ರೀಡೂ ಪಿತಾಮಹ ಯಾರು? ಸಿದ್ದರಾಮಯ್ಯನವರೇ ನೀವು ಕರೆಪ್ಟ್ ಸಿಎಂ: ಸಿ.ಟಿ.ರವಿ

By Govindaraj SFirst Published Aug 7, 2024, 11:25 PM IST
Highlights

ಸಿದ್ದರಾಮಯ್ಯನವರೇ ನೀವು ಕ್ಲೀನ್ ಸಿಎಂ ಅಲ್ಲ, ಕರೆಪ್ಟ್ ಸಿಎಂ. ನಿಮಗೆ ಸತ್ಯ ಎದುರಿಸುವ ಧೈರ್ಯವಿಲ್ಲದೆ ಪಲಾಯನವಾದ ಮಾಡಿದ್ದೀರಿ. ಫಲಾನುಭವಿಯಾಗಿರುವುದರಿಂದಲೇ ಪಲಾಯನ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು. 

ಮಂಡ್ಯ (ಆ.07): ಸಿದ್ದರಾಮಯ್ಯನವರೇ ನೀವು ಕ್ಲೀನ್ ಸಿಎಂ ಅಲ್ಲ, ಕರೆಪ್ಟ್ ಸಿಎಂ. ನಿಮಗೆ ಸತ್ಯ ಎದುರಿಸುವ ಧೈರ್ಯವಿಲ್ಲದೆ ಪಲಾಯನವಾದ ಮಾಡಿದ್ದೀರಿ. ಫಲಾನುಭವಿಯಾಗಿರುವುದರಿಂದಲೇ ಪಲಾಯನ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು. ನೀವು ಭ್ರಷ್ಟಾಚಾರದ ಫಲಾನುಭವಿಯೂ ಹೌದು. ಪೋಷಕರು ಹೌದು. ರೀಡೂ ಪಿತಾಮಹ ಯಾರು?, ರೀಡೂ ಹೆಸರಿನಲ್ಲಿ ೮೮೪ ಎಕರೆ ಡಿ-ನೋಟಿಫೈಕೇಷನ್ ಮಾಡಲಾಯಿತು. 

ಅದು ಅಕ್ರಮವಲ್ಲವೇ?, ಕೆಂಪಣ್ಣ ಆಯೋಗದ ವರದಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಹಗರಣ ಆಗಿರುವುದು ತಪ್ಪು ಎಂಬುದು ಸಾಬೀತಾಗಿದೆ. ಅದನ್ನು ಒಪ್ಪಿಕೊಳ್ಳದೆ ನಾನು ಕ್ಲೀನ್ ಸಿಎಂ ಎಂದರೆ ಹೇಗೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು. ಮೈಸೂರು ಮುಡಾ ವಿಚಾರದಲ್ಲಿ ನೀವು ಅಮಾಯಕ ಅಲ್ಲ. ಕೆಸರೆ ಸರ್ವೇ ನಂಬರ್ ೪೬೪ರ ಜಾಗಕ್ಕೆ ರಾಜ್ಯ ಸರ್ಕಾರ ೧೯೯೭ರಲ್ಲಿ ಅಧಿಸೂಚನೆ ಹೊರಡಿಸಿತ್ತು. 

Latest Videos

ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಪಾದಯಾತ್ರೆ ಮೂಲ ಸಂಚು: ಮಾಜಿ ಶಾಸಕ ಎಚ್.ಪಿ.ಮಂಜುನಾಥ್

೧೯೯೮ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು? ಒಮ್ಮೆ ನೋಟಿಫಿಕೇಷನ್ ಆಗಿರುವ ಜಾಗವನ್ನು ಮತ್ತೆ ಡಿನೋಟಿಫೈ ಮಾಡಲಾಗುವುದಿಲ್ಲ. ಹಾಗಾದರೆ ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು?, ನನ್ನ ಪ್ರಕಾರ ನೀವೇ ಆ ಪ್ರಭಾವಿ ವ್ಯಕ್ತಿ. ಆಗ ನೀವು ಉಪಮುಖ್ಯಮಂತ್ರಿಯಾಗಿದ್ದರ ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದಿರಿ. ನೀವು ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗವನ್ನು ಡಿನೋಟಿಫಿಕೇಷನ್ ಮಾಡಿಸಿದ್ದೀರಿ ಎಂದು ನೇರವಾಗಿ ಆರೋಪಿಸಿದರು.

ಸಿದ್ದು ತಲೆದಂಡಕ್ಕೆ ದೋಸ್ತಿ ಕಹಳೆ: ಸುಮಾರು 14 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಸಂಬಂಧ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇದೀಗ ಅದೇ ಅಸ್ತ್ರ ಬಳಸಿ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ‘ಮೈಸೂರು ಚಲೋ’ ಪಾದಯಾತ್ರೆ ಆರಂಭಿಸುವ ಮೂಲಕ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೊಡೆ ತಟ್ಟಿವೆ.

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ದೋಸ್ತಿ ಪಕ್ಷದ ಮುಖಂಡರು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ಆರಂಭಿಸಿದ್ದು, ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಪಣತೊಟ್ಟರು. ಪಾದಯಾತ್ರೆಗೂ ಮುನ್ನ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್‌ನ ಪ್ರಮುಖರು ನಗಾರಿ ಬಾರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದರು.

ಭ್ರಷ್ಟ ಬಿಜೆಪಿಗರು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದ: ಶಾಸಕ ದರ್ಶನ್‌ ಧ್ರುವನಾರಾಯಣ್

ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೆ.ಕೆ.ಗ್ರ್ಯಾಂಡ್‌ ಅರೆನಾ ಸೆಂಟರ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಾದಯಾತ್ರೆಗಾಗಿ ಕಾಂಗ್ರೆಸ್‌‍ ವಿರುದ್ಧ ರಚಿಸಿದ ಗೀತೆಯನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಉಭಯ ಪಕ್ಷಗಳ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಮಾವೇಶದಲ್ಲಿ ಒಗ್ಗಟ್ಟಿನ ಪ್ರದರ್ಶನ ತೋರಿದ ಬಿಜೆಪಿ-ಜೆಡಿಎಸ್‌ ನಾಯಕರು ಈ ಪಾದಯಾತ್ರೆ ಮುಕ್ತಾಯಗೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

click me!