ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ ಸೂಲಿಬೆಲೆ ಪರ ಸಿಟಿ ರವಿ ಬ್ಯಾಟಿಂಗ್

Published : Aug 01, 2022, 01:34 PM ISTUpdated : Aug 01, 2022, 01:36 PM IST
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ ಸೂಲಿಬೆಲೆ ಪರ ಸಿಟಿ ರವಿ ಬ್ಯಾಟಿಂಗ್

ಸಾರಾಂಶ

ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಅವರು ಅವರೊಂದಿಗೆ ಕೂತು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು (ಆ.1): ಮಂಗಳೂರಿನಲ್ಲಿ ನಡೆದ ಸರಣಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಬಿಜೆಪಿ ಚೇತರಿಸಿಕೊಳ್ಳಲು ಇನ್ನೂ ಸಮಯವಿದೆ. ಕಾರ್ಯಕರ್ತರನ್ನು ತಲುಪಿ 2ನಿಮಿಷ ಅವರ ಮಾತನ್ನು ಕೇಳಿ ಈ ಮೂಲಕ ಅತ್ಯುತ್ತಮ ಆಡಳಿತ ಮಾದರಿಯನ್ನು ತೋರಿಸಿ. ಕೆಟ್ಟ ವಿಚಾರಗಳ ವಿರುದ್ಧ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಅದರಂತೆ ಕಾರ್ಯನಿರ್ವಹಿಸಿ. ನನ್ನಂತಹ ಅನೇಕರು ಕಾಂಗ್ರೆಸ್‌ಗೆ ಮತ ಹಾಕಲು ಸಾಧ್ಯವಿಲ್ಲ ಆದರೆ ನಿಮ್ಮಂತಹ ಜನರನ್ನು ಅಧಿಕಾರದಲ್ಲಿರಿಸಲು ನಾವು ಮೂರ್ಖರಲ್ಲ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸಿಟಿ ರವಿ, ಚಕ್ರರ್ವತಿ ಸೂಲಿಬೆಲೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಚಕ್ರವರ್ತಿ  ವೈಚಾರಿಕವಾಗಿ ಅಪ್ಪಟ ರಾಷ್ಟ್ರ ಭಕ್ತ. ವ್ಯತಿರಿಕ್ತವಾಗಿ ಟ್ವೀಟ್ ಮಾಡಿದ್ರೂ ಅವರ ಜೊತೆ ನಾವು ಮಾತಾಡ್ತೀವಿ. ಅವರು ಅಂತವರಲ್ಲ, ಯಾವ ಕಾರ್ಯಕರ್ತರನ್ನೂ ಪಕ್ಷ  ಬಿಟ್ಟು ಕೊಡೋದಿಲ್ಲ. ನಮ್ಮದು ಕೇಡರ್ ಬೇಸ್ ಪಕ್ಷ. ಕೆಲವರನ್ನ ಕೂತು ಮಾತನಾಡಿಸಬೇಕು ಅಷ್ಟೇ. ದವಡೆಯೂ ನಮ್ಮದೆ, ನಾಲಿಗೆಯೂ ನಮ್ಮದೆ. ದವಡೆ ನಾಲಿಗೆ ಕಚ್ಚಿತು ಅಂತ ಏನೂ ಮಾಡಲಾಗಲ್ಲ ಎಂದಿದ್ದಾರೆ. 

ಈಶ್ವರಪ್ಪ, ಸಿದ್ದೇಶ್ವರ್ ಹೇಳಿಕೆ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರ: ಈಶ್ವರಪ್ಪ, ಸಿದ್ದೇಶ್ವರ್ ಹೇಳಿಕೆ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಟಿ ರವಿ ಅವರ ವಿಚಾರ ನಾನು ಒಪ್ಪಲ್ಲ. ಈ  ವಿಚಾರಕ್ಕಾಗಿ ಹೋರಾಟ ಮಾಡಿದ ಲಕ್ಷಾಂತರ ಕಾರ್ಯಕರ್ತ ಇದ್ದಾರೆ. ಅವರು ಇಂದು ಯಾವುದೇ ಅಧಿಕಾರ ಇಲ್ಲದೆ ಕೂತಿದ್ದಾರೆ.  ನಮ್ಮನ್ನ ಅಧಿಕಾರಕ್ಕೆ ಕರೆತಂದಿದ್ದಾರೆ. ಅವರನ್ನ ಮರೆಯೋ ಪ್ರಶ್ನೆಯೇ ಇಲ್ಲ. ನಮ್ಮದು ಪ್ರಶ್ನಿಸಲಾರದ ಪಕ್ಷವಲ್ಲ. ಪ್ರಶ್ನಿಸಿದ್ರೆ ಕ್ರಮ ಆಗುವ ಪಕ್ಷವೂ ನಮ್ಮದಲ್ಲ. ಕಾರ್ಯಕರ್ತ ಮತ್ತು ಸಿದ್ದಾಂತದ ಆಧಾರದ ಮೇಲೆ ಪಕ್ಷ ಬೆಳೆದಿದೆ. ನಮ್ಮ‌ವೇಗಕ್ಕೆ ತಕ್ಕಂತೆ ಪಕ್ಷವನ್ನ ಬೆಳೆಸಿಕೊಂಡು ಹೋಗಬೇಕು. ನಮ್ಮದು 18ಕೋಟಿ ಸದಸ್ಯತ್ವ ಇರುವ ರಾಜಕೀಯ ಪಕ್ಷ. ನಮ್ಮದಲ್ಲದ ತಪ್ಪಿನಿಂದ ಅವರು ಹೊರಹೋಗುವಂತೆ ಆಗಬಾರದು. ಯಾರಾದ್ರೂ ದುರುದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ರೆ ಸರಿಯಲ್ಲ. ಅವರ ಮೇಲೆ ಪಕ್ಷದ ಅಡಿಯಲ್ಲಿ ಕ್ರಮ ಆಗಲಿದೆ. ನಮ್ಮ ಹೋರಾಟ ಯಾರ ವಿರುದ್ಧ ಅನ್ನೋದು ತಿಳಿಯಬೇಕು. ಸೈದ್ದಾಂತಿಕ ವಿರುದ್ಧವಾಗಿ ನಮ್ಮ ಹೋರಾಟ ಆಗಬೇಕು. ಅದನ್ನ ಹೊರತುಪಡಿಸಿ ಬೇರೆ ಆಗಲು ಅವಕಾಶ ನೀಡಬಾರದು ಎಂದಿದ್ದಾರೆ. 

