ಭ್ರಷ್ಟ ಬಿಜೆಪಿ ಸರ್ಕಾ​ರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು

By Govindaraj SFirst Published Sep 5, 2022, 11:31 PM IST
Highlights

ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿಯಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಪಟೇಲ್‌ ಶಿವಪ್ಪ ಅವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅರಸೀಕೆರೆ (ಸೆ.05): ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿಯಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಪಟೇಲ್‌ ಶಿವಪ್ಪ ಅವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿ.ಎಸ್‌.ಐ ನೇಮಕ,ಪಿ.ಡಬ್ಯು.ಡಿ ಗುತ್ತಿಗೆ, ಕೆ.ಪಿ.ಟಿ.ಸಿ.ಎಲ್‌ ನೇಮಕಾತಿ ಹಗರಣ ಸೇರಿದಂತೆ ಹತ್ತಾರು ಭ್ರಷ್ಟಾಚಾರದ ಪ್ರಕರಣಗಳು ಕಣ್ಣಮುಂದೆ ಇದೆ. ಜನರೇ ಈ ಕುರಿತು ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. 

ಇಂತಹವರು ಜನೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದವಾಗಿದ್ದು ಇದೊಂದು ಭ್ರಷ್ಟೋತ್ಸವ ಎಂದು ಕಿಡಿಕಾರಿದರು. ಎತ್ತಿನಹೊಳೆ ಕೃಷ್ಣಕಾವೇರಿ ಸೇರಿ ಹಲವು ಜಲಸಂಪನ್ಮೂಲ ಇಲಾಖೆಯ ಕೆಲಸಗಳು ನೆನಗುದ್ದಿಗೆ ಬಿದ್ದಿದ್ದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಹಣ ಖರ್ಚು ಮಾಡಲಾಗಿದೆಯೇ ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ. 1.40ಲಕ್ಷ ಕೋಟಿ ಅನುದಾನ ಮಿಸಲಿಟ್ಟಿದ್ದೀವಿ ಎಂದು ಹೇಳಿದ್ದಾರೆ. ಆದರೆ ಇದೂವರೆಗೆ ಕೇವಲ 40ಸಾವಿರ ಕೋಟಿ ರು. ಮಾತ್ರ ಖರ್ಚು ಮಾಡಿರುವುದು ದಾಖಲೆಗಳಲ್ಲಿ ಇದೆ. 

ಲೂಟಿ ಬಿಟ್ಟು ತಾಪಂ, ಜಿಪಂ ಚುನಾವಣೆ ನಡೆಸಿ; ಶಾಸಕ ಪ್ರೀತಂ ಗೌಡಗೆ ರೇವಣ್ಣ ಟಾಂಗ್

ಈ ಸಂಬಂಧ ಸದನದಲ್ಲಿ ಪ್ರಸ್ತಾಪ ಮಾಡ​ಲಿದ್ದೇನೆ. ಮಳೆಹಾನಿ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಗಣೇಶೋತ್ಸವ ಕಾನೂನಿನ ನಿಯಮಾನುಸಾರ ನಡೆಯಲಿದೆ. ಶಾಂತಿ ಕದಡುವವರಿಗೆ ಪೋಲಿಸರೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಸಾವರ್ಕರ್‌ ವಿಷಯ ಅಪ್ರಸ್ತುತ,ಬುದ್ಧ,ಬಸವಣ್ಣ, ಕನಕದಾಸ ಸೇರಿ ಎಲ್ಲರ ಇತಿಹಾಸವನ್ನು ತಿರುಚಲು ಹೊರಟವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಸ್ತ್ರೀ ಸಮುದಾಯಕ್ಕೆ ಧಕ್ಕೆ: ರಾಜಕಾಲುವೆ ಒತ್ತೂವರೆ ತೆರವು ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಂದಿಗೆ ಅನುಚಿತವಾಗಿ ಮಾತನಾಡಿರುವುದು ಸ್ತ್ರೀ ಸಮುದಾಯಕ್ಕೆ ಧಕ್ಕೆ ತಂದಿದೆ. ಇಂತಹವರು ವಿಧಾನಸಭೆ ಪ್ರವೇಶಿಸಲು ನಲಾಯಕ್‌ ಬಿಜೆಪಿಗರೂ ಇನ್ನಾದರೂ ಇಂತಹ ಹೀನ ಸಂಸ್ಕೃತಿ ಪ್ರದರ್ಶಿಸುವರನ್ನು ಹೊರಹಾಕಲಿ. ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಯಾರೇ ಪಕ್ಷದಿಂದ ಹೊರಹೋದರೂ ಕಾಂಗ್ರೆಸ್‌ ಮುಗಿಸಲು ಸಾಧ್ಯವಿಲ್ಲ ಹಳೇ ಮೈಸೂರು ಭಾಗದಲ್ಲಿ ಹಲವು ಸ್ನೇಹಿತರು ಕಾಂಗ್ರೆಸ್‌ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಮುಂದಿನ ರಾಜಕೀಯ ಧೃವೀಕರಣದ ಕುರಿತು ಈಗಲೇ ಏನನ್ನು ಹೇಳಲಾಗದು ಶಾಸಕ ಕೆ.ಎಂ ಶಿವಲಿಂಗೇಗೌಡ ಕಾಂಗ್ರೆಸ್‌ ಸೇರುವ ಕುರಿತು ಅವರನ್ನೆ ಪ್ರಶ್ನಿಸಿ ಎಂದು ಪ್ರತ್ತ್ಯುತ್ತರ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಇನ್ನಿಲ್ಲ: ಸಾವಿನಲ್ಲೂ ಸಾರ್ಥಕತೆ ಮೆರೆದ ಜನಮೆಚ್ಚಿದ ಡಾಕ್ಟರ್

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶಿವರಾಂ, ಪಟೇಲ್‌ ಶಿವಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಜಿಲ್ಲಾ ವಕ್ಕಲಿಗರ ಸಂಘದ ನಿರ್ದೇಶಕ ರಾಮಚಂದ್ರು, ಮುಖಂಡರಾದ ಬಿ.ಜಿ ನಿರಂಜನ್‌,ಜಿ.ಟಿ.ಎಸ್‌ ಗೌಸ್‌ಖಾನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾಚಂದನ್‌, ತಾಲೂಕು ಅಧ್ಯಕ್ಷೆ ಜಯಪದ್ಮ, ಜಿ.ಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ,ವೆಂಕಟೇಶ್‌, ಶ್ರೀನಿವಾಸ್‌ ಸೇರಿದಂತೆ ಹಲವರು ಹಾಜರಿದ್ದರು.

click me!