ಕರ್ನಾಟಕದಲ್ಲಿರುವುದು ವಚನ ಭ್ರಷ್ಟ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

Published : Jan 13, 2023, 01:03 PM IST
ಕರ್ನಾಟಕದಲ್ಲಿರುವುದು ವಚನ ಭ್ರಷ್ಟ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

ಸಾರಾಂಶ

ರಾಜ್ಯದ 25 ಸಂಸದರು ಇದ್ದಾರೆ. 15ನೇ ಹಣಕಾಸು ಆಯೋಗದ ಯೋಜನೆಯ 5495 ಕೋಟಿ ಅನುದಾನ ಕೇಳಲು ಅವರಿಗೆ ಧಮ್‌ ಇಲ್ಲ. ತಾಕತ್ತೂ ಇಲ್ಲ. ಇಂತಹ ಹೇಡಿ ಸರ್ಕಾರ ರಾಜ್ಯದಲ್ಲಿ ಮತ್ತೆ ಬರಬಾರದು: ಸಿದ್ದರಾಮಯ್ಯ

ಬೆಳಗಾವಿ(ಜ.13): ಬಿಜೆಪಿ ಎಂದರೆ ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ. ವಚನ ಭ್ರಷ್ಟಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸುಮಾರು 600 ಭರವಸೆ ನೀಡಿದ್ದರು. ಇದರಲ್ಲಿ ಕೇವಲ 60 ಭರವಸೆ ಈಡೇರಿಸಿದ್ದಾರೆ. ಇದು ಜನರಿಗೆ ಮಾಡಿದ ಮೋಸ. ವಚನ ಭ್ರಷ್ಟತೆ ಅಲ್ವಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಇಲ್ಲಿನ ಆಟೋ ನಗರದ ಅಂಜುಮನ್‌ ಸಂಸ್ಥೆಯ ಮೈದಾನದಲ್ಲಿ ಬುಧವಾರ ಪ್ರಜಾಧ್ವನಿ ಯಾತ್ರೆಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ರೈತರ ಸಾಲಮನ್ನಾ ಮಾಡುವುದಾಗಿಯೂ ಹೇಳಿದ್ದ ಬಿಜೆಪಿ ಒಂದು ರುಪಾಯಿಯಾದರೂ ರೈತರ ಸಾಲ ಮನ್ನಾ ಮಾಡಿದರಾ ಬಸವರಾಜ ಬೊಮ್ಮಾಯಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯದ ನೀರಾವರಿ ಯೋಜನೆಗೆ ಬಗ್ಗೆ ದೊಡ್ಡ ದೊಡ್ಡ ಭರವಸೆ ಕೊಟ್ಟು ಜನರ ಮನಸಿನಲ್ಲಿ ಆಸೆ ಹುಟ್ಟಿಸಿ ಜನರಿಗೆ ಮೋಸ ಮಾಡಿರುವುದು ಬಿಜೆಪಿ ಎಂದು ಹರಿಹಾಯ್ದ ಅವರು, ರಾಜ್ಯದ 25 ಸಂಸದರು ಇದ್ದಾರೆ. 15ನೇ ಹಣಕಾಸು ಆಯೋಗದ ಯೋಜನೆಯ 5495 ಕೋಟಿ ಅನುದಾನ ಕೇಳಲು ಅವರಿಗೆ ಧಮ್‌ ಇಲ್ಲ. ತಾಕತ್ತೂ ಇಲ್ಲ. ಇಂತಹ ಹೇಡಿ ಸರ್ಕಾರ ರಾಜ್ಯದಲ್ಲಿ ಮತ್ತೆ ಬರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್: ರಾಜ್ಯಕ್ಕೆ ಬರಲಿದ್ದಾರೆ ಪಂಚ ಪಾಂಡವರು

ಪ್ರಧಾನಿ ಮುಂದೆ ಮಾತಾಡಲು ಹೆದರುವ ಬಿಜೆಪಿಗರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಎತ್ತಿದರೆ ಧಮ್‌ ಇದ್ದರೆ, ತಾಕತ್ತಿದ್ದರೆ ಎನ್ನುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಗಡಗಡ ನಡಗುತ್ತಾರೆ ಎಂದ ಅವರು, ಪ್ರಜಾಧ್ವನಿ ಕಾಂಗ್ರೆಸ್‌ ಧ್ವನಿ ಅಲ್ಲ. ಇಡೀ ಕರ್ನಾಟಕದ ಏಳು ಕೋಟಿ ಜನರ ಧ್ವನಿ. ನಿಮ್ಮ ಸಲಹೆ ಕೇಳಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಸರ್ಕಾರ ಎಂದು ಹೆಸರು ಬಂದಿದೆ. ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎಸ್‌. ಈಶ್ವರಪ್ಪನಿಗೆ ಬಿ ರಿಪೋರ್ಚ್‌ ಕೊಟ್ಟಿದೆ. ಅಲ್ಲದೆ, ಆಪರೇಷನ್‌ ಕಮಲಕ್ಕೊಳಗಾದ ಬೆಳಗಾವಿಯ ಒಬ್ಬ ಸಚಿವನಾಗಿದ್ದವನು ಮಂಚದ ಮೇಲೆ ಸಿಕ್ಕ. ಅವನಿಗೂ ಬಿ ರಿಪೋರ್ಚ್‌ ಕೊಟ್ಟಿದೆ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಮಾತನಾಡಿ, ಕೆಪಿಸಿಸಿಯಿಂದ ಆಯೋಜಿಸಲಾಗಿರುವ ಪ್ರಜಾಧ್ವನಿ ಯಾತ್ರೆ ಐತಿಹಾಸಿಕ ನಿರ್ಣಯವಾಗಲಿದೆ. ಇದು ಕರ್ನಾಟಕ ಜನರ ಧ್ವನಿ ಇದೆ. ರಾಜ್ಯದ ರೈತರ, ಯುವ ಸಮುದಾಯ, ಮಹಿಳೆ, ಪರಿಶಿಷ್ಟಜಾತಿ ಪರಿಶಿಷ್ಟಪಂಗಡ ಸೇರಿದಂತೆ ಎಲ್ಲ ಸಮುದಾಯದ ಜನರ ಧ್ವನಿಯನ್ನು ಜನರ ಮುಂದೆ ಕಾಂಗ್ರೆಸ್‌ ನಾಯಕರು ಎತ್ತಿದ್ದಾರೆ. ದೇಶದ ಅತ್ಯಂತ ಭ್ರಷ್ಟಸರ್ಕಾರ ಎಂದರೆ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ಎಂದು ದೂರಿದರು.