ನಿಗಮ ಮಂಡಳಿಯಲ್ಲಿ ಹೊಸ ಆಯ್ಕೆ:  ಇನ್ನು ನಿಗಮ ಮಂಡಳಿಯಲ್ಲಿ ಹೊಸ ಆಯ್ಕೆ ಮತ್ತು ಕೆಲವರನ್ನು ಕೈಬಿಡದ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಸಿಟಿ ರವಿ ಅತಿವೃಷ್ಠಿ ಆದಾಗ ಕೆಲವೊಮ್ಮೆ ಕಸ ಕಡ್ಡಿ ಬರ್ತದೆ. ಪವರ್ ಜನರೇಟ್ ಆಗುವಾಗ ಕಸಕಡ್ಡಿಯೂ ಬೇಕಾಗುತ್ತದೆ. ನಿಧಾನಕ್ಕೆ ಅದನ್ನು ಫಿಲ್ಟರ್ ಮಾಡುತ್ತೇವೆ. ಕೆಲ ಕಸ ಕಡ್ಡಿ ಹಾಗೆ ಇದ್ರೆ ಇನ್ನೂ ಫಿಲ್ಟರ್ ಮಾಡೋಣ. ವ್ಯಕ್ತಿಗಳ ಹಿಂದೆ ಓಡಾಡೋರಿಗೂ ಅವಕಾಶ ಸಿಕ್ಕಿರಬಹುದು ಎಂದರು.

ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ:  ಮುಖ್ಯಮಂತ್ರಿ ಆಯ್ಕೆಗೆ ನಮ್ಮಲ್ಲಿ ಸಂಸದೀಯ ಮಂಡಳಿ ಇದೆ. ಶಾಸಕರ ಅಭಿಪ್ರಾಯ ಕೇಳ್ತಾರೆ
ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಹೋಗ್ತೇವೆ ಎಂದ ಸಿಟಿ ರವಿ ನೀವು ಸಿಎಂ ಅಭ್ಯರ್ಥಿ ಅಲ್ವಾ ಎನ್ನುವ ಪ್ರಶ್ನೆಗೆ ಉತ್ತರಿಸಿ ನಾನು ಸದಾ ಕಾರ್ಯಕರ್ತ. ಬದಲಾವಣೆ ಮಾಡೋಕೆ ಆಗದ ಹುದ್ದೆ ಅದು. ಹಾಗಾಗಿ ನಾನು ಸದಾ ಕಾರ್ಯಕರ್ತ. ನನ್ನನ್ನು ಬಿಜೆಪಿಯಿಂದ‌ ಹೊರ ಹಾಕದಂತೆ ನೀವು ನೋಡಿಕೊಳ್ಳಿ ಎಂದು ಪತ್ರಕರ್ತರ ಪ್ರಶ್ನೆಗೆ ನಗೆ ಚಟಾಕಿ ಹಾರಿಸಿದರು.

ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ವಿಪಕ್ಷ ಆರೋಪ:  ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರವರ ವಯಸ್ಸಿಗೆ ಅವರು ಮಾತಾಡ್ತಾರೆ. ನಾನು ಮೂವತ್ತು ವರ್ಷದ ಹಿಂದೆ ಹಾರಾಡ್ತಾ ಇದ್ದೆ‌. ಈಗ ಹಾಗೆ ಮಾಡ್ತಿನಾ? ಅನುಭವ ಬರೋದು ಅನುಭವದಿಂದ. ಅವರವರ ಮಟ್ಟದಲ್ಲಿ ಅವರು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ಹೇಳುವ ಬಗೆಯಲ್ಲಿ ವ್ಯತ್ಯಾಸ ಆಗಿರಬಹುದು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