ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯ ಮುಂದುವರಿಯುತ್ತಾರೆ: ಸಚಿವ ಮಹದೇವಪ್ಪ

By Kannadaprabha News  |  First Published Jan 14, 2025, 4:31 AM IST

ಕೂಗಾಟ ಚರ್ಚೆ ಏನು ಇಲ್ವಲ್ಲಾ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಆ ಕುರ್ಚಿ ಮುಂದುವರಿಯುತ್ತದೆ. ಕುರ್ಚಿಯ ಬಗ್ಗೆ ಯಾವ ಚರ್ಚೆಗಳೂ ಆಗಿಲ್ಲ.ಅನಾವಶ್ಯಕವಾಗಿ ಚರ್ಚೆ ಆಗುತ್ತಿದೆ ಅಷ್ಟೇ ಎಂದು ಹೇಳಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ


ಮೈಸೂರು(ಜ.14): ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಗಾಟ ಚರ್ಚೆ ಏನು ಇಲ್ವಲ್ಲಾ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಆ ಕುರ್ಚಿ ಮುಂದುವರಿಯುತ್ತದೆ. ಕುರ್ಚಿಯ ಬಗ್ಗೆ ಯಾವ ಚರ್ಚೆಗಳೂ ಆಗಿಲ್ಲ.ಅನಾವಶ್ಯಕವಾಗಿ ಚರ್ಚೆ ಆಗುತ್ತಿದೆ ಅಷ್ಟೇ ಎಂದು ಹೇಳಿದರು. 

Tap to resize

Latest Videos

ಬಿಜೆಪಿ-ಜೆಡಿಎಸ್ ಸರ್ವಾಧಿಕಾರಿ ನಡೆಯನ್ನು ಜನರು ತಿರಸ್ಕರಿಸಿದ್ದಾರೆ: ಸಚಿವ ಮಹದೇವಪ್ಪ

ಡಿ.ಕೆ. ಶಿವಕುಮಾರ್‌ ಹೈಕಮಾಂಡ್ ಬೆಂಬಲ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ಕಾಂಗ್ರೆಸ್ ಗೆ ಹೈಕಮಾಂಡ್ ಬೆಂಬಲವಾಗಿ ನಿಂತಿದೆ. ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿದೆ. ಡಿ. ಕೆ. ಶಿವಕುಮಾರ್‌ ಹೇಳಿರುವುದರಲ್ಲಿ ಸರಿ ಇದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದೇ ಅಂತಿಮ ಎಂದರು. 

ಒಂದು ಕಡೆ ಸೇರಿ ಊಟ ಮಾಡುವುದು ಟೀಗೆ ಅಪರಾಧನಾ? ಸೇರುವುದು ಗುಂಪುಗಾರಿಕೆನಾ? ಆ ರೀತಿ ಏನು ಇಲ್ಲ ಕಾಂಗ್ರೆಸ್ ನಲ್ಲಿ. ಕಾಂಗ್ರೆಸ್ ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಡಾ.ಜಿ. ಪರಮೇಶ್ವರ ಅವರ ಡಿನ್ನರ್‌ತಡೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿನ್ನರ್‌ಗೆ ತಡೆಯಾಗಿಲ್ಲ. ಸುರ್ಜೇವಾಲಾ ಸೋಮವಾರ ಬರ್ತಿದ್ದಾರೆ. ಚರ್ಚೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಡಿನ್ನರ್‌ಗೆ ಯಾವ ತಡೆಯನ್ನೂ ಕೊಟ್ಟಿಲ್ಲ. ನಿಲ್ಲಿಸಿ ಎಂದು ಯಾರು ಹೇಳಿಲ್ಲ. ಡಿನ್ನರ್‌ ಬಗ್ಗೆ ಯಾರು ತಪ್ಪು ತಿಳಿದುಕೊಳ್ಳಬಾರದು ಎಂದರು. 

ಡಿ.ಕೆ. ಶಿವಕುಮಾರ್‌ ಇದ್ದಾಗಲೂ ಡಿನ್ನ‌ರ್ ನಡೆದಿದೆ. ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅರ್ಥ ಇಲ್ಲ. ಡಿ.ಕೆ. ಶಿವಕುಮಾ‌ರ್ ಧಾರ್ಮಿಕವಾಗಿ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಸಂವಿಧಾನದಲ್ಲಿ ಸ್ವಾತಂತ್ರ್ಯ ಇದೆ. ಧಾರ್ಮಿಕ ಆಚರಣೆಗಳಲ್ಲಿ ಡಿ.ಕೆ. ಶಿವಕುಮಾ‌ರ್ ಮುಕ್ತವಾಗಿದ್ದಾರೆ ಎಂದು ಅವರು ತಿಳಿಸಿದರು. 

ಡಿ.ಕೆ. ಶಿವಕುಮಾರ್‌ಸಿಎಂ ಆಗುವ ನಂಬಿಕೆ ಇಟ್ಟುಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಅಧಿಕಾರಕ್ಕೆ ಬಂದವರಿಗೆ ಅಧಿಕಾರ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ನನಗೆ ಜನರಿಗೆ, ದೇಶಕ್ಕೆ ಸಂವಿಧಾನಕ್ಕೆ ಒಳ್ಳೆಯದಾಗಬೇಕೆಂಬ ಆಸೆ ಇದೆ. ರೇಸ್ ಇಲ್ಲದ ಮೇಲೆ ಆಸೆ ಇಲ್ಲ ಎಂದು ಹೇಳಿದರು. 

ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು, ಬಿಡುವುದು ಸ್ಥಳೀಯ ಆಡಳಿತಕ್ಕೆ ಬಿಟ್ಟದ್ದು

ಮೈಸೂರು: ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದು, ಬಿಡುವುದು ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. 

ಬಿಜೆಪಿ, ಜೆಡಿಎಸ್‌ನವರು ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ರಾಜಕೀಯ ಕುತಂತ್ರಕ್ಕೆ ಜನರ ತಕ್ಕ ಉತ್ತರ: ಮಹದೇವಪ್ಪ

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ರಸ್ತೆಗೆ ಹೆಸರಿಟ್ಟುಕೊಂಡು ಗುರುತಿಸಿಕೊಳ್ಳುವ ಪರಿಸ್ಥಿತಿ ಇದಿಯಾ?. ಸಾಧನೆ ಮಾಡಿದವರು, ಸಮಾಜಮುಖಿ ಕೆಲಸ ಮಾಡಿದವರ ಹೆಸರನ್ನು ವೃತ್ತಕ್ಕೆ, ರಸ್ತೆಗೆ ಇಡುತ್ತಾರೆ ಎಂದರು. 

ಯಾರದ್ದೋ ಹೆಸರನ್ನು ತೆಗೆದು ಅವರ ಹೆಸರಿಡುವುದು ಬೇಡ. ಅದರ ಬಗ್ಗೆ ನಾನು ಹೇಳಲ್ಲ, ಇದೆಲ್ಲ ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ. ಹೆಸರಿಡುವ ವಿಚಾರಕ್ಕೆ ಪಟ್ಟು ಹಿಡಿದಿಲ್ಲ. ಹೆಸರಿಡಿ ಎಂದು ಸಿದ್ದರಾಮಯ್ಯನವರು ಸಹ ಕೇಳಿಲ್ಲ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರವನ್ನು ಸ್ಥಳೀಯ ಆಡಳಿತಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದರು. 

click me!