Mekedatu Project: ಬಿಜೆಪಿಗೆ ಆಗದಿದ್ರೆ ಹೇಳಲಿ, ನಾವು ಮಾಡ್ತೇವೆ: ಸಿದ್ದರಾಮಯ್ಯ

Kannadaprabha News   | Asianet News
Published : Mar 02, 2022, 12:48 PM IST
Mekedatu Project: ಬಿಜೆಪಿಗೆ ಆಗದಿದ್ರೆ ಹೇಳಲಿ, ನಾವು ಮಾಡ್ತೇವೆ: ಸಿದ್ದರಾಮಯ್ಯ

ಸಾರಾಂಶ

*  ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾವೇ ಈ ಯೋಜನೆ ಜಾರಿಗೊಳಿಸಿ ತೋರಿಸುತ್ತೇವೆ  *  ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ  *  ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿಲ್ಲ

ಬೆಂಗಳೂರು(ಮಾ.02): ಮೇಕೆದಾಟು ಯೋಜನೆ(Mekedatu Project) ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರಗಳ(BJP Government) ಕೈಯಲ್ಲಿ ಆಗದಿದ್ದರೆ ಹೇಳಲಿ. ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾವೇ ಈ ಯೋಜನೆ ಜಾರಿಗೊಳಿಸಿ ತೋರಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸವಾಲು ಹಾಕಿದ್ದಾರೆ. 

ರಾಜ್ಯದಲ್ಲಿ(Karnataka) ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ(Congress Government) ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ(Coalition Government) ಡಿ.ಕೆ.ಶಿವಕುಮಾರ್‌(DK Shivakumar) ಅವರು ಜನಸಂಪನ್ಮೂಲ ಸಚಿವರಾದಾಗ ಡಿಪಿಆರ್‌ಅನ್ನು ಪರಿಷ್ಕೃತಗೊಳಿಸಲಾಗಿತ್ತು. ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮೂರು ವರ್ಷ ಕಳೆದರೂ ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿಲ್ಲ. ಕೇಂದ್ರದಲ್ಲೂ ತಮ್ಮದೇ ಸರ್ಕಾರ ರಾಜ್ಯದಲ್ಲೂ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಬೆಂಗಳೂರಿನ ಜನರಿಗೆ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಕುಡಿಯುವ ನೀರು ಯೋಜನೆಗೆ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಯೋಜನೆ ಆರಂಭಿಸಲು ಎಳ್ಳಷ್ಟೂ ಪ್ರಯತ್ನ ನಡೆಸದೆ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೇಕೆದಾಟು ಕುರಿತು ಸಿದ್ದರಾಮಯ್ಯ ಪುಸ್ತಕ ಲೋಕಾರ್ಪಣೆ: ಪಾದಯಾತ್ರೆ ಬಳಿಕವೂ ಹೋರಾಟ ಎಂದ ಸಿದ್ದು!

ಬಿಜೆಪಿಯವರು ಮಾಡುತ್ತಿರುವ ದ್ರೋಹಕ್ಕೆ ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ತಮ್ಮ ಕೈಯಲ್ಲಿ ಈ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ ಹೇಳಲಿ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಅನುಷ್ಠಾನಗೊಳಿಸುತ್ತೇವೆ ಎಂದು ಸವಾಲು ಹಾಕಿದರು.

'ಸಿದ್ದರಾಮಯ್ಯ ಅಲ್ಲ, ಸಿದ್ದರಾಮ ಮುಲ್ಲಾ...'

ಗಂಗಾವತಿ: ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ(Harsha Murder) ಕಾರಣರಾದ ಮುಸ್ಲಿಮರ ಓಲೈಕೆಯಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮ ಮುಲ್ಲಾ ಆಗಿದ್ದಾರೆ ಎಂದು ಶಿವಮೊಗ್ಗದ ಋಷಿಕೇಶಿ ಕಾಳಿಮಠದ ಕಾಳಿ ಸ್ವಾಮೀಜಿ(Kali Swamy) ವಾಗ್ದಾಳಿ ನಡೆಸಿದ್ದರು. 

