ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ; ತಾತಗೆ ಸಾಥ್ ನೀಡಿದ ಧವನ್ ರಾಕೇಶ್!

By Ravi Janekal  |  First Published Apr 18, 2023, 2:41 PM IST

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಿನ ದಿನಕ್ಕೆ ಅಚ್ಚರಿ ಹೊಸ ತಿರುವು ಪಡೆಯುತ್ತಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು. ಆದರೆ ಸಿದ್ದರಾಮಯ್ಯ ತವರು ಕ್ಷೇತ್ರಕ್ಕೆ ವಾಪಸ್ ಆಗಿರುವುದರಿಂದ ಇದೀಗ ವರುಣ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. 


ಮೈಸೂರು (ಏ.18) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಿನ ದಿನಕ್ಕೆ ಅಚ್ಚರಿ ಹೊಸ ತಿರುವು ಪಡೆಯುತ್ತಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು. ಆದರೆ ಸಿದ್ದರಾಮಯ್ಯ ತವರು ಕ್ಷೇತ್ರಕ್ಕೆ ವಾಪಸ್ ಆಗಿರುವುದರಿಂದ ಇದೀಗ ವರುಣ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. 

ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ:

Tap to resize

Latest Videos

ವರುಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಬಿಜೆಪಿ ತೀವ್ರ ಪೈಪೋಟಿ ಒಡ್ಡಿದೆ. ಹೀಗಾಗಿ ತಾತ ಸಿದ್ದರಾಮಯ್ಯರ ಪರವಾಗಿ ಅಖಾಡಕ್ಕಿಳಿದಿರುವ ಮೊಮ್ಮಗ ಧವನ್ ರಾಕೇಶ್(Dhavan rakesh) ತಾತನಿಗೆ ಸಾಥ್ ನೀಡುತ್ತಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಅಖಂಡ ಪರ ಸಿದ್ದರಾಮಯ್ಯ ಜಮೀರ್‌ ಲಾಬಿ,ಖರ್ಗೆ ಮುಂದೆ ಬಿಗಿಪಟ್ಟು

ಅವನದು ಅಪ್ಪನ ರಕ್ತ ಅಲ್ವ?

ಮೈಸೂರಿನ ಏರ್‌ಪೋರ್ಟ್‌ನಲ್ಲಿ ತಾತನೊಂದಿಗೆ ಕಾಣಿಸಿಕೊಂಡ ಧವನ್. ರಾಜಕೀಯದಲ್ಲಿ ಮೊಮ್ಮಗನ ಆಸಕ್ತಿ ಕಂಡು ಫುಲ್ ಖುಷ್ ಆಗಿರುವ ಸಿದ್ದರಾಮಯ್ಯ.(Siddaramaiah) ಈ ಬಗ್ಗೆ ಸಿದ್ದರಾಮಯ್ಯ ಜೋಶ್‌ನಲ್ಲಿ ಮಾತನಾಡಿದ್ದಾರೆ. "ಮೊಮ್ಮಗ ರಾಜಕೀಯ ಆಸಕ್ತಿ ತೋರಿಸೋದು ಸಹಜವಾಗಿಯೇ ಖುಷಿ ಆಗಿದೆ. ಅವನಿಗೆ ಇನ್ನೂ 17 ವರ್ಷ ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವ ಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಇಡೀ ಚಾಮುಂಡೇಶ್ವರಿ, ವರುಣ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶನೇ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ. ಈಗ ಮೊಮ್ಮಗ ನನ್ನೊಂದಿಗೆ ಸಾಥ್ ನೀಡುತ್ತಿದ್ದಾನೆ. ಎಷ್ಟಾದರೂ ಅಪ್ಪನ ರಕ್ತ ಅಲ್ವಾ?  ಸಂತಸ ವ್ಯಕ್ತಪಡಿಸಿದ ಸಿದ್ದರಾಮಯ್ಯ.

