'ಸಿದ್ದರಾಮಯ್ಯ ಬಿಜೆಪಿಗೆ ಬಂದು ಕೇಂದ್ರ ಮಂತ್ರಿ ಆಗೋದು ಫಿಕ್ಸ್'

By Suvarna News  |  First Published Mar 4, 2020, 9:50 PM IST

ಮಾಜಿ ಸಿಎಂ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದು, ಪಕ್ಷ ಸೇರ್ಪಡೆಯಾದ ನಂತರ ಕೇಂದ್ರ ಸಚಿವರಾಗುತ್ತಾರೆ ಎಂದು ಮಾಜಿ ಸಚಿವರೊಬ್ಬರು ಹೊಸ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ್ದಾರೆ.


ಯಾದಗಿರಿ, (ಮಾ.04): ಸಿದ್ದರಾಮಯ್ಯ ಬಿಜೆಪಿ ಬಂದು ಕೇಂದ್ರ ಮಂತ್ರಿಯಾಗುವುದು ಖಚಿತ ಎಂದು ಮಾಜಿ ಸಚಿವ ಬಾಬುರಾವ್  ಚಿಂಚನಸೂರ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇಂದು (ಬುಧವಾರ) ಯಾದಗಿರಿಯಲ್ಲಿ ಮಾತನಾಡಿರುವ ಅವರು ಬಿಜೆಪಿ ನಾಯಯ ಚಿಂಚನಸೂರ, ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ ಸೇರಿದಂತೆ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಬಾಂಬ್ ಸಿಡಿಸಿದರು.

Tap to resize

Latest Videos

ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ

ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಅವರು ಕೂಡ ಬಿಜೆಪಿ ಸೇರಲಿದ್ದಾರೆಂದು ಎಂದು ಹೇಳಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ವ್ಯಕ್ತಿಯೊಬ್ಬ ಚಿಂಚನಸೂರ ಮೇಲೆ ಸಿಡಿಮಿಡಿಗೊಂಡಿರುವ ಪ್ರಸಂಗ ನಡೆಯಿತು. ನೀವು ನಿಮ್ಮ ಹಿಂಬಾಲಕ ಚೇಲಾಗಳ ಮಾತುಗಳನ್ನು ಕೇಳುತ್ತೀರಾ. ಅವರಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮತ್ತೆ ಚುನಾವಣೆ ಹೇಗೆ ಗೆಲ್ಲುತ್ತಿಯಾ ನಾನು ನೋಡುತ್ತೆನೆಂದು ಸವಾಲು ಹಾಕಿದ್ದಾನೆ.

ಜಿಲ್ಲೆಯ ಕಬ್ಬಲಿಗ ಸಮಾಜದ ಮುಖಂಡ ಜಿ.ವೆಂಕಟೇಶ್ ಎನ್ನುವಾತನೇ ಚಿಂಚನಸೂರಗೆ ತರಾಟೆಗೆ ತೆಗೆದುಕೊಂಡಿದ್ದು.

click me!