ಹಿಂದೂಸ್ತಾನದ ದುರ್ಬಲವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ಅಮಿತ್‌ ಶಾ ಮುಂದೆ ಕರ್ನಾಟಕದ ಒಂದು ಇಂಚೂ ಮಹಾರಾಷ್ಟ್ರಕ್ಕೆ? ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ಮುಖ್ಯಮಂತ್ರಿ ಬೊಮ್ಮಾಯಿಗೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜ್ಯದ ಹಿತ ಬೇಕಾಗಿಲ್ಲ. ಮುಖ್ಯಮಂತ್ರಿ ಕುರ್ಚಿ ಹಿತ ಮುಖ್ಯವಾಗಿದೆ ಎಂದು ಹರಿಹಾಯ್ದರು.

ಕೋಲಾರದಿಂದ ಸ್ಪರ್ಧೆ ಫಿಕ್ಸ್ ಬೆನ್ನಲ್ಲೇ ಸಿದ್ದು ಮನೆ ದೇವರ ಭವಿಷ್ಯ: ಎರಡು ಕ್ಷೇತ್ರಗಳಲ್ಲಿ ನಿಲ್ಲುವಂತೆ ಸೂಚನೆ!

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಪ್ರಜಾಧ್ವನಿ ಯಾತ್ರೆ ಇದು. ಜನರ ಧ್ವನಿ. ಕೊರೋನಾ ಸಂದರ್ಭದಲ್ಲಿ ಸರ್ಕಾರ ಮಾಡದ ಕೆಲಸವನ್ನು ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಮಾಡಿದೆ. ರಾಜ್ಯದಲ್ಲಿ ಒಳ್ಳೆಯ ಸರಕಾರ ಬರಬೇಕಾದರೆ ಎಲ್ಲರ ಬೆಂಬಲ ಅಗತ್ಯವಾಗಿದೆ. ಬೆಳಗಾವಿಯಲ್ಲಿ ನೂರು ಪ್ರತಿಶತ ಭ್ರಷ್ಟಾಚಾರ ಬಗ್ಗೆ ಯಾರೂ ಬೆಳಕು ಚೆಲ್ಲುತ್ತಿಲ್ಲ. ಅದನ್ನು ಮುಂಬರುವ ದಿನಗಳಲ್ಲಿ ಜನರ ಮುಂದೆ ತರುವ ಕೆಲಸ ಮಾಡುತ್ತೇವೆ. ಬೆಳಗಾವಿ ನಗರಾಭಿವೃದ್ಧಿ ಇಲಾಖೆ, ಸ್ಮಾರ್ಚ್‌ಸಿಟಿಯಲ್ಲಿ ಸಾಕಷ್ಟುಭ್ರಷ್ಟಾಚಾರ ನಡೆದಿದೆ. ಅದು ಬೆಳಗಾವಿ ದಕ್ಷಿಣದಿಂದ ನಡೆಸಬೇಕೋ ಉತ್ತರ ಮತಕ್ಷೇತ್ರದಿಂದ ನಡೆಸಬೇಕೋ ಎಂದು ತಿಳಿಯುತ್ತಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಬಸವರಾಜ ರಾಯರಡ್ಡಿ, ಡಿ.ಬಿ.ಇನಾಮದಾರ, ವಿನಯ ಕುಲಕರ್ಣಿ, ಶಾಸಕರಾದ ಲಕ್ಷ್ಮೇ ಹೆಬ್ಬಾಳ್ಕರ, ಮಹಾಂತೇಶಕೌಜಲಗಿ, ಚನ್ನರಾಜ ಹಟ್ಟಿಹೊಳಿ, ನಾಗರಾಜ ಯಾವಗಲ, ಮಾಜಿ ಶಾಸಕ ಫಿರೋಜ್‌ ಸೇಠ್‌, ಬೆಳಗಾವಿ ಕಾಂಗ್ರೆಸ್‌ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರ ಅಧ್ಯಕ್ಷ ರಾಜು ಸೇಠ್‌ ಸೇರಿದಂತೆ ?ಇನ್ನಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