ನನ್ನಂತೆ ಮೊಮ್ಮಗನಿಗೂ ರಾಜಕೀಯದ ಆಸಕ್ತಿ ಬಂದಿದೆ. ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಮೈಸೂರಿಗೆ ಬಂದಿದ್ದಾನೆ.  ವರುಣಕ್ಕೆ ಪ್ರಚಾರಕ್ಕೆ ಹೋಗು ಅಂತಾನೂ ನಾನು ಹೇಳಿಲ್ಲ. ಬಾ ಅಂತಾನು ಕರೆಯೊಲ್ಲ ಎಂದ ಸಿದ್ದರಾಮಯ್ಯನವರು, ಮುಂದುವರಿದು, ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯಲ್ಲ. ಅವರಾಗಿಯೇ ಬಂದು ಪ್ರಚಾರ ಮಾಡಿದರೆ ಮಾಡಲಿ ಎಂದು ಹೇಳುವ ಮೂಲಕ ಮೊಮ್ಮಗನ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ಕೊಟ್ಟ ಸಿದ್ದರಾಮಯ್ಯ.

ಸೋಮಣ್ಣ ಹರಕೆಯ ಕುರಿ:

ವರುಣ ಕ್ಷೇತ್ರದಲ್ಲಿ ತಮ್ಮ ವಿರುದ್ದ ಬಿಜೆಪಿ ಸೋಮಣ್ಣನವರನ್ನು ಕಣಕ್ಕಿಳಿಸಿರುವ ಸಂಬಂಧ ಮಾತನಾಡಿದ ಸಿದ್ದರಾಮಯ್ಯನವರು ಸೋಮಣ್ಣನನ್ನು ಹರಕೆಯ ಕುರಿ ಮಾಡಲಾಗುತ್ತಿದೆ ಎಂದರು.

ವರುಣ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆಗೆ ಬಿ.ಎಲ್.ಸಂತೋಷ ಒತ್ತಡವೇ ಕಾರಣ. ಇಲ್ಲಿ ಸ್ಪರ್ಧಿಸಲು ದುಡ್ಡಿರುವ ಒಬ್ಬನು ಬೇಕು ಎಂದು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವನು. ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ. ರಾಮನಗರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ರಾಜಕೀಯ ಮಾಡಿದವನು ಸೋಮಣ್ಣ ಸೋಮಣ್ಣಗೂ ವರುಣ ಕ್ಷೇತ್ರಕ್ಕೂ ಏನು ಸಂಬಂಧ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದನಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾನೆ. ನಾನು ವರುಣ ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಸೋಮಣ್ಣ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಮಾಡಿದ್ದರೆ ಅವನೇಕೆ ವರುಣಗೆ ಬರುತ್ತಿದ್ದ. ಎಂದು ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ವರುಣ ಕ್ಷೇತ್ರದ ಸಂಬಂಧ ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಗ್ಗೆ ವರುಣ ಜನಕ್ಕೆ ಅಪಾರ ಪ್ರೀತಿ ವಿಶ್ವಾಸ ಇದೆ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನ ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ. ವರುಣದಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದಗಳ ಬಗ್ಗೆ ಎರೆಡು ಮೂರು ದಿನದಲ್ಲಿ ಹೇಳುತ್ತೇನೆ. ನಾನು ಇನ್ನೂ ಅವರಿವರ ಮುಖ ನೋಡಿಲ್ಲ‌. ಮುಖಗಳನ್ನ ನೋಡಿದರೆ ಅರ್ಥ ಆಗುತ್ತದೆ ಆಗ ಎಲ್ಲವನ್ನೂ ಹೇಳುತ್ತೇನೆ ಎಂದರು.