ಹರ್ಷ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಫೆ.26 ರಂದು ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ(Muslim) ಯುವಕರ ತಂಡ ಹರ್ಷ ಕೊಲೆ ಮಾಡಿದ್ದು ಇಡೀ ದೇಶವೇ ತಲ್ಲಣಗೊಂಡಿದೆ. ಇಂತಹ ಸಮುದಾಯಕ್ಕೆ ಸಿದ್ದರಾಮಯ್ಯ ಬೆಂಬಲ ನೀಡಿ ಓಲೈಸಿಕೊಳ್ಳಲು ಮುಂದಾಗಿದ್ದಾರೆ. ಪರೇಶ ಮೇಸ್ತಾ ಸತ್ತಾಗ ಸಿದ್ದರಾಮಯ್ಯಗೆ ಸಿದ್ದರಾಮ ಮುಲ್ಲಾ ಎಂದು ಕರೆದಿದ್ದೆ. ಈಗ ಅದೇ ಹೆಸರು ನಿಗದಿಯಾಗಿದೆ ಎಂದು ವ್ಯಂಗ್ಯವಾಡಿದರು.  ಅವರ ಮಗ ವಿದೇಶದಲ್ಲಿ ಸತ್ತಾಗ ಅದರ ಮಾಹಿತಿಯನ್ನೇ ನೀಡಲಿಲ್ಲ. ಇದೀಗ ಹರ್ಷ ಕೊಲೆ ತನಿಖೆ ಬಗ್ಗೆ ಮಾತನಾಡುತ್ತಿದ್ದಾರೆ. ಅವನೋರ್ವ ರೌಡಿ ಶೀಟರ್ ಎಂದು ಹೇಳಿದ್ದಾರೆ, ನಿಮ್ಮ ಮಗ ಶ್ರೀರಾಮಚಂದ್ರ ಆದರೆ ನಮ್ಮ ಮಗ (ಹರ್ಷ) ರೌಡಿನಾ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದರು. 

Mekedatu Padayatra: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಕುಟುಂಬದಲ್ಲಿ ಅಧಿಕ ಸದಸ್ಯರು ಇರುವ ಮುಸ್ಲಿಂರ ಓಲೈಕೆಗಾಗಿ ಮುಂದಿನ ಚುನಾವಣೆಯಲ್ಲಿ(Election) ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ದೂರಿದ ಶ್ರೀಗಳು, ಹಿಂದೂಗಳು ಒಂದಾಗದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ನೆರೆದಿದ್ದವರನ್ನು ಎಚ್ಚರಿಸಿದ್ದರು. 

ಗಾಂಧಿ ಪ್ರತಿಮೆಗೆ ಹಾರ: 

ಮಹಾತ್ಮ ಗಾಂಧೀಜಿ(Mahatma Gandhiji) ದೇಶ ಇಬ್ಭಾಗ ಮಾಡಿದ ಪರಿಣಾಮ ಈಗ ನಾವು ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಮೆರವಣಿಗೆ ಸಂದರ್ಭದಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಲು ಕರೆದರು. ನನಗೆ ಮನಸ್ಸು ಇಲ್ಲದೆ ಇದ್ದರೂ ಅನಿವಾರ್ಯವಾಗಿ ಹಾರ ಹಾಕಬೇಕಾಯಿತು. ಮುಸ್ಲಿಂ ರಕ್ಷಣೆಗೆ ಬಿ.ಕೆ. ಹರಿಪ್ರಸಾದ(BK Harirpasad) ಸೇರಿ ಹಲವರು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದರು. ಹಡಗಲಿಯ ಹಾಲಸ್ವಾಮಿಗಳು ಮಾತನಾಡಿ, ಹರ್ಷ ಕೊಲೆ ಹಾಗೂ ಹಾವೇರಿಯ ಜಿಲ್ಲೆಯ ಯರಗುಪ್ಪಿಯ ಯುವತಿ ಮೇಲಿನ ಅತ್ಯಾಚಾರ(Rape) ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವೇ ತಲ್ಲಣಗೊಂಡಿದೆ. ಹರ್ಷ ಕೊಲೆ ಗಮಿಸಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಸ್ಲಿಂರನ್ನು ನಾವು ಚಿಕ್ಕಪ್ಪ, ದೊಡ್ಡಪ್ಪ ಎಂದು ಕರೆದರೂ ಅವರು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