟರ್...ಸರ್ಕಾರಕ್ಕೆ ಬಂಡೆ ಸೆಡ್ಡು...ಪಾದಯಾತ್ರೆಗೆ ಸೀಕ್ರೆಟ್ ಪ್ಲಾನ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರವು ಪಾದಯಾತ್ರೆ ವಿಫಲಗೊಳಿಸುವ ಉದ್ದೇಶದಿಂದ ಅಘೋಷಿತ ಬಿಜೆಪಿ ಲಾಕ್​ಡೌನ್ ಹೇರಿದೆ. ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಇಂದು ನಿನ್ನೆ ಘೋಷಣೆ ಮಾಡಿದ್ದಲ್ಲ. ಪಾದಯಾತ್ರೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಪಾದಯಾತ್ರೆ ಮುಗಿಯುವವರೆಗೂ ನಿಯಮಗಳನ್ನು ಜಾರಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಇವರಿಗೆ ಏನು ಮಾಡಲು ಆಗಿಲ್ಲ. ನಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನೀರಾವರಿ ಸಚಿವ ಕಾರಜೋಳ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಗೋವಿಂದ ಕಾರಜೋಳ ಸುದ್ದಿಗೋಷ್ಠಿ ಮಾಡಿ, ನಾವು ಕಾಲಹರಣ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರೊಸಿಡಿಂಗ್​ ನಡೆದಿದ್ದ ಡಾಕ್ಯುಮೆಂಟ್​ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಇವರದೇ ಸರ್ಕಾರವಿದೆ. 1 ವರ್ಷದಲ್ಲಿ 190 ಟಿಎಂಸಿ ನೀರು ಬಿಡಬೇಕೆಂದು ಇತ್ತು. ಇದಕ್ಕೆ ನಾವು ಹಾಗೂ ಮಹಾರಾಷ್ಟ್ರದವರು ಅಪೀಲು ಹಾಕಿದ್ದೆವು. ನಾವು ಅಧಿಕಾರಕ್ಕೆ ಬಂದ ಕ್ಷಣದಿಂದ ಪ್ರಕ್ರಿಯೆ ಮುಂದುವರಿಸಿದ್ದೇವೆ. ನಾವು ಬರುವವರೆಗೆ ಮೇಕೆದಾಟು ಬಗ್ಗೆ ಏನೂ ಆಗಿರಲಿಲ್ಲ. ನಾವು ಬಂದ ಮೇಲೆ ಮೇಕೆದಾಟು ಬಗ್ಗೆ ಪ್ರಕ್ರಿಯೆ ಶುರುವಾಯ್ತು. ನಾನೇ ಹೋಗಿ ಪ್ರಧಾನಿಯವರಿಗೆ ಮನವಿ ಸಲ್ಲಿಕೆ ಮಾಡುತ್ತೇನೆ. ಯೋಜನೆ ಮಾಡಿಕೊಡಿ ಎಂದು ಪ್ರಧಾನಿಗೆ ಮನವಿ ಕೊಡ್ತೇನೆ. ಕಾರಜೋಳಗೆ ಬುದ್ಧಿ ಇಲ್ಲ ಅಂದ್ರೆ ನಾವು ಏನು ಹೇಳೋದು ಎಂದು ವಿಷಾದಿಸಿದರು.

ಫೆ.16, 2018ರ ಸುಪ್ರೀಂಕೋರ್ಟ್​​ ತೀರ್ಪು ಈ ವಿಚಾರದಲ್ಲಿ ಅಂತಿಮವಾದುದು. ಯಾಕೆ ಇವರು ಯೋಜನೆ ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ತಮಿಳುನಾಡಿನಲ್ಲಿ ಅಣ್ಣಾಮಲೈ ಯಾಕೆ ಧರಣಿಗೆ ಕುಳಿತುಕೊಂಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾರು? ಬಿಜೆಪಿಯವರೇ ಯೋಜನೆ ವಿರುದ್ಧ ಧರಣಿಗೆ ಕುಳಿತಿದ್ದಾರೆ. ನಮ್ಮ ಅಧಿಕಾರಾವಧಿಯಲ್ಲಿ ಯೋಜನೆಯ ಎಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ ಎಂದರು.

 ಈ ಸರ್ಕಾರಕ್ಕೆ ಯೋಜನೆ ಜಾರಿಗೊಳಿಸಲು ಏನು ತೊಂದರೆ? ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾರಜೋಳ ನಮ್ಮ ವಿರುದ್ಧ ಆರೋಪಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಏಕೆ ಕ್ಲಿಯರೆನ್ಸ್​​ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಗೋವಿಂದ ಕಾರಜೋಳ ಕೆಲವು ದಿನಗಳ ಹಿಂದೆ ದಾಖಲೆ ಬಿಡುಗಡೆ ಮಾಡುತ್ತೇನೆ, ಅದು ಸ್ಪೋಟಕ ಸುದ್ದಿ ಯಾಗುತ್ತೆ ಎಂದಿದ್ದರು. ಇಂದು ಸುದ್ದಿಗೋಷ್ಠಿ ಮಾಡಿ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಏನೂ ಮಾಡಲಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗಿದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

click me!