ಸಿಎಂ ಬೊಮ್ಮಾಯಿ ನಂಬರ್ ಒನ್ ಸುಳ್ಳುಗಾರ:

ವರುಣ ಕ್ಷೇತ್ರವನ್ನು ತಾಲೂಕನ್ನಾಗಿ ಮಾಡುತ್ತೇವೆ ಎಂಬಸಿಎಂ ಭರವಸೆ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಸಿಎಂ ಬೊಮ್ಮಾಯಿ ನಂಬರ್ ಒನ್ ಸುಳ್ಳುಗಾರ. ನಾಲ್ಕು ವರ್ಷದ ಆಡಳಿತದಲ್ಲಿ ಯಾಕೇ ಆ ಕೆಲಸ ಮಾಡಲಿಲ್ಲ. ವರುಣ ತಾಲೂಕು ಕೇಂದ್ರ ಅಲ್ಲ ಎಂಬುದು ಸಿಎಂಗೆ ಗೊತ್ತಿಲ್ಲ ಎನ್ನುವುದಾದರೆ ಈ ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಈಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಇದು ಒಂದು ರೀತಿ ಅಚ್ಚೇ ದಿನ್ ಆಗಾಯಾ ಎಂಬ ರೀತಿಯ ಸುಳ್ಳು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಈಗ ಬಿಎಲ್ ಸಂತೋಷ್ ಕಪಿಮುಷ್ಟಿಯಲ್ಲಿದೆ: 

ಬಿಜೆಪಿ ಈಗ ಬಿ.ಎಲ್ ಸಂತೋಷ ಕಪಿ ಮುಷ್ಟಿಯಲ್ಲಿ ಸಿಲುಕಿದೆ. ಬಿಜೆಪಿ ಇಂದಿನ ಎಲ್ಲ ಬೆಳವಣಿಗೆಗೆ ಬಿಎಲ್ ಸಂತೋಷ್ ಕಾರಣ. ಶೆಟ್ಟರ್ ಬಿ.ಎಲ್ ಸಂತೋಷ ಮೇಲೆ ಮಾಡಿರುವ ಆರೋಪಗಳು ಸರಿಯಾಗಿವೆ. ಈಶ್ವರಪ್ಪನಿಗೆ ಬಾಯಿ ಸರಿ ಇರಲಿಲ್ಲ. ಅವನಿಗೆ ಸರಿಯಾದ ಶಾಸ್ತಿ ಮಾಡಿದ್ದು ಸರಿ. ಆದರೆ ಜಗದೀಶ್ ಶೆಟ್ಟರ್, ಸವದಿ, ರಾಮದಾಸ್ ಅವರ ಏನು ತಪ್ಪು ಮಾಡಿದ್ದರು. ಅವರ ಮೇಲೆ ಯಾವ ಆರೋಪಗಳು ಇಲ್ಲ. ಆದರೂ ಟಿಕೆಟ್ ತಪ್ಪಿಸಲಾಗಿದೆ ಎಂದು ಬಿಎಲ್ ಸಂತೋಷ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ: ಸಿದ್ದರಾಮಯ್ಯ

ಎಡಗೈಗೆ ಪೆಟ್ಟು ಬಿದ್ದಿರುವ ಘಟನೆಗೆ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು,  ಚುನಾವಣಾ ಸಮಯ ಅದು ಇದು ಎಂದು ಹೇಳಿಕೊಂಡು ಜ್ವರ ಬರುವುದಿಲ್ಲ. ಇದು ನಿಸರ್ಗದ ನಿಯಮ. ಎಡಗೈಗೆ ಗಾಯವಾಗಿ ನಂಜು ಹೆಚ್ಚಾಗಿ ಜ್ವರ ಬಂದಿವೆ. ಇನ್ನೂ ನಾಲ್ಕೈದು ದಿನ ಸ್ವಲ್ಪ ರೆಸ್ಟ್ ಬೇಕು ಆಮೇಲೆ ಎಲ್ಲಾ ಸರಿ ಹೋಗುತ್ತೇನೆ ಎಂದರು.

click me!